2020ರ ಕೆರಿಬಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಕೆರಿಬಿಯನ್ ನಾಡಲ್ಲಿ ಕ್ರಿಕೆಟ್ ಕಲವರ ಶುರುವಾಗಲಿದೆ. ಮೊದಲ ದಿನ ಎರಡು ಪಂದ್ಯಗಳು ನಡೆಯಲಿದ್ದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ಹಾಗೂ ಕಳೆದ ಬಾರಿಯ ರನ್ನರ್ ಅಪ್ ತಂಡ ಗಯಾನ ವಾರಿಯರ್ಸ್ ಕಾದಾಟವನ್ನು ನಡೆಸಲಿವೆ. ಎರಡನೇ ಪಂದ್ಯ ಕಳೆದ ಬಾರಿಯ ಚಾಂಪಿಯನ್ ತಂಡ ಹಾಗೂ ಬಾರ್ಬೇಡೊಸ್ ಟ್ರೈಡೆಂಟ್ಸ್ ಮತ್ತು ಸೇಂಟ್ ಕಿಟ್ಸ್ ಅಂಡ್ ನೆವೀಸ್ ಪೇಟ್ರಿಯಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
7.30ಕ್ಕೆ ಪಂದ್ಯದ ಆರಂಭ
ಸಿಪಿಎಲ್ ಉದ್ಘಾಟನಾ ಪಂದ್ಯ ಭಾರತೀಯ ಕಾಲಮಾನ 7:30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯ ಮಾತ್ರ ಭಾರತೀಯ ಅಭಿಮಾನಿಗಳಿಗೆ ಪೂರಕವಾಗಿಲ್ಲ. ನಸುಕಿನ ಜಾವ 3 ಗಂಟೆಗೆ ಎರಡನೇ ಪಂದ್ಯ ಆರಂಭವಾಗಲಿದೆ.
ಸಿಪಿಎಲ್ ಬರೋಬ್ಬರಿ 100 ದೇಶದಲ್ಲಿ ನೇರಪ್ರಸಾರವಾಗಲಿದೆ. ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಟಿವಿಯಲ್ಲಿ ವೀಕ್ಷಿಸುವ ಭಾರತೀಯ ಅಭಿಮಾನಿಗಳು ಸ್ಟಾರ್ ನೆಟ್ವರ್ಕ್ನಲ್ಲಿ ವೀಕ್ಷಿಸಬಹುದಾಗಿದೆ.