ಚಾಮರಾಜನಗರ : ಕೆಆರ್ ಎಸ್, ಕಬಿನಿ ಯಿಂದ ನೀರು ಬಿಡುಗಡೆ ಆಗುತ್ತಿರುವ ಹಿನ್ನೆಲೆ ಕರುನಾಡಿನ ಜೀವ ನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ರಾಜ್ಯದ ನಯಾಗರ ಖ್ಯಾತಿಯ ಭರಚುಕ್ಕಿ ವೈಭವವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬಿದ್ದಿದ್ದು, ಜಿಲ್ಲಾಡಳಿತದ ಆದೇಶಕ್ಕೂ ಮುನ್ನವೇ ಪ್ರವಾಸಿಗರಿಗೆ ಪ್ರವೇಶ ನೀಡಲಾಗಿದೆ.
ಜಿಲ್ಲಾಧಿಕಾರಿಗಳು ಪ್ರವೇಶ ನಿರ್ಬಂಧ ತೆರವು ಆದೇಶ ಹೊರಡಿಸುವ ಮುನ್ನಾ ಅರಣ್ಯ ಇಲಾಖೆ ಭರಚುಕ್ಕಿಗೆ ಮುಕ್ತ ಪ್ರವೇಶ ನೀಡಿ ಮುಜುಗರಕ್ಕೀಡಾಗಿದೆ. ಕೋವಿಡ್ ಸೋಂಕು ಹಿನ್ನೆಲೆ ತಾತ್ಕಾಲಿಕವಾಗಿ ಭರಚುಕ್ಕಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದ್ರೆ ಪ್ರವಾಸಿಗರ ಒತ್ತಡಕ್ಕೆ ಮಣಿದು ಅರಣ್ಯ ಇಲಾಖೆ ನಿರ್ಬಂಧ ತೆರವು ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ನಿರ್ಬಂಧ ತೆರೆವಾಗುತ್ತಿದ್ದಂತೆ ಭೋರ್ಗರೆಯುವ ಭರಚುಕ್ಕಿ ವೈಭವ ನೋಡಲು ಮುನ್ನುಗ್ಗಿದ ಜನರು ಕೋವೊಡ್ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದರು.








