Chamarajanagar | ಶ್ರೀಗುರುಮಲ್ಲೇಶ್ವರ ವಿರಕ್ತ ಮಠದಲ್ಲಿ ಅಭಿನಂದನಾ ಸಮಾರಂಭ ಉದ್ಗಾಟನೆ
ಚಾಮರಾಜನಗರ : ಶ್ರೀ ಮಠದಲ್ಲಿ ಬಸವರಾಜಸ್ವಾಮಿಗಳ ಜನ್ಮ ಶತಮಾನೋತ್ಸವ , ಸಿದ್ದಬಸವರಾಜಸ್ಬಾಮಿಗಳ ಸಂಸ್ಕರೋತ್ಸವ , ಅನುಭವ ಮಂಟಪ , ಬಸವಪುತ್ಥಳಿ ಉದ್ಗಾಟನೆ, ಗ್ರಾಮಾಂತರ ಬಸವಜಯಂತಿಯ ಎರಡು ದಿನದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಲು ಕಾರಣೀಭೂತರಾದವರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮವನ್ನು ಶ್ರೀ ಸಿದ್ದಮಲ್ಲೇಶ್ವರ ಮಠದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಗಾಟಿಸಿದರು.

ಈ ವೇಳೆ ಶ್ರೀಸಿದ್ದಮಲ್ಲೇಶ್ವರ ಮಠದ ಶ್ರೀ ಚೆನ್ನಬಸವಸ್ವಾಮಿಗಳು ಮಾತನಾಡಿ, ಶ್ರೀ ಮಠದವತಿಯುಂದ ಭಕ್ತರಿಂದ ನಡೆದ ಎರಡು ದಿನದ ಕಾರ್ಯಕ್ರಮವು ಇತಿಹಾಸ ನಿರ್ಮಿಸಿದೆ. 1 ಲಕ್ಷ ಭಕ್ತರಿಗೆ ದಾಸೋಹ ಏರ್ಪಡಿಸಿ ಸುತ್ತಮುತ್ತಲಿನ ಗ್ರಾಮದ ಅನೇಕ ಭಕ್ತರು ತನುಮನ ಧನ ನೀಡಿ ಯಶಸ್ವಿ ಕಾರ್ಯಕ್ರಮಕ್ಕೆ ಕಾರಣೀಭೂತರಾದರು ಎಂದು ಎಲ್ಲರಿಗೂ ಕೃತಜ್ಣತೆ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮರಿಯಾಲ ಮಠದ ಶ್ರೀಗಳು, ಜಿಲ್ಲಾ ಉಸ್ತುವಾರು ಸಚಿವ ವಿ. ಸೋಮಣ್ಣ, ಬಿಜೆಪಿ ಮುಖಂಡರಾದ ಮಲ್ಲೇಶ , ಜಿಲ್ಲಾ ಎಸ್ಪಿ ಶಿವಕುಮಾರ್, ಎಎಸ್ಪಿ ಸುಂದರರಾಜ್ , ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ನಂದೀಶ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್, ತಾಲೂಕು ವೀರಶೈವದ ಅಧ್ಯಕ್ಷ ನಟೇಶ್,
ಜಿ.ಪಂ. ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್ , ಕರಿನಂಜನಪುರ ವೀರಭದ್ರಸ್ವಾಮಿ, ಕೋಡಿಮೊಳೆ ರಾಜಶೇಖರ್, ಕಾಳನಹುಂಡಿ ಗುರುಸ್ವಾಮಿ, ಬಿ.ಕೆ. ರವಿಕುಮಾರ್, ಪಿ.ಮರಿಸ್ವಾಮಿ ಅಯ್ಯನಪುರ ಶಿವಕುಮಾರ್, ಸೇರಿದಂತೆ ಭಕ್ತರು ಭಾಗವಹಿಸಿದ್ರು.








