ಸಿಡಿ ಪ್ರಕರಣ : ಬ್ಲಾಕ್ ಮೇಲ್ ಮಾಡುವ ರಾಜಕಾರಣಿಗಳನ್ನು ಜೈಲಿಗೆ ಅಟ್ಟಬೇಕು – ಯತ್ನಾಳ್..!
ವಿಜಯಪುರ : ಸಿಡಿ ಪ್ರಕರಣದ ವಿಚಾರವಾಗಿ ಯುವತಿಯಿಂದ ವಿಡಿಯೋ ಬಿಡುಗಡೆ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಮೇಶ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು ಇದು ಒಂದು ದೊಡ್ಡ ಷಡ್ಯಂತ್ರ, ರಾಜಕೀಯವಾಗಿ ಅವರನ್ನು ಮುಗಿಸಲು ವ್ಯವಸ್ಥಿತವಾಗಿ ಒಂದು ಷಡ್ಯಂತ್ರ ನಡೆದಿದೆ.
ನಿನ್ನೆ ರಮೇಶ ಜಾರಕಿಹೊಳಿ ಅವರು ಹೇಳಿದ್ದು ಸತ್ಯವಿದೆ. ಸಿಡಿ ಪ್ರಕರಣವನ್ನು ಎಸ್ ಐ ಟಿ ತನಿಖೆಗೆ ಕೊಡಲಾಗಿದೆ. ಎಸ್ ಐ ಟಿ ತನಿಖೆ ಎಷ್ಟರಮಟ್ಟಿಗೆ ಪಾರದರ್ಶಕತೆಯಿಂದ ನಡೆಯುತ್ತದೆ ಎನ್ನುವುದೇ ನನಗೆ ಸಂಶಯ ಮೂಡಿಸುತ್ತಿದೆ. ಅಲ್ಲಿರುವ ಓರ್ವ ಅಧಿಕಾರಿ ವಿಜಯೇಂದ್ರ ಹೇಳಿದಂತೆ ಕೇಳುತ್ತಾರೆ. ಹೀಗಾಗಿ ಎರಡೂ ಪಾರ್ಟಿಯಲ್ಲಿನ ಒಬ್ಬೊಬ್ಬ ನಾಯಕರು ಜಾರಕಿಹೊಳಿಯನ್ನು ವ್ಯವಸ್ಥಿತವಾಗಿ ಮುಗಿಸಲು ಪ್ಲಾನ್ ಮಾಡಿದ್ದಾರೆ ಎಂದಿದ್ದಾರೆ.
ಸಿಡಿ ಪ್ರಕರಣ : ತನಿಖೆಯಾಗಿ ಸತ್ಯಾಂಶ ಹೊರ ಬಂದೇ ಬರುತ್ತೆ ಕಾಯೋಣ – ಸತೀಶ್ ಜಾರಕಿಹೊಳಿ..!
ಇದೇ ವೇಳೆ ಬಿಜೆಪಿಯ ಓರ್ವ ಉನ್ನತ ನಾಯಕ ಹಾಗೂ ಕಾಂಗ್ರೆಸ್ ನಲ್ಲಿನ ಓರ್ವ ಉನ್ನತ ನಾಯಕ ಸೇರಿ ಷಡ್ಯಂತ್ರ ರೂಪಿಸಿದ್ದಾರೆ. ಜಾರಕಿಹೊಳಿ ದೂರು ನೀಡಿದ ತಕ್ಷಣ ಯುವತಿ ವಿಡಿಯೋ ಹೊರಗೆ ಬರುತ್ತೆ, ಇದು ಪಕ್ಕಾ ಪ್ಲಾನಿಂಗ್ ಇದೆ. ಎಸ್ ಐ ಟಿ ಬದಲು ಸಿಬಿಐ ತನಿಖೆಗೆ ಕೊಡಬೇಕು. ಇನ್ನು ಬಹಳ ಜನರ ಸಿಡಿಗಳು ಇವೆ. ಬಿಜೆಪಿಯ ಉನ್ನತ ನಾಯಕನ ಮಗನ ಬಳಿ ಹಾಗೂ ಕಾಂಗ್ರೆಸ್ ಉನ್ನತ ನಾಯಕನ ಮನೆಯಲ್ಲಿ ಸಿಡಿಗಳು ಇವೆ. ಸಿಬಿಐ ನಿಂದ ತನಿಖೆ ಮಾಡಿಸಿ, ಬ್ಲಾಕ್ ಮೇಲ್ ಮಾಡುವ ರಾಜಕಾರಣಿಗಳನ್ನು ಜೈಲಿಗೆ ಅಟ್ಟಬೇಕು. ಇಂತಹ ರಾಜಕಾರಣಿಗಳನ್ನು ಜೈಲಿಗೆ ಅಟ್ಟದಿದ್ರೆ ಕರ್ನಾಟಕದಲ್ಲಿ ಕೆಟ್ಟ ಸಂಸ್ಕ್ರತಿ ಆರಂಭವಾಗುತ್ತದೆ.
ಮೊದಲಿನ ಹಾಗೂ ನಿನ್ನೆಯ ವಿಡಿಯೋ ಎರಡರಲ್ಲೂ ಭಾಷೆಗಳು ಬದಲಾವಣೆಯಾಗಿವೆ. ಮೊದಲಿನ ವಿಡಿಯೋದಲ್ಲಿ ಬೀದರ್ ಭಾಷೆ ಇದೆ, ನಿನ್ನೆಯ ವಿಡಿಯೋದಲ್ಲಿ ಸುಪೀರಿಯರ್ ಕನ್ನಡ ಬಳಕೆ ಆಗಿದೆ. ಭಾಷೆಗಳು ಹೇಗೆ ಚೇಂಜ್ ಆಗಿವೆ. ಇದನ್ನು ಬಿಜೆಪಿ ಉನ್ನತ ನಾಯಕರು ಅಥವಾ ಕಾಂಗ್ರೆಸ್ ಉನ್ನತ ನಾಯಕರು ಹೇಳಿಸಿದ್ದಾರೋ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಡಿ ಪ್ರಕರಣ : ನಾನೇ ಅಲ್ಲ. ನನಗೆ ಗೊತ್ತೇ ಇಲ್ಲ ಅಂತ ಹೇಳಿ ಅವರೇ ಮಾತನಾಡ್ತಿದ್ದಾರೆ – ಡಿಕೆಶಿ
ಕೊರೊನಾ 2ನೇ ಅಲೆ : ಮತ್ತೆ ಲಾಕ್ ಡೌನ್ ಆಗುತ್ತಾ…! ಸಿಎಂ ಹೇಳಿದ್ದೇನು..?
ರಾಜ್ಯದಲ್ಲೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತೆ : ಬಿ ವೈ ವಿಜಯೇಂದ್ರ..!








