ಚೀನಾದಲ್ಲಿ 3 ಮಕ್ಕಳ ನೀತಿ ಪ್ರಕಟಿಸಿದ ಸರ್ಕಾರ – ಅಸಲಿ ಕಾರಣವೇನು…?
ಚೀನಾ : ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದರುವ ಮೊದಲನೇ ದೇಶ ಚೀನಾ. ಹೀಗಿರುವಾಗ ಕುಟುಂಬ ಯೋಜನೆಯಲ್ಲಿ ಕಟ್ಟುನಿಟ್ಟುಗೊಳಿಸುವ ಬದಲಾಗಿ ಚೀನಾ ಅದನ್ನ ಸಡಿಲಿಕೆ ಮಾಡಿ 3 ಮಕ್ಕಳ ನೀತಿ ಪ್ರಕಟಿಸಿ ವಿಶ್ವವನ್ನ ಆಶ್ಚರ್ಯಕ್ಕೆ ಗುರಿಪಡಿಸಿದೆ..
ಹೌದು.. ಇನ್ಮುಂದೆ ಮೂರು ಮಕ್ಕಳನ್ನು ಹೊಂದಲು ಚೀನಾ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಮೊದಲು ಜನಸಂಖ್ಯೆ ನಿಯಂತ್ರಣಕ್ಕಾಗಿ ಚೀನಾದಲ್ಲಿ ಎರಡು ಮಕ್ಕಳನ್ನ ಹೊಂದಲು ಮಾತ್ರ ಅವಕಾಶವಿತ್ತು. ದಶಕಗಳ ಬಳಿಕ ತನ್ನ ನಿರ್ಧಾರವನ್ನ ಸಡಿಲಗೊಳಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ.
ಚೀನಾ ಜನಸಂಖ್ಯೆಯಲ್ಲಿ ವೃದ್ಯಾಪ್ಯ ಹಂತಕ್ಕೆ ತೆರಳುತ್ತಿರುವ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಜನನ ಪ್ರಮಾಣ ನಿಧಾನಗತಿಯಲ್ಲಿದೆ. ಜನನ ಪ್ರಮಾಣ ಮಂದಗತಿಯ ಪ್ರಮಾಣಕ್ಕೆ ಎರಡು ಮಕ್ಕಳ ನೀತಿಯೇ ಕಾರಣವಾಗಿತ್ತು. ಹೀಗಾಗಿ ಹೊಸ ನೀತಿ ಪ್ರಕಟಿಸಿದೆ. ಈ ನೀತಿಗೆ ಚೀನಾ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ಸಹ ಅನುಮತಿ ನೀಡಿದ್ದಾರೆ.
ಇನ್ನೂ 2010 ರಿಂದ 2020ರ ನಡುವೆ ಚೀನಾದ ಜನಸಂಖ್ಯೆ ಬೆಳವಣಿಗೆ ದರ ಶೇ.0.53ರಷ್ಟಿತ್ತು. ಇದಕ್ಕೂ ಮುಂಚೆ 2000 ರಿಂದ 2010ರ ನಡುವೆ ಬೆಳವಣಿಗೆ ಶೇ.0.57ರಷ್ಟಿತ್ತು. ಕಳೆದ ಎರಡು ದಶಕಗಳಿಂದ ಚೀನಾದ ಜನಸಂಖ್ಯೆ ಬೆಳವಣಿಗೆ ದರ ಅತಿ ಕಡಿಮೆ ಹಂತಕ್ಕೆ ತಲುಪಿತ್ತು. 2020ರಲ್ಲಿ ಕೇವಲ 12 ಲಕ್ಷ ಮಕ್ಕಳ ಜನನವಾಗಿದೆ. 2016ರಲ್ಲಿ ಈ ಸಂಖ್ಯೆ 18 ಲಕ್ಷ ಇತ್ತು. 1960ರ ಬಳಿಕ ಚೀನಾದಲ್ಲಿ ಅತಿ ಕಡಿಮೆ ಜನನ ಪ್ರಮಾಣ ದಾಖಲಾಗಿತ್ತು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.