KartavyaPath: ಕರ್ತವ್ಯ ಪಥ ಭಾರತಕ್ಕೆ ಹೊಸ ದೃಷ್ಟಿ ನಂಬಿಕೆ ಕೊಡುತ್ತದೆ – ಪ್ರಧಾನಿ ಮೋದಿ
ಹೊಸದಾಗಿ ನಿರ್ಮಿಸಲಾದ ಕರ್ತವ್ಯ ಪಥ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬ ನಾಗರಿಕರಿಗೆ ಕರೆ ನೀಡಿದ್ದಾರೆ.
ನಿನ್ನೆ ರಾತ್ರಿ ರಾಜಪಥ ರಸ್ತೆಯ ಹೆಸರನ್ನ ಬದಲಾಯಿಸಿದ ಪ್ರಧಾನಿ ಮೋದಿ ಕರ್ತವ್ಯ ಪಥ ಎಂದು ನಾಮಕಾರಣ ಮಾಡಿದ್ದಾರೆ. ನಂತರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ನಂತರ ಮಾತನಾಡಿದ ಪ್ರಧಾನಿ ಮೋದಿ ಅವರು, ಕರ್ತವ್ಯ ಪಥದ ಅಭಿವೃದ್ಧಿಯಲ್ಲಿ ಭವಿಷ್ಯದ ಭಾರತವನ್ನ ಕಾಣಬಹುದು. ಕರ್ತವ್ಯ ಪಥದಲ್ಲಿನ ಶಕ್ತಿಯು ಜನರಿಗೆ ಭಾರತಕ್ಕೆ ಹೊಸ ದೃಷ್ಟಿಕೋನ ಮತ್ತು ಹೊಸ ನಂಬಿಕೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.
ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ನೇತಾಜಿ ಸುಭಾಷ್ ಅವರ ಜೀವನಾಧಾರಿತ ಡ್ರೋನ್ ಶೋ ಬಗ್ಗೆ ಮಾತನಾಡಿದ ಪ್ರಧಾನಿ ಪ್ರಸ್ತಾಪಿಸಿದರು. ಕರ್ತವ್ಯ ಪಾಥ್ ಮತ್ತು ನೇತಾಜಿ ಪ್ರತಿಮೆಗೆ ಬೇಟಿ ಕೊಡುವಂತೆ ಕರೆ ನೀಡಿದರು. #KartavyaPath ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಅಪ್ಲೋಡ್ ಮಾಡುವಂತೆ ಕೇಳಿಕೊಂಡರು.
ದೆಹಲಿ ಮೆಟ್ರೋ ರೈಲು ನಿಗಮ, ಮತ್ತು DMRC ಇಂದಿನಿಂದ ಸೆಂಟ್ರಲ್ ವಿಸ್ಟಾ ಅಥವಾ ಇಂಡಿಯಾ ಗೇಟ್ಗೆ ಭೇಟಿ ನೀಡುವವರಿಗೆ ಬಸ್ ಸೇವೆಯನ್ನು ಒದಗಿಸುತ್ತವೆ.