ಚಾಮರಾಜನಗರ : ಲಸಿಕೆ ಪಡೆದಿದ್ದ ಜಿಲ್ಲಾಧಿಕಾರಿಗೆ ಕೊರೊನಾ ದೃಢ

1 min read

Chamarajanagar ಚಾಮರಾಜನಗರ : ಲಸಿಕೆ ಪಡೆದಿದ್ದ ಜಿಲ್ಲಾಧಿಕಾರಿಗೆ ಕೊರೊನಾ ದೃಢ

ಚಾಮರಾಜನಗರ : ಎರಡು ಬಾರಿ ಕೋರೊನಾ ನಿಯಂತ್ರಣ ಮಾಡುವ ಲಸಿಕೆ ಪಡೆದಿದ್ದ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ಆರ್. ರವಿ ರವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಎರಡು ದಿನಗಳ ಹಿಂದೆ ಶೀತ ನೆಗಡಿ, ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ಶನಿವಾರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು.

ಭಾನುವಾರ ಫಲಿತಾಂಶ ಬಂದಿದ್ದು,ಕೊರೊನಾ ಸೋಂಕಿರುವುದು ದೃಢವಾಗಿದೆ.

Chamarajanagar

ಕೋರೊನಾ ಸೋಂಕು ದೃಡವಾಗಿರುವ ಸಂಗತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ವಯಂ ಹೋಂ ಐಸೋಲೇಷನ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಫೆಬ್ರವರಿ 8 ರಂದು ಮೊದಲ ಡೋಸ್ ಕೋವಿಡ್ ನಿರೋಧಕ ಲಸಿಕೆ ಪಡೆದಿದ್ದರು.

ಮಾರ್ಚ್ 8 ರಂದು ಎರಡನೇ ಡೋಸ್ ಲಸಿಕೆ ಸಹ ಪಡೆದಿದ್ದರು. ಎರಡನೇ ಡೋಸ್ ಪಡೆದು 27 ದಿನಗಳಾಗಿತ್ತು.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd