ಸ್ಯಾಂಡಲ್ ವುಡ್ ಗೆ ಡ್ರಗ್ ಮಾಫಿಯಾ ನಂಟು ಆರೋಪ ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ಸ್ಟಾರ್ ಜೋಡಿಗಳಾದ ಐಂದ್ರಿತಾ ಹಾಗೂ ದಿಗಂತ್ ರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರ ಮೊಬೈಲ್ ಗಳನ್ನೂ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಇನ್ನೂ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ.
ಇನ್ಸ್ ಪೆಕ್ಟರ್ ಪುನೀತ್ , ಎಸಿಪಿ ಗೌತಮ್ ದಿಗಂತ್ ರ ವಿಚಾರಣೆ ನಡೆಸುತ್ತಿದ್ದಾರೆ. ಅಂಜುಮಾಲಾ ಸಮ್ಮುಖದಲ್ಲಿ ಐಂದ್ರಿತಾ ವಿಚಾರಣೆ ನಡೆಯುತ್ತಿದೆ. ಇನ್ನೂ ಪ್ರತ್ಯೇಕ ವಿಚಾರಣೆ ಬಳಿಕ ಇಬ್ಬರನ್ನೂ ಒಟ್ಟಾಗಿ ವಿಚಾರಣೆಗೊಳಪಡಿಸಲಿದ್ದಾರೆ. ಇನ್ನೂ ವಿಚಾರಣೆಗೂ ಮುನ್ನ ಇಬ್ಬರ ಐಡಿ ಕಾರ್ಡ್ ಪಡೆದು ಸಹಿ ಪಡೆಯಲಾಗಿದೆ.