ಮಡಿಕೇರಿ: ಕೊಡಗು ಜಿಲ್ಲೆ ಸೋಮವಾರಪೇಟೆ ಸಮೀಪದ ಐಗೂರು ಗ್ರಾಮದ ಟಾಟಾ ಕಾಫಿ ಎಸ್ಟೇಟ್‍ನಲ್ಲಿ 20 ಜಾನುವಾರುಗಳ ಹತ್ಯೆಗೆ ಸಂಬಂಧಿಸಿದಂತೆ ತೋಟದ ವ್ಯವಸ್ಥಾಪಕ ಮತ್ತು ಸಿಬ್ಬಂದಿಗಳ ವಿಚಾರಣೆ ತೀವ್ರಗೊಂಡಿದೆ.
ಜಾನುವಾರುಗಳ ಹತ್ಯೆಯಲ್ಲಿ ಟಾಟಾ ಕಾಫಿ ಸಂಸ್ಥೆಯ ಸಿಬ್ಬಂದಿಗಳಾದ ದರ್ಶನ, ಗೋವಿಂದ, ಶ್ರೀನಿವಾಸ, ಮುತ್ತಪ್ಪ
ಸೇರಿದಂತೆ ಇತರರು ಶಾಮೀಲಾಗಿರುವ ಬಗ್ಗೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಟೇಟ್‍ನ ಮ್ಯಾನೇಜರ್ ಮತ್ತು ಇತರೆ ಸಿಬ್ಬಂಧಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ಸುತ್ತಮುತ್ತಲಿವ ಕೆಲವು ಗ್ರಾಮಸ್ಥರು ಸಹಾ ನಾಪತ್ತೆಯಾಗಿರುವ ಜಾನುವಾರುಗಳನ್ನು ಎಸ್ಟೇಟ್‍ನಲ್ಲೇ ಹತ್ಯೆ ನಡೆಸಿರಬಹುದೆಂದು ಆರೋಪಿಸಿ ದೂರು ನೀಡಲಾಗಿದೆ.
ಈ ನಡುವೆ ಎಸ್ಟೇಟ್ ಮ್ಯಾನೇಜರ್ ಸೂಚನೆಯಂತೆ ಸಿಬ್ಬಂದಿಗಳು ಜಾನುವಾರುಗಳಿಗೆ ವಿಷವುಣಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.








