ಮಾಹಾಮಾರಿಯ ತವರಲ್ಲಿನ ಮೌಢ್ಯಾಚರಣೆ ಬಗ್ಗೆ ಕೇಳಿದ್ರೆ ಬೆರಗಾಗ್ತೀರಾ..!
ಮೂಡ ನಂಬಿಕೆ ಅಂದ್ರೆ ಕೇವಲ ಭಾರತದಲ್ಲಿ ಮಾತ್ರವೇ ಇದೆ ಅನ್ನೋ ತಪ್ಪು ಕಲ್ಪನೆ ಸಾಕಷ್ಟು ಜನರಲ್ಲಿದೆ. ವಿಶಿಷ್ಠ ಪದ್ದತಿಗಳು, ವಿಚಿತ್ರ ಆಚಾರ , ಸಂಪ್ರದಾಯಗಳು, ಮೌಢ್ಯಾಚರಣೆ ಕೇವಲ ಭಾರತದಲ್ಲಿ ಮಾತ್ರ ಇದೆ ಅನ್ಕೊಂಡಿದ್ರೆ ಅದು ತಪ್ಪು. ವಿಶ್ವದ ಎಷ್ಟೋ ರಾಷ್ಟ್ರಗಳಲ್ಲಿ ಮಾಡುವ ವಿಚಿತ್ರ ಆಚರಣೆಗಳು, ರೂಢಿಸಿಕೊಂಡು ಬಂದಿರುವ ವಿಚಿತ್ರ ಸಂಪ್ರದಾಯಗಳು ಕೆಲವೊಂದು ವಿಚಿತ್ರ ಎನ್ನಿಸಿದ್ರೆ, ಕೆಲವೊಂದು ಅಸಹ್ಯ ಎನ್ನಿಸುತ್ತೆ. ಕೆಲವೊಂದು ಭಯ ಆಗುತ್ತೆ. ನಿಜಕ್ಕೂ ಹೀಗೂ ಇರುತ್ತಾ ಅನ್ನಿಸುತ್ತೆ. ಅಂತಹ ದೇಶಗಳನ್ನ ನೋಡುದ್ರೆ ಚೀನಾ ಬೆಸ್ಟ್ ಎಕ್ಸಾಂಪಲ್.
ಮೂಲಗಳ , ಸಂಶೋಧನೆ, ವಿಮರ್ಶೆಗಳ ಪ್ರಕಾರ ಮೌಢ್ಯಾಚರಣೆಯಲ್ಲಿ ಚೀನಾ ಭಾರತದ ನಂತರ 2ನೇ ಸ್ಥಾನದಲ್ಲಿದೆ. ಆದ್ರೆ ಅಲ್ಲಿರುವಂತಹ ಕೆಲವು ಅಸಹ್ಯ ಆಚರಣೆಗಳು , ಕೆಲ ವಿಚಿತ್ರ ಪದ್ಧತಿಗಳು ಬೆಚ್ಚಿ ಬೀಳಿಸುತ್ತೆ. ಅಂತಹ ಕೆಲವೇ ಕೆಲವು ಆಚರಣೆಗಳು ಇಲ್ಲಿವೆ ನೋಡಿ.
ಶವಗಳ ಮದುವೆ
ಹೌದು ಚೀನಾದ ಶಾಂಕ್ಸಿ ಎಂಬ ಪ್ರದೇಶದಲ್ಲಿ ಅವಿವಾಹಿತ ಹುಡುಗ ಸಾವನ್ನಪ್ಪಿದ್ರೆ ಆತನ ಅಂತ್ಯಸಂಸ್ಕಾರದ ಬದಲು ಅವಿವಾಹಿತ ಮೃತ ಹುಡುಗಿ ಶವದ ಜೊತೆಗೆ ಮದುವೆ ಮಾಡಲಾಗುತ್ತೆ. ಅವಿವಾಹಿತ ಮೃತ ಹುಡುಗಿಯ ಶವ ಹುಡುಕಿ ಮದುವೆ ಮಾಡಿಸ್ತಾರೆ. ಹುಡುಗಿಯ ಶವ ಸಿಗದೇಇದ್ದ ಪಕ್ಷದಲ್ಲಿ ಬೇರೆ ಕಡೆ ಶವ ಕಳ್ಳತನ ಮಾಡಿಯಾದರೂ ಮದುವೆ ಮಾಡಿಸುತ್ತಾರೆ. ಹೀಗೆ ಮಾಡಿದ್ರೆ ಹುಡುಗನ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂಬುದು ಅಲ್ಲಿನ ಜನರ ನಂಬಿಕೆ.
ಮದುವೆ – ಕಣ್ಣೀರು
ಏನಿದು ಮದುವೆ ಕಣ್ಣೀರು… ಅಂದ್ಹಾಗೆ ನಮ್ಮಲ್ಲಿ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ ಎಂದಾಗ ಮಧುಮಗಳನ್ನ ತುಂಬಾ ಖುಷಿಖುಷಿಯಾಗಿ ನೋಡಿಕೊಳ್ತೀವಿ. ಸದಾ ನಗುತ್ತಲೇ ಇರಲು ಹೇಳ್ತೀವಿ. ಆದ್ರೆ ಚೀನಾದ ವೂಲಿಂಗ್ ಪರ್ವತ ಪ್ರದೇಶದಲ್ಲಿ ಮದುವೆಗೆ 1 ತಿಂಗಳು ಇರುವಾಗ ಮದುವೆಯಾಗುತ್ತಿರುವ ಯುವತಿಯರು ಪ್ರತಿದಿನ ಕಣ್ಣೀರು ಹಾಕಬೇಕು. ಅಳುತ್ತಲೇ ಇರಬೇಕಂತೆ. ಹೀಗೆ ಮಾಡಿದ್ರೆ ಗಂಡನ ಮನೆಯಲ್ಲಿ ಸುಖ ಶಾಂತಿ ಲಭ್ಯವಾಗುತ್ತೆ ಎಂದು ಅಲ್ಲಿನ ಜನರು ನಂಬಿದ್ದಾರೆ.
ಡಾಗ್ ಮೀಟ್ ಫೆಸ್ಟ್
ಡಾಗ್ ಮೀಟ್ ಫೆಸ್ಟ್.. ಕೇಳೋದಕ್ಕೆ ಅಸಹ್ಯ ಅನ್ನಿಸುತ್ತೆ.. ಆದ್ರೆ ಇದು ನಿಜ ಚೀನಾದಲ್ಲಿ ಸಾಮಾಜನ್ಯವಾಗಿ ಎಲ್ಲಾ ಪ್ರಾಣಿಗಳು, ಹುಳ ಹಪ್ಪಡಟೆಗಳು, ಚೇಳು, ಹಾವು ಏನನ್ನು ಬಿಡದೇ ತಿಂತಾರೆ. ಅದ್ರಲ್ಲಿ ನಾಯಿನೂ ಒಂದು. ಹೌದು ಚೀನಾದಲ್ಲಿ ಅನೇಕರು ನಾಯಿ ಮಾಂಸವನ್ನ ತಿನ್ನುತ್ತಾರೆ. ವಿಚಿತ್ರ ಅಂದ್ರೆ ಚೀನಾದಲ್ಲಿ ವರ್ಷಕ್ಕೊಮ್ಮೆ ಡಾಗ್ ಫೆಸ್ಟ್ ನಡೆಸ್ತಾರೆ. ಈ ಫೆಸ್ಟ್ನಲ್ಲಿ ಸಾವಿರಾರು ನಾಯಿಗಳ ಮಾರಣ ಹೋಮ ಮಾಡ್ತಾರೆ. ಇನ್ನೂ ಈ ಫೆಸ್ಟ್ ಗೆ ಬೀದಿ ನಾಯಿಗಳನ್ನ ರಸ್ತೆಗಳಿಂದ ಎಳೆದು ತೊಂದು ಕೊಂದು ತಿಂತಾರೆ. ನಿಜಕ್ಕೂ ಇದು ಅಸಹ್ಯ. ಆದ್ರೆ ಹೀಗೆ ಡಾಗಗ್ ಫೆಸ್ಟ್ ಮಾಡೋದ್ರಿಂದ ಒಳ್ಳೆಯದಾಗುತ್ತೆ ಅನ್ನೋದು ಚೀನೀಯರ ನಂಬಿಕೆ. ಇನ್ನೂ ಚೀನಾದ ಯೂಲಿನ್, ಗುವಾಂಕ್ಸಿಯಲ್ಲಿ ಈ ಡಾಗ್ ಮೀಟ್ ಫೆಸ್ಟ್ ನಡೆಯುತ್ತೆ. ಇನ್ನೂ ನಿಜಕ್ಕೂ ನಾಯಿ ಪ್ರಿಯರ ಸಿಟ್ಟಿಗೇರಿಸುವ ವಿಚಾರವೆಂದ್ರೆ ಈ ಫೆಸ್ಟ್ ನಲ್ಲಿ ನಾಗಿಗಳಿಗೆ ಸಿಕ್ಕಾಪಟ್ಟೆ ಚಿತ್ರಹಿಂಸೆ ಕೊಟ್ಟು ಜೀವಂತವಾಗಿಯೇ ಬೇಯಿಸ್ತಾರಂತೆ ಹೀಗೆ ಮಾಡಿದ್ರೆ ರುಚಿ ಹೆಚ್ಚಾಗುತ್ತೆ ಅನ್ನೋ ನಂಬಿಕೆಯಿದೆ. ಆದ್ರೆ ಈ ಬಗ್ಗೆ ಒಪ್ಪಿಕೊಳ್ಳಲು ಚೀನಾ ತಯಾರಿಲ್ಲ. ಆದ್ರೆ ಡಾಗ್ ಮೀಟ್ ಫೆಸ್ಟ್ ಮಾಡುವುದಕ್ಕೆ ಅನೇಕ ಸಾಕ್ಷಿ ಪುರಾವೆಗಳಿವೆ.
ಸಂಖ್ಯೆ 4 ಅಶುಭ
ಚೈನಾದಲ್ಲಿ ಸಂಕ್ಯೆ 4ಅನ್ನು ಅಶುಭ ಎಂದು ಪರಿಗಣಿಸಿದ್ದಾರೆ.
ಗಡ್ಡ ಇದ್ರೆ ಕೆಡುತು
ಅಂದ್ಹಾಗೆ ಸಾಮಾನ್ಯವಾಗಿ ಪುರುಷರಿಗೆ ಗಡ್ಡ ಮೀಸೆ ಇದ್ರೆನೇ ಗತ್ತು. ಒಂದು ಗೌರವ ಅಂತ ಹೇಳಲಾಗುತ್ತೆ. ಆದ್ರೆ ಹೆಚ್ಚಾಗಿ ಚೀನಾ ಆಗಿರಬಹುದು ಕೊರಿಯಾ ಆಗಿರಬಹುದು ಪುರುಷರು ಯಾವಾಗಲು ಗಡ್ಡ ಮೀಸೆ ಶೇವ್ ಮಾಡಿರೋದನ್ನ ನೋಡ್ತೇವೆ. ಯಾರೂ ಸಹ ಯಾರೂ ಸಹ ಗಡ್ಡ ಬಿಡೋದಿಲ್ಲ. ಇದೇ ಕಾರಣದಿಂದಾಗಿ ಕೆಲವೊಮ್ಮೆ ಅವರನ್ನ ನೋಡಿದ್ರೆ ಹುಡುಗಿಯರಂತೆ ಕಾಣ್ತಾರೆ. ಆದ್ರೆ ಹೀಗೆ ಗಡ್ಡ ಮೀಸೆ ಬೆಳಸಿದ್ರೆ ಅಶುಭ , ಕೆಟ್ಟದ್ದಾಗುತ್ತೆ ಅನ್ನೋ ನಂಬಿಕೆಯಿದೆಯಂತೆ. ಹೀಗಾಗಿ ಯಾವಾಗಲು ಅಲ್ಲಿನ ಪುರುಷರು ಗಡ್ಡ ಮೀಸೆ ಶೇವ್ ಮಾಡಿರುತ್ತಾರಂತೆ.
ಆಮೆ ಸಾಕುವುದು ಉದ್ಯಮಕ್ಕೆ ಕೆಡುಕು
ಹೌದು ಆಮೆ ಸಾಕೋದ್ರಿಂದ ವ್ಯವಹಾರಗಳಲ್ಲಿ ನಷ್ಟವಾಗುತ್ತೆ . ಮನೆ ಯಜಮಾನನ ವ್ಯವಹಾರಕ್ಕೆ ಕುತ್ತು ಎಂಬ ನಂಬಿಕೆಯಿದೆ.
ಹೀಗೆ ಅನೇಕ ವಿಚಿತ್ರ ಸಂಪ್ರದಾಯ ಆಚರ ವಿಚಾರಗಳು ಚೀನಾದಲ್ಲಿದೆ. ಚೀನಾದಲ್ಲಿ ಕೇವಲ ಆಹಾರ ಪದ್ಧತಿ ಅಷ್ಟೇ ವಿಚಿತ್ರ ಅಲ್ಲ. ಆಚರ , ಪದ್ಧತಿಗಳು ವಿಚಿತ್ರ. ಭಾರತಕ್ಕಿಂತ ಹೆಚ್ಚು ಚೀನಾದಲ್ಲೇ ವಿಚಿತ್ರ ಪದ್ಧತಿಗಳು ಆಚರಣೆಯಲ್ಲಿದೆ ಅನ್ನೋದು ಹಲವರ ವಾದ. ಹೀಗಾಗಿ ಮೌಢ್ಯಾಚರಣೆ ಅತ ಬಂದಾಗ ಕೇವಲ ಭಾರತದೆಡೆಗೆ ಬೊಟ್ಟು ಮಾಡುವುದಲ್ಲ. ಪ್ರಪಂಚದಾದ್ಯಂತ ಅನೇಕ ವಿಚಿತ್ರ ಆಚರಣೆಗಳು ಈಗಲೂ ರೂಢಿಯಲ್ಲಿವೆ. ಕಾಲ ಬದಲಾದ್ರೂ ಕೆಲ ಸಂಪ್ರದಾಯಗಳು ಬದಲಾಗಲ್ಲ.