ಸಿಡಿ ಕೇಸ್ | “ಯುವತಿ ಉಲ್ಟಾ ಹೊಡೆದಿದ್ದಾಳೆ ಅನ್ನೋದು ಸುಳ್ಳು”
ಬೆಂಗಳೂರು : ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಉಲ್ಟಾ ಹೊಡೆದಿದ್ದಾರೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಈ ಬಗ್ಗೆ ಯುವತಿ ಪರ ವಕೀಲ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಯುವತ್ತಿಗೆ ಎಸ್ ಐಟಿ ವತಿಯಿಂದ ನೋಟಿಸ್ ನೀಡಲಾಗಿತ್ತು. ನೀವು ಕೊಟ್ಟಿರುವ ವಾಟ್ಸಪ್ ಸ್ಕ್ರೀನ್ ಶಾಟ್ ಮತ್ತು ಇನ್ನತರ ದಾಖಲೆಗಳಿದ್ದರೆ ನೀಡಬೇಕೆಂದು ನೋಟಿಸ್ ನೀಡಲಾಗಿತ್ತು. ಮತ್ತು ಸ್ಕ್ರೀನ್ ಶಾಟ್ ಗೆ ಸಂಬಂಧಪಟ್ಟಂತೆ ವಿವರಣೆ ನೀಡಬೇಕೆಂದು ನೋಟಿಸ್ ನೀಡಲಾಗಿತ್ತು. ಆದರೆ ಈಗ ಯುವತಿ ಉಲ್ಟಾ ಹೊಡೆದಿದ್ದಾಳೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಸತ್ಯಾಸತ್ಯತೆ ತಿಳಿದುಕೊಂಡು ಸುದ್ದಿ ಪ್ರಸಾರ ಮಾಡಬೇಕೆಂದು ಮನವಿ ಎಂದು ಯುವತಿ ಪರ ವಕೀಲ ಮಂಜುನಾಥ್ ಮನವಿ ಮಾಡಿಕೊಂಡಿದ್ದಾರೆ.

ಎಸ್ ಐಟಿಯವರು ಬೇಕಂತಲೇ ಸುದ್ದಿಯನ್ನು ತಿರುಚಿ ಹೇಳುತ್ತಿದ್ದಾರೆ. ಅದರಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ ನಾವು ಯುವತಿ ಬಳಿ ಸ್ಪಷ್ಟತೆಯನ್ನು ಪಡೆದಿದ್ದೇವೆ. ಆಕೆ ಯಾವುದೇ ರೀತಿಯ ಸ್ಟೇಟ್ ಮೆಂಟನ್ನು ಕೊಟ್ಟಿಲ್ಲ ಎಂದು ಖುದ್ದಾಗಿ ಹೇಳಿದ್ದಾಳೆ. ಯುವತಿ ಇಂದು ಯಾವುದೇ ರೀತಿಯ 164 ಹೇಳಿಕೆ ಕೊಟ್ಟಿಲ್ಲ. ಯುವತಿ 164 ಅಥಚಾ 161 ಅಡಿ ಹೇಳಿಕೆ ಕೊಟ್ಟಿಲ್ಲ. 11/04/2021 ರಲ್ಲಿ ಎಸ್ ಐಟಿ ನೊಟೀಸ್ ನೀಡಿಲಾಗಿತ್ತು. ಯುವತಿ ಯಾವುದೇ ತಿರುಚಿ ಹೇಳಿಕೆ ನೀಡಿಲ್ಲ ಎಂದು ವಕೀಲರು ಸ್ಪಷ್ಟನೆ ನೀಡಿದ್ದಾರೆ.









