‘ಕೊರೊನಾ ಹರಡಿರುವುದು ‘ಛೀ’ನಾದ ವುಹಾನ್ ಲ್ಯಾಬ್ ನಿಂದಲೇ’: ಬ್ರಿಟನ್ ಗುಪ್ತಚರರು

1 min read

‘ಕೊರೊನಾ ಹರಡಿರುವುದು ‘ಛೀ’ನಾದ ವುಹಾನ್ ಲ್ಯಾಬ್ ನಿಂದಲೇ’: ಬ್ರಿಟನ್ ಗುಪ್ತಚರರು

ಕೊರೊನಾ ವೈರಸ್ ಹರಡಿದ್ದು, ಎಲ್ಲಿಂದ ಎಂಬ ಹಲವಾರು ವಾದ ವಿವಾದಗಳು ಚರ್ಚೆಗಳು ಆಗಾಗ ನಡೆಯುತ್ತಲೇ ಇರುತ್ತವೆ.. ಅದು ಅಲ್ಲದೇ ಇತ್ತೀಚೆಗೆ ಚೀನಾ ವಿರುದ್ಧ ಅನೇಕ ಸಾಕ್ಷಿಗಳು ಲಣ್ಯವಾಗಿದ್ದು, ಚೀನಾದ ವುಹಾನ್ ನ ಲ್ಯಾಬ್ ನಿಂದಲೇ ಕೊರೊನಾ ವೈರಸ್ ಹರಡಿರುವ ಶಂಕೆ ವ್ಯಕ್ತವಾಗ್ತಿದೆ.. ಇತ್ತೀಚೆಗಷ್ಟೇ 2019 ಅಂದ್ರ ಕೋವಿಡ್ ಆರಂಭದಲ್ಲೇ ವುಹಾನ್ ನ ಮೂವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆಂಬ ಅಂಶ ಬಹಿರಂಗವಾಗಿತ್ತು.. ಇದಾದ ನಂತರ ಚೀನಾದ ಮೇಲೆ ಅನುಮಾನಗಳ ಮತ್ತಷ್ಟು ಹೆಚ್ಚಾಗಿದ್ದವು..

ಮತ್ತೊಂದೆಡೆ ಚೀನಾದ ವಿರುದ್ಧ ಅನುಮಾನಗಳನ್ನ ಹೊರಹಾಕುತ್ತಲೇ ತನಿಖೆಗೆ ಆಗ್ರಹಿಸುತ್ತಿರುವ ಅಮೆರಿಕಾ ವಿರುದ್ಧ ಚೀನಾ ಕೆಂಡ ಕಾರ್ತಿದೆ.. ಅಲ್ಲದೇ 2015 – 2016ರಲ್ಲೇ ಚೀನಾ ಕೊರೊನಾ ಮಾಹಾಮಾರಿಯ ಬಗ್ಗೆ ಚರ್ಚೆ ನಡೆಸಿತ್ತು… ಜೆನೆಟಿಕ್ ವಾರ್ ನ ತಯಾರಿ ನಡೆಸಿತ್ತು ಎಂದು ಅಮೆರಿಕಾ ವರದಿ ಮಾಡಿತ್ತು.. ಇದ್ರಿಂದಾಗಿ ಅಮೆರಿಕಾ ವಿರುದ್ಧ ಚೀನಾ ಆಕ್ರೋಶ ಹೆಚ್ಚಾಗಿದೆ..

ಇನ್ನೂ ಕೊರೊನಾ ಮಾಹಾಮಾರಿ ವುಹಾನ್ ನ ಮಾಂಸ ಮಾರುಕಟ್ಟೆಯಿಂದ ಹರಡಿರಬಹುದು ಆದ್ರೆ ಅದನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳುವುದಕ್ಕೆ ಚೀನಾ ತಯಾರಿಲ್ಲ. ಈವರೆಗೂ ಆ ಬಗ್ಗೆ ವಾದ ಮಾಡುತ್ತಲೇ ಬಂದಿದೆ.. ಜೊತೆಗೆ ಇದು ಮಾಂಸ ಮಾರುಕಟ್ಟೆಯಿಂದ ಹರಡಿರುವ ಸಾಧ್ಯತೆಯಿದೆ ಆದ್ರೆ ವುಹಾನ್ ನ ಲ್ಯಾಬ್ ನಿಂದ ಹರಡಿಲ್ಲ ಎನ್ನುತ್ತಲೇ ವಾದಿಸಿದೆ.. ಆದ್ರೆ ಅಮೆರಿಕಾವು ಇದನ್ನ ಒಪ್ಪೋದಕ್ಕೆ ತಯಾರಿಲ್ಲ.

ಇದೀಗ ಚೀನಾದ ವುಹಾನ್ ನ ಲ್ಯಾಬ್ ನಿಂದಲೇ ಇಡೀ ವಿಶ್ವಕ್ಕೆ ಕೊರೊನಾ ಹಬ್ಬಿರುವ ಸಾಧ್ಯತೆ ಇದೆ ಎಂದು ಬ್ರಿಟೀಷ್ ಬೇಹುಗಾರರು ಹೇಳಿದ್ದಾರೆ. ಹೌದು.. ವಿಶ್ವದಾದ್ಯಂತ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ ಚೀನಾದ ವುಹಾನ್ ಪ್ರಯೋಗಾಲಯದಿಂದಲೇ ಹರಡಿರುವ ಸಾಧ್ಯತೆ ಇದೆ ಎಂದು ಬ್ರಿಟನ್‌ನ ಬೇಹುಗಾರರು ಹೇಳಿದ್ದಾರೆ.

ವುಹಾನ್ ಇನ್‌ಸ್ಟಿಟ್ಯೂಟ್ ಆಫ್‌ ವೈರಾಲಜಿ’ಯಿಂದ ವೈರಸ್ ಹರಡಿರುವ ಸಾಧ್ಯತೆ ಇದ್ದು, ಬ್ರಿಟನ್ ಬೇಹುಗಾರರು ತನಿಖೆ ನಡೆಸುತ್ತಿರುವುದು ಬೀಜಿಂಗ್‌ ನ ಉದ್ವಿಗ್ನತೆ ಹೆಚ್ಚಿಸಿದೆ ಎಂದು  ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೇ ವರದಿಯಲ್ಲಿ ಲ್ಯಾಬ್–ಲೀಕ್ ಸಿದ್ಧಾಂತದ ಬಗ್ಗೆ ತನಿಖೆ ನಡೆಸಲು ಮುಂದಾಗುವ ವಿಜ್ಞಾನಿಗಳಿಗೆ ಅಡಚಣೆ ಉಂಟುಮಾಡ್ತಿರುವುದಾಗಿಯೂ ಆರೋಪಗಳೂ ಇವೆ.

‘ ಕೊರೊನಾ ಲಸಿಕೆ ಹಾಕಿಸಿಕೊಳ್ಳದೇ ಇದ್ರೆ ಮದ್ಯ ಇಲ್ಲ’…!

1 ಗುಂಟೆಗೆ 100 ರೂ.. ಬೇಸಿಕ್ ಕಾಮನ್ ಸೆನ್ಸ್ ಇಲ್ವಾ ಸರ್ಕಾರಕ್ಕೆ..?

ಕನ್ನಡವಳೆಂದು ನನ್ನ ಸಹಾಯಕ್ಕೆ ಯಾರೂ ಬರುತ್ತಿಲ್ಲ – ಕನ್ನಡಿಗರ ಮೇಲೆ ಸಂಘಟನೆ ಕಟ್ಟಿಕೊಂಡು ದಬ್ಬಾಳಿಕೆ ನಡೆಸಲಾಗ್ತಿದೆ – ವಿಜಯಲಕ್ಷ್ಮಿ

ರಾಜ್ಯದಲ್ಲಿಂದು 20 ಸಾವಿರ ಕೊರೊನಾ ಕೇಸ್ ಪತ್ತೆ : ಜಿಲ್ಲಾವಾರು ಡಿಟೈಲ್ಸ್ ಇಲ್ಲಿದೆ

ರಾಜ್ಯದಲ್ಲಿ ಇಂದು 20,378 ಹೊಸ ಕೊರೊನಾ ಕೇಸ್ ಪತ್ತೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd