ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಹಲವು ನಟ-ನಟಿಯರಲ್ಲಿ ನಡುಕ ಸೃಷ್ಟಿಸಿದೆ. ಇಷ್ಟು ದಿನ ಬರೀ ಹೇಳಿಕೆ, ಆರೋಪ-ಪ್ರತ್ಯಾರೋಪಗಳಿಗೆ ಸೀಮಿತವಾಗಿತ್ತು. ಇದೀಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಹಲವರಲ್ಲಿ ಢವಢವ ಶುರುವಾಗಿದೆ.
ಇದರಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಒಬ್ಬರು. ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ವಶಕ್ಕೆ ಪಡೆಯುತ್ತಿದ್ದಂತೆ ಸಂಜನಾ ಗಲ್ರಾನಿ ಫುಲ್ ಟೆನ್ಶನ್ ಆಗಿದ್ದಾರೆ.
ಬೆಂಗಳೂರಿನ ಇಂದಿರಾನಗರದ ಸಾಯಿ ತೇಜಸ್ವಿ ಅಪಾರ್ಟ್ಮೆಂಟ್ನ ಮನೆಯಲ್ಲಿರುವ ಸಂಜನಾ ಗಲ್ರಾನಿ, ನಿನ್ನೆಯಿಂದ ಆತಂಕದಲ್ಲಿರುವಂತೆ ಕಂಡು ಬರುತ್ತಿದೆ. ಸಿಸಿಬಿ ನೋಟಿಸ್ಗೆ ಹಾಜರಾಗದ ಕಾರಣ ರಾಗಿಣಿ ಮನೆ ಮೇಲೆ ದಾಳಿ ಮಾಡಿ, ಅವರನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದಂತೆ ಕ್ಷಣಕ್ಷಣದ ಮಾಹಿತಿ ಕೇಳಿ ಟೆನ್ಶನ್ ಆಗಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡುವ ವೇಳೆ ಯಾವುದೇ ಆತಂಕ ಇಲ್ಲ ಎಂದು ಸಂಜನಾ ಹೇಳಿದ್ದರೂ ಒಳಗೊಳಗೆ ತುಂಬಾ ಆತಂಕದಲ್ಲಿರುವಂತೆ ಕಂಡು ಬಂದಿದ್ದಾರೆ. ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್ ಬಂದಿಲ್ಲ, ನೋಟಿಸ್ ಬಂದರೆ ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸಂಜನಾ ಪ್ರತಿಕ್ರಿಯೆ ನೀಡಿದ್ದಾರೆ.
ಸಂಜನಾಗೆ ನಿನ್ನೆಯೇ ಸಿಸಿಬಿ ನೋಟಿಸ್ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ, ಇದುವರೆಗೂ ಯಾವುದೇ ನೋಟಿಸ್ ಜಾರಿಯಾಗಿಲ್ಲ. ನೋಟಿಸ್ ನೀಡಿದ್ರೂ ವಿಚಾರಣೆಗೆ ಹೋಗದ ರಾಗಿಣಿಗೆ ಬಂದ ಪರಿಸ್ಥಿತಿ ನನಗೂ ಬರಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡ್ದಾರೆ ಎನ್ನಲಾಗಿದೆ.
ನಾನು ಡಿಸೆಂಬರ್ನಿಂದ ಯಾವುದೇ ಪಾರ್ಟಿಗಳಿಗೆ ಹೋಗಿಲ್ಲ. ಪಾರ್ಟಿಗಳಿಗೆ ಹೋಗುವುದನ್ನು ಬಿಟ್ಟುಬಿಟ್ಟಿದ್ದೇನೆ. ಮನೆಯಲ್ಲೇ ಹೆಚ್ಚು ಇರುತ್ತೇನೆ. ರಾಹುಲ್ ಒಳ್ಳೆಯ ಹುಡುಗ. ಆತ ನನ್ನ ತಮ್ಮನ ಸಮಾನ. ಆತನಿಗೆ ರಾಖಿಯನ್ನು ಕಟ್ಟಿದ್ದೇನೆ. ರಾಹುಲ್ ಈ ಆರೋಪದಿಂದ ಬೇಗ ಹೊರಗೆ ಬರುತ್ತಾನೆ. ಪ್ರಶಾಂತ್ ಸಂಬರಗಿ ಯಾರು ಅಂತ ನನಗೆ ಗೊತ್ತಿಲ್ಲ. 2-3 ವರ್ಷಗಳಿಂದ ಆತನ ಹೆಸರು ಕೇಳಿದ್ದೇನೆ ಅಷ್ಟೇ ಎಂದು ಸಂಜನಾ ಗಲ್ರಾನಿ ತಿಳಿಸಿದ್ದಾರೆ.
ರೈಲಿನಲ್ಲಿದ್ದವರ ಮೇಲೆ ಮುಸುಕುಧಾರಿಗಳಿಂದ ಹಲ್ಲೆ; ಓರ್ವ ಸಾವು
ಬೆಳಗಾವಿ: ಮುಸುಕುಧಾರಿಗಳಿಂದ ರೈಲಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಟಿಕೆಟ್ ತೋರಿಸಿ ಎಂದಿದ್ದಕ್ಕೆ ಟಿಸಿ(Ticket Collector) ಸೇರಿದಂತೆ ಐವರ ಮೇಲೆ ಮುಸುಕುಧಾರಿಗಳು ಹಲ್ಲೆ ನಡೆಸಿದ್ದಾರೆ. ಚಾಲುಕ್ಯ...