CD case ಸಿಡಿ ಪ್ರಕರಣ : ಸಂತ್ರಸ್ತೆಯ ಪೋಷಕರ ಮನೆಗೆ ಹೈ ಸೆಕ್ಯೂರಿಟಿ
ಬೆಳಗಾವಿ : ಸಿಡಿ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಸಿಡಿಯಲ್ಲಿರುವ ಎನ್ನಲಾಗಿರುವ ಯುವತಿಯ ಪೋಷಕರು ವಾಸವಿರುವ ಕುವೆಂಪು ನಗರದ ಬಾಡಿಗೆ ಮನೆಗೆ ಎಪಿಎಂಸಿ ಠಾಣೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.
ಸಂತ್ರಸ್ತೆಯ ಯುವತಿಯ ಪೋಷಕರ ಮನೆ ಮುಂದೆ ಓರ್ವ ಎಎಸ್‍ಐ, ಓರ್ವ ಮಹಿಳಾ ಕಾನ್ ಸ್ಟೇಬಲ್, ಇಬ್ಬರು ಹೆಡ್ ಕಾನ್ ಸ್ಟೇಬಲ್, ಇಬ್ಬರು ಕಾನ್ ಸ್ಟೇಬಲ್ ಗಳನ್ನು ನಿಯೋಜಿಸಲಾಗಿದೆ.
ಮನೆ ಎದುರು ಒಂದು ಪೊಲೀಸ್ ವಾಹನ ನಿಲ್ಲಿಸಲಾಗಿದೆ. ಕುಟುಂಬದ ಭೇಟಿಗೆ ಯಾರೇ ಬಂದರೂ ಮಾಹಿತಿ ನೀಡುವಂತೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ.
