ಶೇ.65 ಆಸನ ಸಾಮರ್ಥ್ಯದೊಂದಿಗೆ ದೇಶೀಯ ವಿಮಾನಯಾನ ಅವಕಾಶ
ನವದೆಹಲಿ : ಕೋವಿಡ್ 2ನೇ ಅಲೆ ಕಡಿಮೆಯಾಗ್ತಿರುವ ಹಿನ್ನೆಲೆ ಶೇ.65ರಷ್ಟು ಆಸನ ಸಾಮರ್ಥ್ಯದೊಂದಿಗೆ ದೇಶೀಯ ವಿಮಾನಯಾನಕ್ಕೆ ಅವಕಾಶ ನೀಡಲಾಗಿದೆ. ಸಚಿವಾಲಯದ ಮೇ 28ರ ಆದೇಶದ ಪ್ರಕಾರ ಜೂನ್ 1ರಿಂದ ವಿಮಾನಯಾನ ಸಂಸ್ಥೆಗಳು ತಮ್ಮ ಪೂರ್ವ-ಕೋವಿಡ್ ದೇಶೀಯ ವಿಮಾನಗಳಲ್ಲಿ ಕೇವಲ 50ರಷ್ಟು ಆಸನ ವ್ಯವಸ್ಥೆಯನ್ನು ಮಾತ್ರ ಬಳಸಬೇಕಿತ್ತು.
ವಿಮಾನಯಾನ ಸಂಸ್ಥೆಗಳು ದೇಶೀಯ ವಿಮಾನಯಾನವನ್ನು ಈ ಹಿಂದಿನ ಕೋವಿಡ್ ಮಾರ್ಗಸೂಚಿ ಶೇಕಡ 50ರಷ್ಟು ಬದಲಿಗೆ ಗರಿಷ್ಠ 65ರಷ್ಟರವರೆಗೆ ನಿರ್ವಹಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ತಿಳಿಸಿದೆ. ಎರಡು ತಿಂಗಳ ವಿರಾಮದ ನಂತರ ಸರ್ಕಾರವು ಕಳೆದ ವರ್ಷ ಮೇ 25ರಂದು ನಿಗದಿತ ದೇಶೀಯ ವಿಮಾನಯಾನವನ್ನು ಪುನರಾರಂಭಿಸುವುದಕ್ಕೆ ಅವಕಾಶ ನೀಡಿತ್ತು.
ದೇಶಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾದ ಹಿನ್ನೆಲೆಯಲ್ಲಿ ಜೂನ್ 1ಕ್ಕೂ ಮುನ್ನ 80ರಷ್ಟಿದ್ದ ಆಸನ ವ್ಯವಸ್ಥೆಯನ್ನು ಮೇ 28ರಂದು ಶೇಕಡಾ 80ರಿಂದ 50ಕ್ಕೆ ಇಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಹವಾಮಾನ ವೈಪರೀತ್ಯಗಳಿಂದ ಬರುವ ವೈರಲ್ ಜ್ವರ ತಡೆಗಟ್ಟುವ ಮನೆಮದ್ದುಗಳು
ಇದು ಹೊಸ ಆದೇಶವನ್ನು ಹೊರಡಿಸಿದ್ದು, ಅದರಲ್ಲಿ ಮೇ 28 ರ ಆದೇಶವನ್ನು 50 ಶೇಕಡಾ ಸಾಮರ್ಥ್ಯವನ್ನು ಶೇ.65 ಸಾಮರ್ಥ್ಯ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ. ಈ ಮಾರ್ಗಸೂಚಿ ಜುಲೈ 31ರವರೆಗೆ ಅನ್ವಯಿಸುತ್ತದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.
ಅನ್ಲಾಕ್ 3.0 – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಜ ಸ್ಥಿತಿಗೆ ಮರಳಿದ ಜೀವನ