ಶಾಸಕರಿಗೂ ನಂಬರ್ ಪ್ಲೇಟ್ ರೂಲ್ಸ್ – ವಾಹನಗಳ ಮೇಲೆ ಅನಧಿಕೃತವಾಗಿ ಹೆಸರು, ಚಿಹ್ನೆ / ಲಾಂಛನ ಇರುವಂತಿಲ್ಲ..!
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಹೊರಡಿಸಿದ ಲಘು ಪ್ರಕಟೆಣೆಯಿಂದಾಗಿ ಶಾಸಕರಿಗೂ ಶಾಕ್ ಆಗಿದೆ. ಹೌದು ವಿಧಾನ ಪರಿಷತ್ ತನ್ನ ಸದಸ್ಯರಿಗೆ ಹೊರಡಿಸಿರುವ ಈ ಪ್ರಕಟಣೆಯಲ್ಲಿ ಸದಸ್ಯರು ತಮ್ಮ ಖಾಸಗಿ ವಾಹನಗಳ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆ/ ಲಾಂಛನ ಹಾಕಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು. ಹಾಗೂ ಇನ್ನು ಮುಂದೆ ಅನಧಿಕೃತ ಚಿಹ್ನೆ, ಫಲಕ, ಹೆಸರುಗಳನ್ನು ನೋಂದಣಿ ಫಲಕದ ಮೇಲೆ ಹಾಕಿಕೊಳ್ಳಬಾರದೆಂದು ಸಂದೇಶ ರವಾನನೆ ಮಾಡಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹನಗಳ ನೋಂದಣಿ ಫಲಕದ ಮೇಲೆ ಅನಧಿಕೃತವಾಗಿ ಹೆಸರು, ಚಿಹ್ನೆ/ಲಾಂಛನ ಹಾಗೂ ಇತರೆ ಸಂಘ-ಸಂಸ್ಥೆಗಳ ಹೆಸರು ಹಾಕಿಕೊಳ್ಳುವುದು ಕಾನೂನು ಬಾಹಿರ ಎಂದು ಪರಿಗಣಿಸಲಾಗಿತ್ತು. ಅಂತಹ ಫಲಕಗಳನ್ನು ತೆರವುಗೊಳಿಸುವಂತೆ ಸಾರಿಗೆ ಇಲಾಖೆ ಪ್ರಕಟಣೆ ನೀಡಿತ್ತು. ಇದೀಗ ಈ ಸಾಲಿಗೆ ವಿಧಾನಪರಿಷತ್ ಸದಸ್ಯರು ಸೇರ್ಪಡೆಯಾಗಿದ್ದಾರೆ.
ರಾಜಸ್ಥಾನದಲ್ಲಿ ಭಾರತೀಯ ಸೇನೆ ನಡೆಸಿದ ದೇಶೀ ನಿರ್ಮಿತ ಕ್ಷಿಪಣಿಯ ಪರೀಕ್ಷೆ ಯಶಸ್ವಿ..!
ಹುಚ್ಚಾಟ ಮುಂದುವರೆಸಿದ ಕಿಮ್ ಜಾಂಗ್ ಉನ್ – ಮತ್ತೊಂದು ಕ್ಷಿಪಣಿ ಪರೀಕ್ಷೆ..!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ – 22 ಕಚ್ಚಾ ಬಾಂಬ್ ಪತ್ತೆ..!
ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ – ಮೋದಿ ಜನರಿಗೆ ಕೊಟ್ಟ ಸಂದೇಶವೇನು…?