ಪಟಾಕಿ ಬ್ಯಾನ್ – ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್; ಅಸಲಿಗೆ ಯಾವುದಿದು ಹಸಿರು ಪಟಾಕಿ? Bursting green crackers
ದೀಪಾವಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ದೀಪಗಳ ಹಬ್ಬ ದೀಪಾವಳಿ ಎಂದರೆ ಕಣ್ಣ ಮುಂದೆ ಬರುವುದು ಹಣತೆಯ ದೀಪಗಳ ಬೆಳಕಿನ ಜೊತೆಗೆ ಬಣ್ಣ ಬಣ್ಣದ ಪಟಾಕಿಗಳ ಚಿತ್ತಾರ. ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಹಸಿರು ಪಟಾಕಿ ಬಳಸಿ, ಸರಳ ದೀಪಾವಳಿ ಆಚರಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕರೆ ನೀಡಿದ್ದಾರೆ.
Bursting green crackers

ಈ ಮೊದಲು ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ಬಳಿಕ ನಿರ್ಧಾರದಲ್ಲಿ ಸಣ್ಣ ಮಾರ್ಪಾಡು ಮಾಡಿ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಲಾಗಿದೆ. ಹಾಗಾಗಿ ಈ ಬಾರಿ ಹಸಿರು ಪಟಾಕಿ ಮಹತ್ವವನ್ನು ಪಡೆದುಕೊಂಡಿದ್ದು, ಎಲ್ಲೆಡೆಯೂ ಭಾರೀ ಸುದ್ದಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಸಿರು ಪಟಾಕಿ ಕುರಿತ ಒಂದಿಷ್ಟು ಮಾಹಿತಿ .
ಏನಿದು ಹಸಿರು ಪಟಾಕಿ ?
ಕಡಿಮೆ ಹೊಗೆ ಉಗುಳುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಕರೆಯಲಾಗುತ್ತದೆ. ಹಸಿರು ಪಟಾಕಿ ಕಡಿಮೆ ಹೊಗೆ ಉಗುಳುವುದರಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಕಡಿಮೆ ದುಷ್ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ. ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿಯ ಪ್ರಕಾರ ಶೇ.30 ರಿಂದ 35 ರಷ್ಟು ಕಡಿಮೆ ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ10 ಮತ್ತು ಪಿಎಂ2.5) ವಿಸರ್ಜನೆ ಮಾಡುವ ಹಾಗೂ ಶೇ.35ನಿಂದ 40ರಷ್ಟು ಕಡಿಮೆ ಎಸ್ಒ2 ಹಾಗೂ ನೈಟ್ರೋಜನ್ ಆಕ್ಸೈಡ್ ಉಗುಳುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಕರೆಯಲಾಗುತ್ತದೆ.
ಸುಪ್ರೀಂ ಕೋರ್ಟ್ 2018 ಅಕ್ಟೋಬರ್ನಲ್ಲೇ ಹಸಿರು ಪಟಾಕಿ ಹೊರತುಪಡಿಸಿ ಬೇರಾವುದೇ ಪಟಾಕಿ ಸಿಡಿಸುವಂತಿಲ್ಲ ಎಂದು ಆದೇಶ ನೀಡಿತ್ತು. ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು ಮತ್ತು ಕಡಿಮೆ ಮಾಲಿನ್ಯಕಾರಕ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿತ್ತು. ಹಲವಾರು ನಿಬಂಧನೆ ವಿಧಿಸಿ 2019 ಮೇನಿಂದ ಹಸಿರು ಪಟಾಕಿ ಉತ್ಪಾದನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿತ್ತು.
ಎನ್ಇಇಆರ್ (ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ, ಎನ್ವಿರಾನ್ಮೆಂಟ್ ಇಂಜಿನಿಯರಿಂಗ್ ರೀಸರ್ಚ್ ಇನ್ಸ್ಟಿಟ್ಯೂಷನ್)ನ 24 ವಿಜ್ಞಾನಿಗಳು, ಸಂಶೋಧಕರು ಸುಪ್ರೀಂಕೋರ್ಟ್ನ ಸಲಹೆ ಮೇರೆಗೆ ಸತತ 9 ತಿಂಗಳ ಕಾಲ ಸಂಶೋಧನೆ ನಡೆಸಿ ಭಾರತದ ಮೊಟ್ಟಮೊದಲ ‘ಹಸಿರು ಪಟಾಕಿ’ ಅಭಿವೃದ್ಧಿಪಡಿಸಿದರು.
ಹಲವು ಸಂಶೋಧನೆ ಬಳಿಕ ಅಭಿವೃದ್ಧಿಪಡಿಸಲಾದ ಹಸಿರು ಪಟಾಕಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹಸಿರು ಪಟಾಕಿಗಳಲ್ಲಿ ಅಲ್ಯುಮಿನಿಯಂ ಅಂಶ ಕಡಿಮೆ ಇದ್ದು, ಬೇರಿಯಂ ಸಾಲ್ಟ್ ಮತ್ತು ಆ್ಯಶ್ ಇರುವುದಿಲ್ಲ. ಪಟಾಕಿಗಳ ಶಬ್ದವನ್ನೂ 160 ಡೆಸಿಬಲ್ನಿಂದ 125 ಡೆಸಿಬಲ್ಗೆ ಇಳಿಸಬೇಕಿದ್ದು, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆಯು ಪಟಾಕಿಗಳನ್ನು ಪರೀಕ್ಷಿಸಿ ವರದಿ ನೀಡುತ್ತದೆ. ಅಲ್ಲಿ ಅಂಗೀಕೃತಗೊಂಡ ಪಟಾಕಿ ಮಾತ್ರ ಮಾರುಕಟ್ಟೆಯಲ್ಲಿ ದೊರಕಲಿದೆ.
ಹಸಿರು ಪಟಾಕಿಗಳ ಮೇಲೆ ಹಸಿರು ಲೋಗೋ ಮತ್ತು ಕ್ವಿಕ್ ರೆಸ್ಪಾನ್ಸ್ (ಕ್ಯುಆರ್) ಕೋಡ್ ಇರಲಿದ್ದು, ಇದನ್ನು ಗುರುತಿಸಿ ಹಸಿರು ಪಟಾಕಿಗಳನ್ನು ಖರೀದಿ ಮಾಡಬಹುದಾಗಿದೆ.
ಮಾರ್ಚ್ ನಿಂದ ಹಸಿರು ಪಟಾಕಿ ಉತ್ಪಾದನೆ ಆರಂಭಗೊಂಡಿದ್ದು, ಕೆಲವೇ ಕೆಲ ಕಂಪನಿಗಳು ಮಾತ್ರ ಹಸಿರು ಪಟಾಕಿ ಉತ್ಪಾದಿಸುವ ಪರವಾನಗಿ ಪಡೆದಿವೆ.

ಭಾರತದಲ್ಲಿ ಪಟಾಕಿ ತಯಾರಿಕೆಗೆ ಹೆಸರಾಗಿರುವ ತಮಿಳುನಾಡಿನ ಶಿವಕಾಶಿ, ವಿನಾಯಕ, ಬಾಲಾಜಿ ಮತ್ತು ಕೊರೋನೇಶನ್ ಹೀಗೆ 348 ಘಟಕಗಳು ಮಾತ್ರ ಹಸಿರು ಪಟಾಕಿ ತಯಾರಿಸಲು ಅನುಮತಿ ಪಡೆದಿದೆ. ಶಿವಕಾಶಿಯ 1070 ಘಟಕಗಳಲ್ಲಿ 6 ಘಟಕಗಳಿಗೆ ಮಾತ್ರ ಹಸಿರು ಪಟಾಕಿ ಉತ್ಪಾದನೆಗೆ ಪರವಾನಗಿ ದೊರಕಿದೆ. ಹಾಗಾಗಿ ಹಸಿರು ಪಟಾಕಿ ಸಂಗ್ರಹ ಕಡಿಮೆ ಇದ್ದು, ಹೆಚ್ಚು ಪ್ರಕಾರದ ಪಟಾಕಿಗಳೂ ಇಲ್ಲ.
2018 ರ ಸುಪ್ರೀಂಕೋರ್ಟ್ ಪಟಾಕಿ ನಿಷೇಧದ ಆದೇಶದ ನಂತರ ತೀವ್ರ ನಷ್ಟ ಅನುಭವಿಸಿದ್ದ ಪಟಾಕಿ ಮಾರಾಟಗಾರರು ನಂತರದ ವರ್ಷಗಳಲ್ಲಿ ಪಟಾಕಿಯ ಹೆಚ್ಚಿನ ಸಂಗ್ರಹಕ್ಕೆ ಹಿಂದೇಟು ಹಾಕಿದ್ದಾರೆ. ಅಷ್ಟೇ ಅಲ್ಲ ಪಟಾಕಿ ಮಾರುವವರು ಪೊಲೀಸರಿಂದ ಪರವಾನಗಿ ಪಡೆದು, ಅದನ್ನು ಅಂಗಡಿಗಳ ಮುಂದೆ ಪ್ರಕಟಿಸಬೇಕು. ಆದರೆ ತಜ್ಞರ ಪ್ರಕಾರ ಪರಿಸರ ಸ್ನೇಹಿ ಪಟಾಕಿ ಎಂಬುವುದೇ ಇಲ್ಲ. ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿಗಳು ಕಡಿಮೆ ಹೊಗೆ ಬಿಡುಗಡೆ ಮಾಡುತ್ತವೆ ಅಷ್ಟೇ. ಆದರೆ ಅವು ಎರಡೂ ಪರಿಸರಕ್ಕೆ ಮಾರಕ ಎನ್ನುವುದು ತಜ್ಞರ ಅಭಿಪ್ರಾಯ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಯಕ್ಷಗಾನದ ಸವ್ಯಸಾಚಿ ನಮ್ಮೆಲ್ಲರ ಪ್ರೀತಿಯ ತಾಳಮದ್ದಲೆಯ ಅರ್ಥದಾರಿ ಗತ್ತು ಗಾಂಭೀರ್ಯದ ಯಕ್ಷಲೋಕದ ಆಸ್ತಿ ವಾಸುದೇವ ಸಾಮಗರು ಇನ್ನಿಲ್ಲ:#Yakshagana#latestnewshttps://t.co/Eeq7TggF7t
— Saaksha TV (@SaakshaTv) November 7, 2020
ಪ್ರೋಟೀನ್ ನಿಂದ ಸಮೃದ್ಧವಾಗಿರುವ 8 ರುಚಿಯಾದ ಹಣ್ಣುಗಳುhttps://t.co/19w0puYwTB
— Saaksha TV (@SaakshaTv) November 6, 2020








