ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ನಿವಾಸದ ಮೇಲೆ CBI ದಾಳಿ….
ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರ ಅನೇಕ ವಸತಿ ಮತ್ತು ಕಚೇರಿಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡುಸುತ್ತಿದೆ. ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿರುದ್ಧದ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ, ಚೆನ್ನೈ, ಒಡಿಶಾ, ಪಂಜಾಬ್ ಮತ್ತು ಕರ್ನಾಟಕದ ಒಂಬತ್ತು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಸದ್ಯ ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ದೇಶದ 9 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳ ಶೋಧ ಕಾರ್ಯ ನಡೆಯುತ್ತಿದೆ. ಕಾರ್ತಿ ಚಿದಂಬರಂ ಮಾಜಿ ಕೇಂದ್ರ ಸಚಿವ ಹಾಗು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರ ಪುತ್ರ. ದಾಳಿಯ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಅವರ ನಿವಾಸದೆದುರು ಪೊಲೀಸ್ ಭದ್ರತೆ ಕಂಡುಬಂತು.
ಈ ಕುರಿತು ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ನನ್ನ ಮೇಲೆ ಅದೆಷ್ಟು ಬಾರಿ ದಾಳಿ?, ನಾನು ಸಂಖ್ಯೆಯನ್ನೇ ಮರೆತುಬಿಟ್ಟಿದ್ದೇನೆ. ಬಹುಶ: ಇದೊಂದು ದಾಖಲೆ ಎಂದು ಬರೆದುಕೊಂಡಿದ್ದಾರೆ.
CBI raids Karti Chidambaram for facilitating visas to Chinese: Sources








