ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸಲ್ಲಿ ರಾಗಿಣಿ, ಸಂಜನಾ ಬಳಿಕ ಸಿಸಿಬಿ ಪೊಲೀಸರು ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ. ಇದೇ ಮೊದಲ ಬಾರಿಗೆ ರಾಜಕಾರಣಿಯೊಬ್ಬರ ಪುತ್ರ, ಅದರಲ್ಲೂ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದರ್ಶನ್ ಲಮಾಣಿ ತಂದೆ ರುದ್ರಪ್ಪ ಲಮಾಣಿ, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜವಳಿ ಸಚಿವರಾಗಿದ್ದರು. ಡ್ರಗ್ಸ್ ದಂಧೆಯಲ್ಲಿ ಹಲವು ರಾಜಕಾರಣಿಗಳ ಮಕ್ಕಳ ಕೈವಾಡವಿದ್ದು, ಮೊದಲ ಬಾರಿ ರುದ್ರಪ್ಪ ಲಮಾಣಿ ಪುತ್ರ ಬಲೆಗೆ ಬಿದ್ದಿದ್ದು, ಉಳಿದ ರಾಜಕಾರಣಿಗಳ ಮಕ್ಕಳಲ್ಲಿ ನಡುಕ ಶುರುವಾಗಿದೆ.
ಗೋವಾದಲ್ಲಿ ಅಡಗಿದ್ದ ದರ್ಶನ್ ಲಮಾಣಿ..!
ಡಾರ್ಕ್ ನೆಟ್ ಮೂಲಕ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇತ್ತೀಚೆಗಷ್ಟೇ ಸುಜಯ್ ಎಂಬಾತನನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದರು. ಆತನಿಂದ 500 ಗ್ರಾಂ ಹೈಡ್ರೊ ಗಾಂಜಾ ಜಪ್ತಿ ಮಾಡಿದ್ದರು. ಈತನ ಜತೆ ದರ್ಶನ್ ಲಮಾಣಿ, ಹೇಮಂತ್ ಹಾಗೂ ಸುನೇಶ್ ಸೇರಿದಂತೆ 7 ಮಂದಿ ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದರು.
ಸುಜಯ್ ಬಂಧನವಾಗುತ್ತಿದ್ದಂತೆ 7 ಮಂದಿ ಆರೋಪಿಗಳು ಗೋವಾದ ಐಷಾರಾಮಿ ಹೋಟೆಲ್‍ನಲ್ಲಿ ತಲೆ ಮರೆಸಿಕೊಂಡಿದ್ದರು. ಆರೋಪಿಗಳ ಬಂಧನಕ್ಕಾಗಿ ಸಿಸಿಬಿ ಪೆÇಲೀಸರ ತಂಡ ಗೋವಾಕ್ಕೆ ಹೋಗಿತ್ತು. ಅಲ್ಲಿಯೇ ದರ್ಶನ್ ಲಮಾಣಿ ಸೇರಿ ಇತರರನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.
ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ, ಅವರಿಗೆ ಸಹಕಾರ ನೀಡಿದ್ದ ಆರೋಪದಡಿ ದರ್ಶನ್ ಲಮಾಣಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.
ಡಾರ್ಕ್ ನೆಟ್‍ಗಳ ಮೂಲಕ ಡ್ರಗ್ಸ್ ಖರೀದಿ..!
ದರ್ಶನ್ ಲಮಾಣಿ ಕೂಡ ಡಾರ್ಕ್ ನೆಟ್‍ಗಳ ಮೂಲಕ ವಿದೇಶಗಳಿಂದ ಡ್ರಗ್ಸ್ ತರಿಸಿಕೊಂಡು ಕರ್ನಾಟಕ, ಗೋವಾದಲ್ಲಿ ಕೋಟಿ ಕೋಟಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಡಾರ್ಕ್ ವೆಬ್‍ನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿರುವ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ಇದರ ಜಾಡು ಹಿಡಿದು ಹೊರಟಾಗ ದರ್ಶನ್ ಲಮಾಣಿ ಇರುವುದು ಪತ್ತೆಯಾಗಿತ್ತು.
ದರ್ಶನ್ ಲಮಾಣಿ ಬೆನ್ನತ್ತಿದ ಸಿಸಿಬಿ ಪೊಲೀಸರಿಗೆ ಮೊದಲು ಸುಜಯ್ ಎಂಬಾತ ಬಲೆಗೆ ಬಿದ್ದಿದ್ದ. ಆತ ನೀಡಿದ ಸುಳಿವಿನ ಮೇರೆಗೆ ಉಳಿದವರ ಬೆನ್ನುಬಿದ್ದಿದ್ದ ಸಿಸಿಬಿ ಪೊಲೀಸರು ಗೋವಾದಲ್ಲಿ ಭರ್ಜರಿ ಬೇಟೆಯಾಡಿದ್ದಾರೆ.
ಗೂಗಲ್ ಹೊರತುಪಡಿಸಿ ಕೆಲ ವಿಶೇಷ ಸಾಫ್ಟ್‍ವೇರ್‍ಗಳ ಮೂಲಕ ಡಾರ್ಕ್ ವೆಬ್‍ಸೈಟ್‍ಗಳು ಲಭ್ಯವಾಗುತ್ತವೆ. ಜಗತ್ತಿನಾದ್ಯಂತ ಡಾರ್ಕ್ ವೆಬ್‍ನ ತಾಣಗಳ ಮೂಲಕ ಡ್ರಗ್ಸ್, ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ಇತರೆ ಅನೈತಿಕ ಚಟುವಟಿಕೆ ನಡೆಸಲು ಬಳಸಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel