ಭೀಕರ ಪ್ರವಾಹಕ್ಕೆ ಚೀನಾ ತತ್ತರ – 33ಕ್ಕೇರಿದ ಮೃತರ ಸಂಖ್ಯೆ..!  

3 min read

ಭೀಕರ ಪ್ರವಾಹಕ್ಕೆ ಚೀನಾ ತತ್ತರ – 33ಕ್ಕೇರಿದ ಮೃತರ ಸಂಖ್ಯೆ..!

ಇಡೀ ವಿಶ್ವಕ್ಕೆ ಕೊರೊನಾ ಹಂಚಿದ್ದ ಚೀನಾದಲ್ಲಿ ಈಗ ರಣಭೀಕರ ಪ್ರವಾಹ ಉಂಟಾಗಿದ್ದು, ಚೀನಾವನ್ನ ತಲ್ಲಣಗೊಳಿಸಿದೆ. ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಸಾವಿಗೀಡಾದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.. ಇಲ್ಲಿಯವಬರೆಗೂ 8ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.. ಹೆನಾನ್‌ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದಾಗಿ 30 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದು, 3,76,000 ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಾಂತ್ಯದ ತುರ್ತು ನಿರ್ವಹಣಾ ಇಲಾಖೆಯು ತಿಳಿಸಿದೆ.

ಪ್ರವಾಹದಿಂದಾಗಿ 2,15,200 ಹೆಕ್ಟರ್‌ಗೂ ಹೆಚ್ಚು ಬೆಳೆಗಳು ಹಾನಿಯಾಗಿವೆ. ಹೆನಾನ್‌ ಪ್ರಾಂತ್ಯದ ಜೆಂಗ್‌ಜೌನಲ್ಲಿ ಸಬ್‌ವೇ ಮಾರ್ಗಗಳು ಜಲಾವೃತಗೊಂಡಿವೆ  ಎಂದು ವರದಿಯಾಗಿದೆ. ಇನ್ನೂ ಪ್ರವಾಹ ಪರಿಸ್ಥಿತಿ ಅತ್ಯಂತ ಘೋರವಾಗಿದೆ. ಇದರಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆನಾನ್‌ ಪ್ರಾಂತ್ಯ ಮತ್ತು ಜೆಂಗ್‌ಜೌ ನಗರವು ಪ್ರವಾಹದಿಂದಾಗಿ ಅತಿ ಹೆಚ್ಚು ಹಾನಿಗೊಳಗಾಗಿದೆ. ಹಾಗಾಗಿ ಅಧಿಕಾರಿಗಳು ಜನರ ಸುರಕ್ಷತೆಗೆ ಪ್ರಮುಖ ಆದ್ಯತೆ ಕೊಡಬೇಕು ಎಂದು ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿನ್‌ ಆದೇಶಿಸಿದ್ದಾರೆ.

ಜೆಂಗ್‌ ಜೌ ಮತ್ತು ಇತರೆ ನಗರಗಳು ಜಲಾವೃತವಾಗಿವೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವು ಅಣೆಕಟ್ಟೆಗಳಿಗೆ ತೀವ್ರ ಹಾನಿ ಉಂಟಾಗಿದೆ. ಕೆಲವು ಕಡೆಗಳಲ್ಲಿ ರೈಲು ಮತ್ತು ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿದೆ. 80 ಕ್ಕೂ ಹೆಚ್ಚು ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. 100 ಕ್ಕೂ ಹೆಚ್ಚು ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸಬ್‌ ವೇ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಒಟ್ಟಾರೆ ಚೀನಾದಲ್ಲಿ ನೆರೆ ಪರಿಸ್ಥಿತಿ ಅತ್ಯಂತ ಭೀಕರವಾಗಿದ್ದು, ಸಾವಿರಾರು ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ.. ಆದ್ರೆ ವರಣು ಶಾಂತನಾಗುವ ಲಕ್ಷಣಗಳು ಕಾಣುಸತ್ತಿಲ್ಲ.

ಚೀನಾದಲ್ಲಿ ಭೀಕರ ಪ್ರವಾಹದಿಂದಾಗಿ ಹಲವೆಡೆ ಜನರು ಪರದಾಡ್ತಿದ್ರೆ, ರಸ್ತೆಗಳಲ್ಲಿ ನದಿಯಂತೆ ಮಳೆ ನೀರು ಉಕ್ಕಿ ಹರಿಯುತ್ತಿವೆ.. ಇನ್ನೂ ಹಲವೆಡೆ ಜನರು ಕೂದಳೆಲೆ ಅಂತರದಲ್ಲಿ ಪಾರಾಗಿದ್ರೆ, ನೀರಿನಲ್ಲಿ ಕಾರುಗಳ ವಾಹನಗಳು ಕೊಚ್ಚಿ ಹೋಗುತ್ತಿರುವಂತ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾಯಿದ್ದು , ನೆಟ್ಟಿಗರ ಜೀವ ಝಲ್ ಎನಿಸಿದೆ.

ಬೀಜಿಂಗ್ ಹಾಗೂ ಹೆನಾನ್ ಪ್ರಾಂತ್ಯದಲ್ಲಿ ಕಳೆದ ಕೆಲ ದಿನಗಳಿಂದ ದಾಖಲೆ ಪ್ರಮಾಣದ ಮಳೆಯಾಗುತ್ತಿದ್ದು, ಇದುವರೆಗೆ 1 ಕೋಟಿಗೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಜತೆಗೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd