ಮಹಾಮಾರಿಯ ತಾಯ್ನಾಡು ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣ ಹೆಚ್ಚಳ
ಚೀನಾ : ಕೊರೊನಾ ಮಹಾಮಾರಿಯ ತವರು ಚೀನಾ ಇಡೀ ವಿಶ್ವಕ್ಕೆ ವೈರಸ್ ಹಂಚಿ , ಕೋಟ್ಯಾಂತರ ಜನರ ಜೀವಗಳ ಬಲಿ ಪಡೆದು ತಾವು ಕೊರೊನಾ ಮುಕ್ತ ಅಂತ ಬೀಗುತ್ತಿತ್ತು. ಆದ್ರೀಗ ಮತ್ತೊಮ್ಮೆ ಚೀನಾದಲ್ಲಿ ಮಹಾಮಾರಿ ಉಲ್ಭಣಗೊಂಡಿದೆ, ಹೌದು ಚೀನಾದಲ್ಲಿ ಬುಧವಾರ ಒಂದೇ ದಿನ 100 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ನಗರದ ನಿವಾಸಿಗಳು ದೇಶದ ಬೇರೆ ಬೇರೆ ಭಾಗಗಳಿಗೆ ಪ್ರಯಾಣಿಸದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ.
ದೇಶದಲ್ಲಿ 93 ಸ್ಥಳೀಯರಿಗೆ ಹಾಗೂ 16 ಮಂದಿ ವಿದೇಶದಿಂದ ಬಂದವರಿಗೆ ಸೋಂಕು ದೃಢಪಟ್ಟಿತ್ತು. ಇದು ಇತ್ತೀಚೆಗಿನ ವಾರಗಳಲ್ಲಿ ಪತ್ತೆಯಾದ ಅತಿ ಹೆಚ್ಚು ಪ್ರಕರಣಗಳು ಎಂದು ಹೇಳಲಾಗಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಮಾಹಿತಿ ಪ್ರಕಾರ ಇನ್ನೂ ರಷ್ಯಾದ ಗಡಿಯಲ್ಲಿರುವ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ 35, ಹೆಬೈನಲ್ಲಿ 14, ಗನ್ಸುದಲ್ಲಿ 14, ಬೀಜಿಂಗ್‌ನಲ್ಲಿ 9, ಇನ್ನರ್ ಮಂಗೋಲಿಯಾದಲ್ಲಿ 6, ಚಾಂಗ್‌ಕಿಂಗ್ ಮತ್ತು ಕಿಂಗ್‌ಹೈನಲ್ಲಿ ತಲಾ 4, ಜಿಯಾಂಗ್‌ಕ್ಸಿ, ಯುನ್ನಾನ್ ಮತ್ತು ನಿಂಗ್‌ಕ್ಸಿಯಾದಲ್ಲಿ ತಲಾ 2 ಮತ್ತು ಸಿಚುವಾನ್‌ನಲ್ಲಿ ಒಂದು ಪ್ರಕರಣ ವರದಿಯಾಗಿದೆ.








