ಚಿಲ್ಲರೆ ಹಣಕ್ಕಾಗಿ ಬಾರ್ ಕ್ಯಾಶಿಯರ್ ನ ಕೊಲೆ ಮಾಡಿದ ಯುವಕರು… 

1 min read

ಚಿಲ್ಲರೆ ಹಣಕ್ಕಾಗಿ ಬಾರ್ ಕ್ಯಾಶಿಯರ್ ನ ಕೊಲೆ ಮಾಡಿದ ಯುವಕರು…

ಚಿಲ್ಲರೆ ಹಣಕ್ಕಾಗಿ ಬಾರ್ ಕ್ಯಾಶಿಯರ್ ನ್ನ ಕೊಲೆ ಮಾಡಿರುವ  ಘಟನೆ  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಘಟನೆ ನಡೆದಿದೆ.  ಯಶ್‍ಪಾಲ್ (28) ಮೃತ ದುರ್ದೈವಿ.

 ಯಗಾದಿ ಹಬ್ಬದ ಪ್ರಯುಕ್ತ  ಪ್ರವಾಸಿತಾಣ ಅಯ್ಯನಕೆರೆಗೆ ಹೋಗಿ ಬಂದ ಆರು ಜನ ಯುವಕರ ತಂಡ ಬಿಯರ್ ಖರೀದಿ ವೇಳೆ ಚಿಲ್ಲರೆ ಹಣಕ್ಕಾಗಿ ಯಶ್‍ಪಾಲ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ರಸ್ತೆಗೆ ಬೈಕ್ ಅಡ್ಡಲಾಗಿ ನಿಲ್ಲಿಸಿ ಗಲಾಟೆ ಮಾಡಿದ್ದಾರೆ.  ರಸ್ತೆ ಅಡ್ಡವಾಗಿ ಬೈಕ್ ನಿಲ್ಲಿಸಿದ್ದಕ್ಕೆ ಆಕ್ಷೇಪಣೆ ನಡೆಸಿದ ಯಶ್ ಪಾಲ್ ಎಂಬ ಯುವಕನನ್ನ ಯುವಕರು ಮನಬಂದಂತೆ ಥಳಿಸಿದ್ದಾರೆ.

ಡ್ಯೂಟಿ  ಮುಗಿಸಿ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹೋದ ಯಶ್‍ಪಾಲ್ ತೀವ್ರ ಎದೆ ನೋವು ಕಾಣಿಸಿಕೊಂಡಿದೆ.  ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ  ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ  ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ. ಮೃತ ಯಶ್‍ಪಾಲ್ ಮನೆಯವರು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಸಖರಾಯಪಟ್ಟಣ ಪೊಲೀಸರು ಯಶ್‍ಪಾಲ್ ಮೇಲೆ ಹಲ್ಲೆ ಮಾಡಿದ ಚಿಕ್ಕಮಗಳೂರಿನ ನರಿಗುಡ್ಡನಹಳ್ಳಿ ರಘು, ಹೌಸಿಂಗ್ ಬೋರ್ಡ್ ಪ್ರಕಾಶ್, ಕಲ್ಯಾಣ ನಗರದ ಯಶೀಶ್, ತರೀಕೆರೆಯ ಶ್ರೀಧರ್, ಮಂಜುನಾಥ್, ಬೀರೂರು-ಅಜ್ಜಂಪುರ ರಸ್ತೆಯ ಸಂಜಯ್ ಎಂಬ ಆರು ಆರೋಪಿಗಳನ್ನ ಬಂಧಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd