‘ಟಾಟಾ’ ಪರ ತೀರ್ಪು ಕೊಟ್ಟ ಸುಪ್ರೀಂಕೋರ್ಟ್..!
ನವದೆಹಲಿ: 2016ರಲ್ಲಿ ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ವಜಾಗೊಳಿಸಿದ್ದ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಕಾನೂನು ಹೋರಾಟದಲ್ಲಿ ಬಿಲೇನಿಯರ್ ಟಾಟಾ ಸನ್ಸ್ ಗೆಲುವು ಸಾಧಿಸಿದ್ದು, ಮಿಸ್ತ್ರಿಗೆ ಮುಖಭಂಗವಾಗಿದೆ.
ಟಾಟಾ ಸನ್ಸ್ ನ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಪುನಃ ನೇಮಿಸಲು ಆದೇಶಿಸಿದ 2019 ರ ಡಿಸೆಂಬರ್ 17 ರ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ ಆದೇಶಕ್ಕೆ ಸದ್ಯ ಸುಪ್ರೀಂ ಕೋರ್ಟ್ ಅಸಮ್ಮತಿ ಸೂಚಿಸಿದೆ.
ಈ ಮೂಲಕ ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ವಜಾಗೊಳಿಸಿರುವುದು ಸಮಂಜಸವಲ್ಲ, ಪುನಃ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯೂನಲ್ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್ ಎಸ್ ಎ ಬೋಬ್ಡೆ ನೇತೃತ್ವದ ಪೀಠ, ಸೈರಸ್ ಮಿಸ್ತ್ರಿಯನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರುವ ಕ್ರಮ ಸರಿ ಎಂದಿದೆ. ಕಾನೂನು ದೃಷ್ಟಿಯಿಂದ ಟಾಟಾ ಗ್ರೂಪ್ ನಿರ್ಧಾರ ಸೂಕ್ತವಾಗಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
2012ರಲ್ಲಿ ಟಾಟಾ ಸನ್ಸ್ ನಿಂದ ರತನ್ ಟಾಟಾ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದ್ದ ನಂತರ ಸೈರಸ್ ಮಿಸ್ತ್ರಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ 4 ವರ್ಷಗಳ ನಂತರ ಮಹತ್ವದ ಬೆಳವಣಿಗೆಯಲ್ಲಿ ಮಿಸ್ತ್ರಿಯನ್ನು ಕಂಪನಿ ವಜಾಗೊಳಿಸಿತ್ತು. ಬಳಿಕ ಮಿಸ್ತ್ರಿ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಇದೀಗ ಕಾನೂನಿನ ಹೋರಾಟದಲ್ಲಿ ಸೋಲನುಭವಿಸಿದ್ದಾರೆ.
ಮುಂಬೈ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ : ಸಾವಿನ ಸಂಖ್ಯೆ 9ಕ್ಕೆ ಏರಿಕೆ..!
ಸಿಡಿ ಕೇಸ್ : ಶೀಘ್ರದಲ್ಲೇ ಸತ್ಯ ಹೊರಬರಲಿದೆ – ಬೊಮ್ಮಯಿ..!
ಬಿಎಸ್ ವೈ ನೇತೃತ್ವದ ಸರ್ಕಾರದ ವಿರುದ್ಧ ಭೀಷ್ಮ ಪ್ರತಿಜ್ಞೆ ಮಾಡಿದ ಯತ್ನಾಳ್..!
ಅತ್ತೆ ನಾದಿನಿಯನ್ನ ಕೊಂದ ಈತನಿಗೆ ಸದ್ದಾಂ ಹುಸೇನ್ ಸ್ಪೂರ್ತಿಯಂತೆ..!
BIGGBOSS 8 : ದೊಡ್ಮನೆಯಲ್ಲಿ ವಿಶ್ವನ ದರ್ಬಾರ್ ಶುರು.! ಕುದುರೆ ಅಂದ್ರೆ ಅಶ್ವ… ಕ್ಯಾಪ್ಟನ್ ಅಂದ್ರೆ ವಿಶ್ವ..!