CET Result 2022 – ಕರ್ನಾಟಕ CET ಪರೀಕ್ಷೆ ಫಲಿತಾಂಶ ಬಿಡುಗಡೆ..
2021-22ನೇ ಸಾಲಿನ ಸಿಇಟಿ (CET) ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. Kea.kar.nic.in ಮತ್ತು karesults.nic.in ಫಲಿತಾಂಶವನ್ನ ವಿಕ್ಷಿಸಬಹುದು.
ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿರುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ 83 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 88 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ.
ಇಂಜಿನಿರಿಂಗ್ ಕೋರ್ಸ್ಗೆ 1,71,656 ರ್ಯಾಂಕ್, ಕೃಷಿ ಕೋರ್ಸ್ಗೆ 1,39,968 ರ್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್ ಬಂದಿದೆ.
ಯಲಹಂಕ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರಿನ ವಿದ್ಯಾರ್ಥಿ ಅಪೂರ್ವ್ ಟಂಡನ್ (Aporv Tandon) ಅವರು ಶೇಕಡ 98.611 ಅಂಕಗಳೊಂದಿಗೆ ಎಂಜಿನಿಯರಿಂಗ್ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
CET Result 2022 – Karnataka CET Exam Result Released..








