ಭಾರತದ ಜೊತೆ ‘ಗಡಿಯುದ್ಧ’ದಲ್ಲಿ ಚೀನಾ..!

1 min read

ಭಾರತದ ಜೊತೆ ‘ಗಡಿಯುದ್ಧ’ದಲ್ಲಿ ಚೀನಾ..!

ಅಮೆರಿಕಾದ ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದ ಜಾನ್ ಕಾರ್ನಿನ್ ಅವರು ಚೀನಾ ಭಾರತದ ನಡುವಿನ ಗಡಿ ಸಂಘರ್ಷದ ಬಗ್ಗೆ ಮಾತನಾಡಿದ್ದಾರೆ.. ಭಾರತದ ಜೊತೆಗೆ ಚೀನಾ ‘ಗಡಿ ಯುದ್ಧ’ದಲ್ಲಿ ತೊಡಗಿದೆ.. ಈ ಮೂಲಕ ತನ್ನ ನೆರೆಯ ದೇಶಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದಿದ್ದಾರೆ ಜಾನ್ ಕಾರ್ನಿನ್..

ಆಗ್ನೇಯ ಏಷ್ಯಾ ಹಾಗೂ ನವದೆಹಲಿಯ ಭೇಟಿಯ ವರದಿಯನ್ನ ಅಮೆರಿಕಾ ಸೆನೆಟ್ ಗೆ ಸಲ್ಲಿಸಿರುವ ಅವರು  ಈ ಪ್ರದೇಶಗಳಲ್ಲಿ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳು , ಸವಾಲುಗಳು , ಬೆದರಿಕೆಗಳ ಬಗ್ಗೆ ವಿವರಿಸಿದ್ದಾರೆ..

ಇನ್ನೂ ಸೆನೆಟರ್ ಜಾನ್ ಅವರು ಭಾರತದ ಕಾಕಸ್ ನ ಸಹ – ಅಧ್ಯಕ್ಷರೂ ಸಹ ಆಗಿದ್ದಾರೆ.. ಜಾನ್ ತಮ್ಮ ಸಹೋದ್ಯೋಗಿಗಳನ್ನ ಒಳಗೊಂಡ ಕಾಂಗ್ರೆಸ್  ನಿಯೋಗದ ಜೊತೆಗೆ ಇತ್ತೀಚೆಗೆ  ಭಾರತ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳಿಗೆ ಭೇಟಿ ನೀಡಿ ಹಿಂದಿರುಗಿದ್ದರು..

ಇದೀಗ ಅವರು ಭೇಟಿ ಮಾಡಿದ ಪ್ರದೇಶಗಳಲ್ಲಿ ಚೀನಾ ಒಡ್ಡುತ್ತಿರುವ ಸವಾಲುಗಳ ನೇರ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಚೀನಾದ ಗಡಿಗಳಿಗೆ ಹತ್ತಿರವಿರುವ ದೇಶಗಳಿಗೆ ಅತ್ಯಂತ ಗಂಭೀರ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ ಎಂದು ಕಾರ್ನಿನ್ ಸೆನೆಟ್ ಸದಸ್ಯರಿಗೆ ತಿಳಿಸಿದ್ದಾರೆ.

ಕಳೆದ ವಾರ ಆ ಪ್ರದೇಶದಲ್ಲಿನ ಬೆದರಿಕೆಗಳು ಮತ್ತು ಸವಾಲುಗಳ ಬಗ್ಗೆ ನೇರವಾಗಿ ತಿಳಿದುಕೊಳ್ಳಲು ಆಗ್ನೇಯ ಏಷ್ಯಾಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಿಯೋಗವನ್ನು ಮುನ್ನಡೆಸುವ ಅವಕಾಶ ನನಗೆ ಸಿಕ್ಕಿತ್ತು ಎಂದು ಅವರು ಹೇಳಿದ್ದಾರೆ.

ವಿಶ್ವದ ಶ್ರೀಮಂತ ದೇಶದ ಪಟ್ಟಿಯಲ್ಲಿ ಚೀನಾಗೆ ಮೊದಲ ಸ್ಥಾನ

ಅಲ್ಲದೇ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ನೌಕಾಯಾನ ಸ್ವಾತಂತ್ರ್ಯಕ್ಕೆ ಚೀನಾ ಬೆದರಿಕೆ ಹಾಕುತ್ತಿದೆ. ಮುಸ್ಲಿಂ ಅಲ್ಪಸಂಖ್ಯಾತ ಉಯ್ಘರ್ ಸಮುದಾಯದಂತಹ ತನ್ನದೇ ದೇಶದ ಜನರ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆಯ ಅಪರಾಧವೆಸಗುತ್ತಿದೆ. ಭಾರತದೊಂದಿಗೆ ಗಡಿ ಯುದ್ಧದಲ್ಲಿ ತೊಡಗಿದೆ. ತೈವಾನ್ ಅನ್ನು ಆಕ್ರಮಿಸುವ ಬೆದರಿಕೆಯನ್ನು ಒಡ್ಡಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಭೇಟಿ ನೀಡಿದ್ದ ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಯಾಬಿನೆಟ್ ಅಧಿಕಾರಿಗಳನ್ನು ಭೇಟಿ ಮಾಡಿ ಚೀನಾದಿಂದ ಎದುರಿಸುತ್ತಿರುವ ಬೆದರಿಕೆಗಳು ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಕೂಡ ಕಾರ್ನಿನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd