ಸಿಡಿ ಕೇಸ್ : ದೂರು ವಾಪಸ್ ಪಡೆಯಲು ದಿನೇಶ್ ಕಲ್ಲಹಳ್ಳಿ ಬೇಡಿಕೆ : ಕಾನೂನಿನ ಮೊರೆ ಹೋದ ಪೊಲೀಸರು..!
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಇಡೀ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೀಗ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನನ್ನ ದೂರು ವಾಪಾಸ್ ಕೊಡಿ ಎಂದು ಬೇಡಿಕೆಯಿಟ್ಟಿದ್ದು, ಪ್ರಕರಣ ದಾಖಲು ಕುರಿತು ಪೊಲೀಸರು ಕಾನೂನಿನ ಮೊರೆ ಹೋಗಿದ್ದಾರೆ.
ಇ – ಮೇಲ್ ಹ್ಯಾಕ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್..!
ಇನ್ನೂ ಮೊದಲಿಗೆ ದೂರು ವಾಪಾಸ್ ಪಡೆಯಲು ದಿನೇಶ್ ತಮ್ಮಪರ ವಕೀಲರನ್ನು ಕಳುಹಿಸಿದ್ದರು. ಬಳಿಕ ನಿನ್ನೆ ಸಂಜೆ ಖುದ್ದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಸುಮಾರು 1 ಗಂಟೆಗಳ ಕಾಲ ಈ ಕುರಿತಾಗಿ ಇನ್ಸ್ ಪೆಕ್ಟರ್ ಜೊತೆ ಮಾತುಕತೆ ನಡೆಸಿದ್ದರು. ಇನ್ನೂ ಈ ಪ್ರಕರಣ ತುಂಬಾ ಗಂಭೀರವಾಗಿರುವ ಹಿನ್ನೆಲೆ ಪೊಲೀಸರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಇಂದು ಮತ್ತೆ ಠಾಣೆಗೆ ಹಾಜರಾಗುವಂತೆ ದಿನೇಶ್ ಕಲ್ಲಹಳ್ಳಿಗೆ ಪೊಲೀಸರು ತಿಳಿಸಿದ್ದಾರೆ. ಇನ್ನೂ ಈ ಕೇಸ್ ನಿಂದ ಮಾನಸಿಕ ಕಿರುಕುಳ ಆಗ್ತಿದೆ ಎಂದು ಪೊಲೀಸರ ಮುಂದೆ ದಿನೇಶ್ ದುಂಬಾಲು ಹೇಳಿಕೊಂಡಿದ್ದು, ಮಾನಸಿಕ ನೆಮ್ಮದಿಗಾಗಿ ದೂರು ವಾಪಾಸ್ ಪಡೆಯುತ್ತೇನೆ ಎಂದು ಹೇಳಿಕೊಂಡಿದ್ದರು.
ಮಲೆ ಮಹದೇಶ್ವರ ಸನ್ನಿಧಾನದಲ್ಲಿ ಶಿವರಾತ್ರಿ ಜಾಗರಣೆ ರಥೋತ್ಸವ ಹೊರಗಿನ ಭಕ್ತರಿಗಿಲ್ಲ ಪ್ರವೇಶ..!
ಬಿಜೆಪಿ ಇದೆನಾ ನಿಮ್ಮ ಅಚ್ಚೇ ದಿನ್ : ಬೆಲೆ ಏರಿಕೆಗೆ ಹುಲಿಯಾ ಗರಂ








