ಗಡಿಯಲ್ಲಿ ಚೀನಾದೊಂದಿಗಿನ ಸಂಘರ್ಷ : ಕ್ವಾಡ್ ಒಕ್ಕೂಟದ ನೌಕಾಪಡೆಗಳ ಸಮರಾಭ್ಯಾಸ ಆರಂಭ
ಗಡಿಯಲ್ಲಿ ಪದೇ ಪದೇ ಚೀನಾ ಕಿತಾಪತಿ ತೆಗೆಯುತ್ತಿದ್ದು, ಸಂಘರ್ಷದ ನಡುವೆಯೇ ಕ್ವಾಡ್ ಒಕ್ಕೂಟದ ನೌಕಾಪಡೆಗಳು ಚೀನಾ ಸೇನೆಯನ್ನ ತಡೆಯುವ ಉದ್ದೇಶದೊಂದಿಗೆ ಸಮಾರಾಭ್ಯಾಸ ಆರಂಭಿಸಿದ್ದಾರೆ. ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಾಬಲ್ಯವನ್ನು ನಿಯಂತ್ರಿಸುವ ಉದ್ದೇಶದ ಕ್ವಾಡ್ ಒಕ್ಕೂಟದ ನೌಕಾಪಡೆಗಳ ಸಮರಾಭ್ಯಾಸ ಆರಂಭವಾಗಿದೆ.ಬಂಗಾಳ ಕೊಲ್ಲಿಯಲ್ಲಿ ನಡೆಯುತ್ತಿರುವ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ, ಜಪಾನ್ ಅಮೆರಿಕದ ನೌಕೆಗಳು ಭಾಗಿಯಾಗಿವೆ.
ಇನ್ನೂ ಭಾರತದ ಎರಡು ಯುದ್ಧನೌಕೆಗಳು, ಒಂದು ಕರಾವಳಿ ಗಸ್ತು ವಿಮಾನ ಮತ್ತು ಒಂದು ಜಲಾಂತರ್ಗಾಮಿ ನೌಕೆ ಈ ಮೂರೂ ದೇಶಗಳ ನೌಕೆಗಳಿಗೆ ಜತೆಯಾಗಿವೆ. ಹಿಂದೂ ಮಹಾಸಾಗರ – ಪೆಸಿಫಿಕ್ ಸಮುದ್ರ ಪ್ರದೇಶದಲ್ಲಿ ಮುಕ್ತ, ಸ್ವತಂತ್ರ ಮತ್ತು ನಿಯಮಕ್ಕೆ ಬದ್ಧವಾದ ಸಮುದ್ರಯಾನವನ್ನು ರಕ್ಷಿಸಲು ಈ ನಾಲ್ಕೂ ರಾಷ್ಟ್ರಗಳ ಬದ್ಧತೆಯನ್ನು ಈ ಸಮರಾಭ್ಯಾಸ ತೋರಿಸುತ್ತದೆ ಎಂದು ನೌಕಾಪಡೆ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದ್ದಾರೆ.
ಅಮೆರಿಕ ಕಾರ್ಲ್ ವಿಲ್ಸನ್ ಯುದ್ಧನೌಕೆ ಮತ್ತು ಎರಡು ಇತರ ಯುದ್ಧನೌಕೆಗಳು ಇದರಲ್ಲಿ ಭಾಗಿ ಯಾಗಿವೆ. ಭಾರತದ ಐಎನ್‌ಎಸ್ ರಣ ವಿಜಯ್, ಐಎನ್‌ಎಸ್ ಸಾತ್ಪುರ ನೌಕೆಗಳು ಇದರಲ್ಲಿ ಭಾಗಿಯಾಗಿವೆ. ಜಪಾನ್‌ನ ಸಮುದ್ರ ಸ್ವಯಂ ರಕ್ಷಣಾ ಪಡೆಯ ಜೆಎಸ್ ಕಾಗಾ ಮತ್ತು ಜೆಎಸ್ ಮುರಾಸೇಮ್, ಆಸ್ಟ್ರೇಲಿಯಾ ನೌಕಾಪಡೆಯ ಬಲ್ಲಾರತ್, ಸಿರಿಯಸ್ ನೌಕೆಗಳು ಕೂಡ ಸಮರಾಭ್ಯಾಸದಲ್ಲಿ ಭಾಗಿಯಾಗಿವೆ.