ಈಗಾಗಲೇ ಅನ್ ಲಾಕ್ 3.0 ಅನ್ವಯ ಲಾಕ್ ಡೌನ್ ಸಡಿಲಿಕೆಗಾಗಿ ಕೇಂದ್ರ ಹೊಸ ಮಾರ್ಗ ಸೂಚಿ ರಿಲೀಸ್ ಮಾಡಿದ್ದು, ಜಿಮ್ ಗಳ ತೆರೆಯುವಿಕೆಗೂ ಅವಕಾಶ ಕಲ್ಪಿಸಿದೆ. ಇದೀಗ ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗಾಗಿ ಕೇಂದ್ರ ಸರ್ಕಾರ ಪರಿಷ್ಕøತ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಹಳೆಯ ಮಾರ್ಗಸೂಚಿಯಲ್ಲೇ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಈ ಪರಿಷ್ಕøತ ಮಾರ್ಗಸೂಚಿ ಆಗಸ್ಟ್ 9ರಿಂದ ಜಾರಿಗೆ ಬರಲಿದೆ. ನೂನತ ಮಾರ್ಗಸೂಚಿ ಅನ್ವಯ ವಿವಿಧ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರು ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದ ಪಕ್ಷದಲ್ಲಿ ಅವರು ಕ್ವಾರಂಟೈನ್ ಗೆ ಒಳಗಾಗುವ ಅಗತ್ಯವಿಲ್ಲ ಎಂದು ಉಲ್ಲೇಖವಾಗಿದೆ.
ಇನ್ನೂ ಪರಿಷ್ಖøತ ಮಾರ್ಗಸೂಚಿಯಲ್ಲಿ ಕೆಲ ಅಂಶಗಳನ್ನೂ ಸಹ ಪ್ರಕಟಿಸಲಾಗಿದೆ.
1. ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ 72 ಗಂಟೆಗಳ ಮುನ್ನವೇ ಸ್ವಘೋಷಿತ ಅರ್ಜಿಯನ್ನು ಭರ್ತಿ ಮಾಡಬೇಕು.
2. ಅರ್ಜಿ ಭರ್ತಿ ಬಳಿಕ 14 ದಿನಗಳ ಕಾಲ ಕಡ್ಡಾಯವವಾಗಿ ಕ್ವಾರಂಟೈನ್ ಗೆ ಒಳಗಾಗುವ ಬಗ್ಗೆ ದೃಢಪಡಿಸಬೇಕು
3. ಪ್ರಯಾಣ ಪೂರ್ಣಗೊಳಿಸಿದ ನಂತರ ನೆಗೆಟಿವ್ ವರದಿಯನ್ನು ತೋರಿಸಿದರೆ ಸಾಂಸ್ಥಿಕ ಕ್ವಾರಂಟೈನ್‍ನಿಂದ ವಿನಾಯಿತಿ ಪಡೆಯಲು ಅವಕಾಶವಿದೆ.
4. ಸ್ಕ್ರೀನಿಂಗ್ ವೇಳೆ ಕೊರೊನಾ ವೈರಸ್ ಸೋಂಕು ಲಕ್ಷಣಗಳು ಕಂಡುಬಂದರೆ ತಕ್ಷಣ ಅಂಥ ಪ್ರಯಾಣಿಕರನ್ನು ಪ್ರತ್ಯೇಕಿಸಿ ಶಿಷ್ಟಾಚಾರದ ಪ್ರಕಾರ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.
Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ…
Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ… ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ವಿಜಯ್ ಜೊತೆ ವಾರಿಸು ನಂತರ ...