Cat | ಎರಡು ತಲೆಯ ಬೆಕ್ಕಿಗೆ ಜನ್ಮ..
ಭಾನುವಾರ ಥಾಯ್ಲೆಂಡ್ ನಲ್ಲಿ ಎರಡು ತಲೆಗಳ ಬೆಕ್ಕು ಜನಸಿದೆ.
ಸಾಧಾರಣವಾಗಿ ಇಂತಹ ಬೆಕ್ಕುಗಳು ಕೇವಲ ಒಂದೆರಡು ಗಂಟೆಗಳು ಮಾತ್ರ ಬದುಕುತ್ತವೆ.
ಆದ್ರೆ ಈ ಬೆಕ್ಕಿನ ಮರಿ ಈಗಲೂ ಜೀವಂತವಾಗಿದ್ದು, ಎರಡೂ ಬಾಯಿಯಿಂದ ಹಾಲು ಕುಡಿಯುತ್ತಿದೆ.
ಈ ಬೆಕ್ಕಿಗೆ ತುಂಗ್ ಗ್ರೆನ್ (ಬೆಳ್ಳಿ ಚೀಲ) ಮತ್ತು ತುಂಗ್ ಟಾಂಗ್ (ಚಿನ್ನದ ಚೀಲ) ಎಂದು ಹೆಸರಿಡಲಾಗಿದೆ. ಪ್ರತಿ ತಲೆಗೂ ಒಂದು ಹೆಸರು!
ಈ ಬೆಕ್ಕಿನ ತಾಯಿ ಮೊದಲ ಸಾಮಾನ್ಯ ಬೆಕ್ಕಿಗೆ ಜನ್ಮ ನೀಡಿದೆ.
ಆ ನಂತರ ಮತ್ತೊಂದು ಬೆಕ್ಕಿಗೆ ಜನ್ಮ ನೀಡಲು ಪರದಾಡುವಾಗ ಕೂಡಲೇ ಪಶುವೈದ್ಯರ ಬಳಿಗೆ ತೆಗೆದುಕೊಂಡು ಹೋಗಲಾಗಿದೆ.
ಅಲ್ಲಿ ಸಿಸೇರಿಯನ್ ಮಾಡಿ ಈ ಅಪರೂಪದ ಎರಡು ತಲೆಯ ಬೆಕ್ಕನ್ನು ಹೊರ ತೆಗೆಯಲಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಇದಕ್ಕೂ ಮೊದಲು 1999ರಲ್ಲಿ ಅಮೆರಿಕಾದಲ್ಲಿ ಇಂತಹ ಎರಡು ತಲೆಗಳ ಬೆಕ್ಕು ಜನಿಸಿತ್ತು.
ಅದರ ಹೆಸರು ಫ್ರಾಂಕ್ ಅಂಡ್ ಲೂಯಿ ಈ ಬೆಕ್ಕು 15 ವರ್ಷಗಳ ಕಾಲ ಬದುಕಿ ಅತ್ಯಧಿಕ ಕಾಲ ಜೀವಿಸಿತ್ತು.
ಈ ಬೆಕ್ಕು 2012ರಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿತ್ತು. ಇದು ಮೂರು ಕಣ್ಣುಗಳಿಂದ ಹುಟ್ಟಿದ್ದು ವಿಶೇಷ.