ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರವಾಗಿ ಸಿಸಿಬಿ ವಿಚಾರಣೆಗೆ ಹಾಜರಾಗಲು ನಟಿ ರಾಗಿಣಿ ದ್ವಿವೇದಿ ಅನಾರೋಗ್ಯದ ನೆಪ ಹೇಳಿದ್ದಾರೆ.
ನನಗೆ ಆರೋಗ್ಯ ಸಮಸ್ಯೆ ಇದೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಒಂದು ವಾರ ಕಾಲಾವಕಾಶ ನೀಡಿ ಎಂದು ವಕೀಲರ ಮೂಲಕ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಗಿಣಿ ಮನವಿಗೆ ಸಿಸಿಬಿ ಪೊಲೀಸರು ಏನು ತಿಳಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನಿನ್ನೆಯೇ ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿಗೆ ನೋಟಿಸ್ ಜಾರಿ ಮಾಡಿದ್ದರು. ಇಂದು ಬೆಳಿಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಗೆ ಬಂದು ವಿಚಾರಣೆಗೆ ಸಹಕಾರ ನೀಡುವಂತೆ ಸೂಚಿಸಿದ್ದರು.
ಈ ನಡುವೆ, ಬೆಳಿಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಬೇಕಾಗಿದ್ದ ನಟಿ ರಾಗಿಣಿ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾನು ಮನೆಯಲ್ಲಿ ಇಲ್ಲ, ಇಂದಿರಾನಗರದ ಸ್ನೇಹಿತರ ಮನೆಗೆ ಹೋಗಿದ್ದೇನೆ ಎಂದು ಸೆಕ್ಯುರಿಟಿ ಗಾರ್ಡ್ ಮೂಲಕ ಹೇಳಿಸಿದ್ದರು.
ಆದರೆ, ಬೆಳಿಗ್ಗೆ 10ಗಂಟೆ ಆದರೂ ರಾಗಿಣಿ ವಿಚಾರಣೆಗೆ ಹಾಜರಾಗಲಿಲ್ಲ. ಆನಂತರ ನಾನು ಯಲಹಂಕದ ಮನೆಯಲ್ಲೇ ಇದ್ದೇನೆ, ಸಮಯ ಬಂದಾಗ ನಾನು ಮಾತನಾಡುತ್ತೇನೆ ಎಂದು ಕೆಲಸದವರ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿ ಕಳಿಸಿದ್ದಾರೆ.
‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ
ಬಾಗಲಕೋಟೆ: ಆರ್‌ಎಸ್‌ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...








