ದಾಸನ ಮುಂದಿನ ಚಿತ್ರದ ಟೈಟಲ್ ಅನೌನ್ಸ್ : #KrantiBegins ಎಂದ ದಚ್ಚು

1 min read

ದಾಸನ ಮುಂದಿನ ಚಿತ್ರದ ಟೈಟಲ್ ಅನೌನ್ಸ್ : #KrantiBegins ಎಂದ ದಚ್ಚು

ಬೆಂಗಳೂರು : ಗಣೇಶ ಹಬ್ಬದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ತಮ್ಮ 55 ನೇ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಅನ್ನು ದಾಸ ಅನಾವರಣಗೊಳಿಸಿದ್ದಾರೆ.

ದರ್ಶನ್ ರ ಮುಂದಿನ ಸಿನಿಮಾಗೆ ‘ಕ್ರಾಂತಿ’ ಎಂಬ ಟೈಟಲ್ ಇಡಲಾಗಿದೆ.

darshan saaksha tv

ಸಿನಿಮಾದ ಪೋಸ್ಟರ್ ಅನ್ನು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ.

ಇನ್ನು ಈ ಚಿತ್ರವನ್ನು ವಿ. ಹರಿಕೃಷ್ಣ ನಿರ್ದೇಶಿಸುತ್ತಿದ್ದು, ಶೈಲಜಾ ನಾಗ್ ಮತ್ತು ಬಿ. ಸುರೇಶ್ ನಿರ್ಮಾಣ ಮಾಡಲಿದ್ದಾರೆ.

ದರ್ಶನ್ ಈ ಪೋಸ್ಟರ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ನಮ್ಮ ಮುಂದಿನ ಚಿತ್ರಕ್ಕೆ ‘ಕ್ರಾಂತಿ’ ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd