ಚಾಮರಾಜನಗರ ಜಿಲ್ಲಾಡಳಿತ ಸತ್ತೇ ಹೋಗಿದೆ : ವಾಟಾಳ್ ನಾಗರಾಜ್
ಚಾಮರಾಜನಗರ : ಚಾಮರಾಜನಗರ ಜಿಲ್ಲಾಡಳಿತ ಸತ್ತೇ ಹೋಗಿದೆ. ಹೇಳುವವರು ಕೇಳುವವರು ಯಾರೂ ಇಲ್ಲದೆ ದಿಕ್ಕು ದಿಸೆ ಇಲ್ಲದಂತಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟ ಪ್ರಕರಣದ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕ್ಸಿಜನ್ ಕೊರತೆಯಿಂದ ಸೋಂಕಿತರ ಸಾವು ಪ್ರಕರಣದ ಆರೋಪಿಗಳಿಗೇಕೆ ಶಿಕ್ಷೆಯಿಲ್ಲ.

ಕೋರೊನಾ ಲಸಿಕೆ ಮಾರಾಟ ಮಾಡ್ತಾ ಇದ್ದ ವೈದ್ಯರನ್ನು ಬಂಧಿಸಿ ಜೈಲಿಗೆ ಕಳುಹಿಸುವಿರಿ. ಕೋರೊನಾ ಸೋಂಕಿಯರ ಸಾವಿಗೆ ಕಾರಣರಾವರನ್ನು ರಕ್ಷಿಸುತ್ತೀರಿ. ಇದೇನಾ ಸರ್ಕಾರದ ಕಾರ್ಯ ವೈಖರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ಚಾಮರಾಜನಗರ ಜಿಲ್ಲಾಡಳಿತ ಸತ್ತೇ ಹೋಗಿದೆ. ಹೇಳುವವರು ಕೇಳುವವರು ಯಾರೂ ಇಲ್ಲದೆ ದಿಕ್ಕು ದಿಸೆ ಇಲ್ಲದಂತಾಗಿದೆ.
ಹದಿನೈದು ದಿನದೊಳಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ಕರಾಳ ದಿನಾಚರಣೆ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.








