CBSE Boards 2023 : 10, 12ನೇ ತರಗತಿ ಪರೀಕ್ಷೆ ನಡೆಸಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ CBSE….
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನ ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸಿಬಿಎಸ್ಇ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಬೋರ್ಡ್ ಪರೀಕ್ಷೆಗಳನ್ನ ನಡೆಸುವ ಎಲ್ಲಾ ಶಾಲೆಗಳು ಉತ್ತರ ಪತ್ರಿಕೆಗಳನ್ನ ಅಂಚೆ ಸೇವೆಗಳ ಮೂಲಕ ಪ್ರಾದೇಶಿಕ ಕಚೇರಿಗೆ ಕಳುಹಿಸಿದಾಗ ಪ್ಲಾಸ್ಟಿಕ್ ಚೀಲಗಳ ಮೂಲಕ ಕಳುಹಿಸಬೇಕು. ಆದರೆ ಉತ್ತರ ಪತ್ರಿಕೆಗಳನ್ನ ವೈಯಕ್ತಿಕವಾಗಿ ಅಥವಾ ನಗರ ಸಂಯೋಜಕರ ಸಹಾಯದಿಂದ ಪ್ರಾದೇಶಿಕ ಕಚೇರಿಗೆ ತಲುಪಿಸಿದರೆ ಪ್ಲಾಸ್ಟಿಕ್ ಚೀಲಗಳನ್ನ ಬಳಸುವ ಅವಶ್ಯಕಥೆ ಇಲ್ಲ ಎಂದು ಬೋರ್ಡ್ ತಿಳಿಸಿದೆ.
ಸಿಬಿಎಸ್ಇ ಅಥವಾ ಬೋರ್ಡ್ ಪರೀಕ್ಷೆಗಳ ನಿರ್ವಹಣೆಗೆ ಸಂಬಂಧಿಸಿದ ಯಾವುದೇ ಇತರ ಅಧಿಕಾರಿಗಳೊಂದಿಗೆ ಸಂವಹನಕ್ಕಾಗಿ ಪರೀಕ್ಷೆಯ ಸಮಯದಲ್ಲಿ ಯಾವುದೇ ವಾಟ್ಸಾಪ್ ಸಂದೇಶವನ್ನು ಕಳುಹಿಸಬಾರದು ಎಂದು ಮಂಡಳಿಯು ಪುನರುಚ್ಚರಿಸಿದೆ. ಬೋರ್ಡ್ ಪರೀಕ್ಷೆಯ ಕುರಿತು ಯಾವುದೇ ಅನುಮಾನವಿದ್ದಲ್ಲಿ ಸಿಬಿಎಸ್ಇ ನೀಡಿರುವ ಅಧಿಕೃತ ಲಿಂಕ್ ಬಳಸಿ ಆನ್ಲೈನ್ನಲ್ಲಿ ಸಲ್ಲಿಸಬೇಕು ಎಂದು ಮಂಡಳಿಯು ಸೂಚನೆ ನೀಡಿದೆ
CBSE 10 ಮತ್ತು 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಂದು ಪ್ರಾರಂಭವಾಗಿವೆ. 10 ನೇ ತರಗತಿಗಳಿಗೆ ಮಾರ್ಚ್ 21 ರಂದು ಮತ್ತು 12 ನೇ ತರಗತಿಗೆ ಏಪ್ರಿಲ್ 5 ರಂದು ಪರೀಕ್ಷೆಗಳು ಮುಕ್ತಾಯಗೊಳ್ಳಲಿದೆ.
CBSE Boards 2023: CBSE has released new guidelines for conducting class 10, 12 exams….