ವಿಶ್ವದ ಶ್ರೀಮಂತ ದೇಶದ ಪಟ್ಟಿಯಲ್ಲಿ ಚೀನಾಗೆ ಮೊದಲ ಸ್ಥಾನ china saaksha tv
ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿ ಚೀನಾ ಅಗ್ರಸ್ಥಾನ ಪಡೆದುಕೊಂಡಿದೆ.
ಕಳೆದ ಎರಡು ದಶಕಗಳಲ್ಲಿ ಡ್ರ್ಯಾಗನ್ ದೇಶ, ಜಾಗತಿಕ ಸಂಪತ್ತನ್ನು ಮೂರು ಪಟ್ಟು ದುಪ್ಪಟ್ಟು ಮಾಡಿಕೊಂಡಿದೆ.
ಇದರೊಂದಿಗೆ ವಿಶ್ವದ ದೊಡ್ಡಣ್ಣನನ್ನು ಹಿಂದಿಕ್ಕಿ ಚೀನಾ ವಿಶ್ವದ ಶ್ರೀಮಂತ ರಾಷ್ಟ್ರವಾಗಿದೆ.
ಮೆಕ್ಕಿನ್ಸೆ ಮತ್ತು ಕೋ ಕನ್ಸಲ್ಟೆಂಟ್ಸ್ ಸಂಶೋಧನಾ ವರದಿಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಅಧ್ಯಯನದ ಪ್ರಕಾರ.. ವಿಶ್ವದಾದ್ಯಂತ ನಿವ್ವಳ ಮೌಲ್ಯವು 2020ರಲ್ಲಿ 514 ಲಕ್ಷ ಕೋಟಿ ಡಾಲರ್ ಏರಿಕೆಯಾಗಿದೆ.
2000 ವರ್ಷದಲ್ಲಿ ಈ ಪ್ರಮಾಣ 156 ಲಕ್ಷ ಕೋಟಿ ಡಾಲರ್ ಆಗಿತ್ತು. ಈ ಏರಿಕೆಯಲ್ಲಿ ಮೂರನೇ ಒಂದು ಭಾಗ ಚೀನಾದ್ದಾಗಿದೆ.