ಯಾವ ಕೇಸ್ ಬೇಕಾದ್ರೂ ಹಾಕಲಿ…ನಾನು ಎಲ್ಲದಕ್ಕೂ ರೆಡಿ : ರಮೇಶ್ ಜಾರಕಿಹೊಳಿ..!
ಬೆಂಗಳೂರು: ಸಿಡಿ ಲೇಡಿ ಇಂದು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ಅವರು, ನನ್ನ ವಿರುದ್ಧ ಯುವತಿ ಯಾವ ಕೇಸ್ ದಾಖಲಿಸುತ್ತಾರೋ ದಾಖಲಿಸಲಿ. ನಾನು ಎಲ್ಲದಕ್ಕೂ ರೆಡಿಯಾಗಿದ್ದೇನೆ. ಕಾನೂನಾತ್ಮಕವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೇ ಜಗತ್ತಿಗೇ ತನ್ನ ಬೆತ್ತಲೇ ಫೋಟೋ ಪ್ರದರ್ಶಿಸಿರುವ ಯುವತಿ ನನ್ನ ವಿರುದ್ಧ ಹೇಳಿಕೆ ನೀಡುವುದು ದೊಡ್ಡ ವಿಷಯವಲ್ಲ. ನಾನು ಏಕೆ ಇದಕ್ಕೆ ಹೆದರಬೇಕು. ಎಲ್ಲವನ್ನು ಎದುರಿಸುತ್ತೇನೆ ಎಂದಿದ್ದಾರೆ. ಇನ್ನೂ ಯುವತಿ ಕೇಸ್ ದಾಖಲಿಸುತ್ತಿರುವ ಬಗ್ಗೆ ನಾನು ವಕೀಲರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಆದರೆ ಈ ಸಂಬಂಧ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಟಾಟಾ’ ಪರ ತೀರ್ಪು ಕೊಟ್ಟ ಸುಪ್ರೀಂಕೋರ್ಟ್..!
ಮುಂಬೈ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ : ಸಾವಿನ ಸಂಖ್ಯೆ 9ಕ್ಕೆ ಏರಿಕೆ..!