Chamarajanagar : ಹುಲಿ ಹಿಡಿಯಲು ಹೋದ ಗ್ರಾಮಸ್ಥರು.. ಮುಂದೆ ಆಗಿದ್ದೇನು ಗೊತ್ತಾ..?
ಚಾಮರಾಜನಗರ : ರೈತರ ಮೇಲೆ ದಾಳಿ ನಡೆಸಿದ್ದ ಹುಲಿಯನ್ನ ರೈತರೇ ಹಿಡಿಯುವ ಸಾಹಸಕ್ಕೆ ಮುಂದಾಗಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಪುರ – ಲಕ್ಕೀಪುರ ಗ್ರಾಮ ಬಳಿ ರೈತರ ಮೇಲೆ ಹುಲಿ ದಾಳಿ ನಡೆಸಿತ್ತು.
ಗ್ರಾಮದ ಬಳಿ ರೈತರ ಮೇಲೆ ಹುಲಿ ದಾಳಿ ನಡೆಸಿದ ವಿಷಯ ತಿಳಿದು ಆತಂಕಕ್ಕೆ ಒಳಗಾದ ನೂರಾರು ರೈತರು ಹುಲಿ ಸೆರೆ ಹಿಡಿಯಲು ಮುಂದಾಗಿದ್ದಾರೆ.
ಅದರಂತೆ ತೋಟದಲ್ಲಿದ್ದ ಹುಲಿಯ ವಿಡಿಯೋ ಮಾಡಿದ್ದಾರೆ.

ಆಗ ಹುಲಿ ಜನರತ್ತ ಘರ್ಜಿಸುತ್ತಾ ಮುನ್ನುಗ್ಗಿದೆ. ಇದರಿಂದ ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಇನ್ನು ಜನರ ಈ ನಡೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿ, ಅರವಳಿಕೆ ಇಂಜೆಕ್ಷನ್ ಮೂಲಕ ಹುಲಿಯನ್ನು ಸೆರೆ ಹಿಡಿಯುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದರೊಂದಿಗೆ ಹುಲಿಯನ್ನು ಹಿಡಿಯುವ ಗ್ರಾಮಸ್ಥರ ಪ್ಲಾನ್ ಗೆ ಬ್ರೇಕ್ ಬಿದ್ದಿದೆ.
ಇತ್ತ ಹುಲಿಯು ಸಂಚರಿಸುವ ಜಾಡು ಹಿಡಿದಿರುವ ಅರಣ್ಯ ಅಧಿಕಾರಿಗಳು ಹುಲಿ ಸೆರೆಗೆ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.