ಸಿಡಿ ಕೇಸ್ : ಡಿಕೆಶಿ ಕಡೆಯವರ ಭಯದಿಂದ ಪೊಲೀಸ್ ಭದ್ರತೆ ಪಡೆದುಕೊಂಡಿದ್ದೇವೆ – ಯುವತಿ ಸಹೋದರ..!

1 min read

ಸಿಡಿ ಕೇಸ್ : ಡಿಕೆಶಿ ಕಡೆಯವರ ಭಯದಿಂದ ಪೊಲೀಸ್ ಭದ್ರತೆ ಪಡೆದುಕೊಂಡಿದ್ದೇವೆ – ಯುವತಿ ಸಹೋದರ..!

ವಿಜಯಪುರ : ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಯುವತಿ ಸಹೋದರರು ನಿಡಗುಂದಿಯ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಕಡೆಯವರ ಭಯದಿಂದ ಪೊಲೀಸ್ ಭದ್ರತೆ ಪಡೆದಿದ್ದೇವೆ. ಪೊಲೀಸರು ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿದ್ದಾರೆ. ಅಜ್ಜಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇವೆ. ಎಸ್ ಐ ಟಿ ಅಧಿಕಾರಿಗಳ ತನಿಖೆಗೆ ನಾವು ಸಹಕಾರ ನೀಡುತ್ತಿದ್ದೇವೆ. ಎಸ್ ಐ ಟಿ ತನಿಖೆ ಸರಿಯಾಗಿ ನಡೆಯುತ್ತಿದೆ. ನಮ್ಮ ಅಕ್ಕ ಯಾವುದೋ ಒತ್ತಡಕ್ಕೆ ಒಳಗಾಗಿದ್ದಾಳೆ. ನಮ್ಮ ಅಕ್ಕ ಪ್ರತಿದಿನ ನಮಗೆ ಪೋನ್ ಮಾಡುತ್ತಿದ್ದಳು. ಒಂದೂ ದಿನವೂ ನಮಗೆ ಪೋನ್ ಮಾಡದೇ ಊಟ ಕೂಡಾ ಮಾಡುತ್ತಿರಲಿಲ್ಲ. ಆದರೆ ಇತ್ತಿಚಿಗೆ ಅವಳು ಯಾರದ್ದೋ ಒತ್ತಡಕ್ಕೆ ಒಳಗಾಗಿದ್ದಳು ಎನಿಸುತ್ತಿದೆ. 20 ದಿನಗಳಿಂದ ಅವಳು ಎಲ್ಲಿದ್ದಳು ಎಂಬ ಮಾಹಿತಿ ಇರಲಿಲ್ಲ. ಕೇವಲ ವಿಡಿಯೋ ಮಾಡಿ ಬಿಡುತ್ತಿದ್ದಳು. ಅವಳು ನೇರವಾಗಿ ಮನಗೆ ಬರಬೇಕಿತ್ತು. ದಯವಿಟ್ಟು ನಮ್ಮ ಸಹೋದರಿಯನ್ನು ನೋಡಲು ಬಿಡಿ ಎಂದು ಮನವಿ ಮಾಡಿದ್ದಾನೆ.

ಇನ್ನೂ ಮುಂದುವರೆದು ಮಾತನಾಡಿರೋ ಯುವತಿ ತಮ್ಮ ಸಿಡಿ ಬಿಡುಗಡೆಗೂ ಕೆಲ ದಿನಗಳ ಮೊದಲು ನಮ್ಮ ಅಕ್ಕ ಫೋನ್ ಮಾಡಿದ್ದಳು. ಡಿಕೆ ಶಿವಕುಮಾರ್ ಕಡೆಯವರು ಒಂದು ಕಂಪನಿಗೆ ನನ್ನನ್ನು ರೆಫರ್ ಮಾಡಿದ್ದಾರೆ ಎಂದು ಹೇಳಿದ್ದಳು. ಆದ್ರೆ ನಮಗೇನು ಗೊತ್ತು ಅವರು ಆಕೆಯಿಂದ ಈ ರೀತಿ ಕೆಲಸ ಮಾಡಿಸುತ್ತಾರೆಂದು. ಇಡೀ ರಾಜ್ಯದಲ್ಲಿ ಎಷ್ಟೋ ನಾಯಕರಿದ್ದಾರೆ. ಆದರೆ ಅದೆಲ್ಲ ಬಿಟ್ಟು ನಮ್ಮ ಸಹೋದರಿ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ ಮಾಡಿದ್ದು ಯಾಕೆ. ಡಿಕೆಶಿ ಬದಲು ಬೇರೆಯವರ ಹೆಸರು ಹೇಳಬಹುದಿತ್ತಲ್ಲವ. ಆಕೆಯ ಮೇಲೆ ಎಷ್ಟು ಒತ್ತಡವಿದೆ ಎಂಬುದು ನಮಗೆ ತಿಳಿಯಿತ್ತಿಲ್ಲ. ಸಿಡಿ ಬಿಡುಗಡೆಯಾದಾಗಿನಿಂದ ನಮ್ಮ ಜೊತೆ ಮಾತನಾಡಲು ಆಕೆಗೆ ಅವಕಾಶ ನೀಡಿಲ್ಲ ಎಂದಿದ್ದಾನೆ. ಇದೇ ವೇಲೆ ನಮ್ಮ ಬಳಿ ಇರುವ ದಾಖಲೆಗಳನ್ನು ಎಸ್ ಐ ಟಿ ಅಧಿಕಾರಿಗಳಿಗೆ ನೀಡಿದ್ದೇವೆ. ಅವಕಾಶ ನೀಡಿದರೆ ಹೋಗಿ ಭೇಟಿಯಾಗಿ ಬರುತ್ತೇವೆ. ಅವರು ತನಿಖೆ ಮಾಡಿ ನ್ಯಾಯ ಒದಗಿರುವ ಭರವಸೆ ಇದೆ. ನಮ್ಮ ಬಳಿ ಇರುವ ಸಾಕ್ಷಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ. ಸೂಕ್ತ ಸಂಧರ್ಭದಲ್ಲಿ ಇನ್ನುಳಿದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾನೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಮತಗಟ್ಟೆಯಲ್ಲಿ CRPF ಯೋಧನ ಶವ ಪತ್ತೆ..!

ಬಾಲಿವುಡ್ ನ ಖ್ಯಾತ ನಟಿ, ಗಾಯಕಿ ಮತ್ತು ರಾಜಕಾರಣಿ ಕಿರಣ್ ಖೇರ್ ಗೆ ಕ್ಯಾನ್ಸರ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd