ವಾಟ್ಸಾಪ್ ಸ್ಟೇಟಸ್ ಬಿಚ್ಚಿಡ್ತು ‘ಅ’ ಸಂಬಂಧದ ಗುಟ್ಟು..!
ಚಾಮರಾಜನಗರ : ಅನೈತಿಕ ಸಂಬಂಧ ಹಿನ್ನೆಲೆ ವ್ಯಕ್ತಿಯನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.
ಭೀಮನ ಬೀಡು ಗ್ರಾಮದ ಶಿವಣ್ಣ @ ಶಿವ ಹತ್ಯೆಯಾದ ವ್ಯಕ್ತಿಯಾಗಿದ್ದು, ಗ್ರಾಮದ ಬಸವಶೆಟ್ಟಿ ಪತ್ನಿಯೊಂದಿಗೆ ಶಿವಣ್ಣ ಅನೈತಿಕ ಸಂಬಂಧ ಇರಿಸಿಕೊಂಡಿದ್ದನಂತೆ.
ಮನೆಯಲ್ಲಿ ಪತಿ ಇಲ್ಲದ ವೇಳೆ ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಶಿವಣ್ಣನ ಪತ್ನಿ ಗಂಡನಿಗೆ ಗೊತ್ತಾಗದ್ದಂತೆ ಸರಸ-ಸಲ್ಲಾಪದಲ್ಲಿ ತೊಡಗುತ್ತಿದ್ದಳು.
ಈ ನಡುವೆ ಪ್ರೇಯಸಿಗೆ ಮುತ್ತಿಡುವಾಗ ಪ್ರಿಯಕರ ಕ್ಲಿಕ್ಕಿಸಿದ ಫೋಟೋ ಅಕ್ರಮ ಸಂಬಂಧದ ಗುಟ್ಟನ್ನು ರಟ್ಟು ಮಾಡಿಬಿಟ್ಟಿತ್ತು. ಮುತ್ತಿಟ್ಟ ಫೋಟೋವನ್ನು ವಾಟ್ಸ್ ಆಯಪ್ ಸ್ಟೇಟಸ್ ಗೆ ಹಾಕಿಕೊಂಡ ಪ್ರಿಯಕರ ಪ್ರೇಯಸಿ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾನೆ.
ಸೌಭಾಗ್ಯಗೆ ಬಸವಶೆಟ್ಟಿ ಚುಂಬಿಸಿರುವ ಫೋಟೋವನ್ನೂ ನೋಡಿದ ಶಿವಣ್ಣ ಕೆಂಡಾಮಂಡಲವಾಗಿದ್ದ. ಅದೇ ಕೋಪದಲ್ಲಿ ಮನೆಗೆ ಬಂದ ಶಿವಣ್ಣನಿಗೆ ಕಂಡದ್ದು ತನ್ನ ಪತ್ನಿ ಪರಪುರಷನೊಂದಿಗೆ ಸಲ್ಲಾಪದಲ್ಲಿ ಮುಳುಗಿದ್ದ ದೃಶ್ಯ.
ಇದರಿಂದ ಮತ್ತಷ್ಟು ಕುಪಿತಗೊಂಡ ಶಿವಣ್ಣ ತನ್ನ ಪತ್ನಿಯ ಪ್ರಿಯಕರ ಬಸವಶೆಟ್ಟಿಯನ್ನ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದ ಬಸವಶೆಟ್ಟಿ(26)ಯನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಬದುಕುಳಿಯಲಿಲ್ಲ.
ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.