“ನಾಡದ್ರೋಹಿ ರಮೇಶ್ ಜಾರಕಿಹೊಳಿ ಸಾಚಾ ಎಂದು ತೋರಿಸಲಾಗುತ್ತಿದೆ”
ಬೆಂಗಳೂರು : ನಾಡದ್ರೋಹಿಯಾಗಿರುವ ರಮೇಶ್ ಜಾರಕಿಹೊಳಿಗೆ ಸಾಚಾ ಎಂದು ತೋರಿಸಲಾಗುತ್ತಿದೆ. ಸಂತ್ರಸ್ತೆಗೆ ನ್ಯಾಯ ದೊರಕಿಸದೆ. ಆರೋಪಿತರ ಬಿಂಬಿಸಲಾಗುತ್ತಿದೆ ಎಂದು ಸಿಡಿ ಪ್ರಕರಣದ ಕಿಂಗ್ ಪಿನ್ ಒನ್ ಎಂದು ಬಿಂಬಿತವಾಗುತ್ತಿರುವ ನರೇಶ್ ಅಭಿಪ್ರಾಯಪಟ್ಟಿದ್ದಾರೆ.
ಸಿಡಿ ವಿಚಾರವಾಗಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಈ ವಿಚಾರವಾಗಿ ನನ್ನನ್ನು ಸುಖಾಸುಮ್ಮನೆ ಸೇರಿಸಲಾಗುತ್ತಿದೆ. ಆ ಯುವತಿ ನನಗೆ ಕರೆ ಮಾಡಿ ಈ ರೀತಿ ನನ್ನ ಜೊತೆ ತೊಂದರೆಯಾಗಿದೆ ಅಂತ ಹೇಳಿಕೊಂಡಿದ್ದಳು. ಹಾಗಾಗಿ ಆ ವಿಡಿಯೋ ತಗೊಂಡು ಬನ್ನಿ ಇದಕ್ಕೆ ಏನಾದರೂ ನ್ಯಾಯ ಕೊಡಿಸೋಣ ಎಂದಿದ್ದೆ. ಈ ಕೇಸಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನನ್ನದು ಎಳ್ಳಷ್ಟೂ ಪಾತ್ರವಿಲ್ಲ. ನಾನು ಒಬ್ಬ ಪತ್ರಕರ್ತ ಹಾಗಾಗಿ ಅವಳ ಜತೆ ಸಂಪರ್ಕದಲ್ಲಿದ್ದೆ. ಅದು ಹೊರತುಪಡಿಸಿ ಯಾವುದೇ ರೀತಿಯಲ್ಲಿ ಬೇರೆ ಉದ್ದೇಶ ಇಲ್ಲ ಎಂದು ಹೇಳಿದ್ರು.
ಇನ್ನ ವ್ಯವಸ್ಥಿತವಾಗಿ ನಮ್ಮನ್ನ ತಗಲಾಕುವ ಕೆಲಸ ಮಾಡ್ತಾಯಿದ್ದಾರೆ. ತನಿಖಾಧಿಕಾರಿಗಳ ಮುಂದೆ ಹಾಜರಾಗದಿರಲು ಕಾರಣ ನನ್ನನ್ನು ವ್ಯವಸ್ಥಿತವಾಗಿ ತಗಲಾಕುವ ಷಡ್ಯಂತ್ರ ನಡೆಯುತ್ತಿದೆ. ರಮೇಶ್ ಜಾರಕಿಹೊಳಿಗೆ ವಿಕ್ಟಿಮ್ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆ ಹೆಣ್ಣುಮಗುವಿಗೆ ಸಂವಿಧಾನ ಬದ್ಧವಾಗಿ ನ್ಯಾಯ ಕೊಡಿಸುವ ಬದಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಇನ್ನು 5 ದಿನಗಳಲ್ಲಿ ನಾನು ತನಿಖಾಧಿಕಾರಿಗಳ ಮುಂದೆ ಹಾಜರಾಗುವೆ. ಈಗ ನಾನು ಅಲ್ಲಿಗೆ ಬಂದರೆ ವ್ಯವಸ್ಥಿತವಾಗಿ ನನ್ನನ್ನು ಅಪರಾಧಿ ಎಂದು ಪರಿಗಣಿಸುತ್ತಾರೆ. ನಾನು ಯಾವುದೇ ಹಣ ಪಡೆದಿಲ್ಲ. 5 ಕೋಟಿ 100ಕೋಟಿ ಎಂದು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ.
ನಾನು ಪಡೆದಿರುವ 5 ಲಕ್ಷ ಸಾಲಕ್ಕೆ ನನಗೆ ಲೋನ್ ಕಟ್ಟಲಾಗುತ್ತಿಲ್ಲ. ಇಂಥ ಜೀವನ ನಡೆಸುತ್ತಿದ್ದೇವೆ. ಹಳ್ಳಿಯಲ್ಲಿರುವ ಮನೆಗೆ ಸರಿಯಾದ ವ್ಯವಸ್ಥೆಯಿಲ್ಲ. ಕೆಲಸವಿಲ್ಲದೆ ಆದಾಯವಿಲ್ಲದೆ ಈಗಾಗಲೇ ತೊಂದರೆ ಅನುಭವಿಸಿದ್ದೇವೆ. ಈ ರೀತಿಯ ಕೆಲಸ ಮಾಡಲು ನಾವು ಮುಂದಾಗುವುದಿಲ್ಲ. ಪತ್ರಕರ್ತ ವೃತ್ತಿ ಧರ್ಮ ಚೆನ್ನಾಗಿ ತಿಳಿದಿದೆ. ಈ ಹಿಂದೆ ನಾವು ಅನೇಕ ಕೇಸುಗಳನ್ನು ಇತ್ಯರ್ಥ ಮಾಡಿದ್ದೇವೆ. ಆದಷ್ಟು ಬೇಗ ತನಿಖೆಗೆ ಒಳಗಾಗುವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.









