“ಲಾಹೋರ್ ನಲ್ಲಿ ಕಗ್ಗತ್ತಲು…ನ್ಯೂಝಿಲ್ಯಾಂಡ್ ನಲ್ಲಿ ಕಾರ್ಮುಗಿಲು…ದುಬೈ ನಲ್ಲಿ ಬೆಳಕಿನ ಚಿತ್ತಾರ…ಕ್ರಿಕೆಟ್ ಧರ್ಮದ ನೆಲೆಬೀಡು ಭಾರತಲ್ಲಿ ದೀಪಾವಳಿ….! ಎಲ್ಲವೂ ಅಂದು ಕೊಂಡಂತೆ ಆಗಿರುತ್ತಿದ್ರೆ ಪಾಲಾಹೋರ್ ನಲ್ಲಿ ಕಗ್ಗತ್ತಲು…ನ್ಯೂಝಿಲ್ಯಾಂಡ್ ನಲ್ಲಿ ಕಾರ್ಮುಗಿಲು…ದುಬೈ ನಲ್ಲಿ ಬೆಳಕಿನ ಚಿತ್ತಾರ…ಕ್ರಿಕೆಟ್ ಧರ್ಮದ ನೆಲೆಬೀಡು ಭಾರತಲ್ಲಿ ದೀಪಾವಳಿ….! ಎಲ್ಲವೂ ಅಂದುಕೊಂಡಂತೆ ಆಗಿರುತ್ತಿದ್ರೆ ಇಂದು ಪಾಕಿಸ್ತಾನದ ಲಾಹೋರ್ ನಲ್ಲಿ ಕ್ರಿಕೆಟ್ ಹಬ್ಬದ ಬೆಳಕಿನ ಚಿತ್ತಾರವೇ ಮೂಡುತ್ತಿತ್ತು. ಆದ್ರೆ ಬಿಸಿಸಿಐ ಪಿಸಿಬಿ ಮಾತ್ರ ಅಲ್ಲ ಇಡೀ ಪಾಕಿಸ್ತಾನದ ಹಣೆಬರಹವನ್ನೇ ಬದಲಾಯಿಸಿ ಬಿಟ್ಟಿತ್ತು. ಯಾವುದೇ ಕಾರಣಕ್ಕೂ ಪಾಕ್ ನೆಲಕ್ಕೆ ಭಾರತೀಯ ಆಟಗಾರರು ಕಾಲು ಇಡಲ್ಲ.. ಅಷ್ಟೇ ಅಲ್ಲ icc ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಬಹಿ ಷ್ಕಾರ ಹಾಕೋ ನಿರ್ಧಾರ ಕೂಡ ಮಾಡಿತ್ತು. ಆಗ ಪಿಸಿಬಿ ಮತ್ತು ಪಾಕ್ ಸರ್ಕಾರ ಮೊಂಡಾಟ ಮಾಡಿದ್ರೂ ಬಿಸಿಸಿಐ ಡೋಂಟ್ ಕೇರ್. ಯಾಕಂದ್ರೆ ಕ್ರಿಕೆಟ್ ಜಗತ್ತನ್ನು ತನ್ನ ಬೆರಳ ತುದಿಯಲ್ಲಿ ಆಡಿಸ್ತಿರುವ ಬಿಸಿಸಿಐ ಗೆ ಪಾಕಿಸ್ತಾನದಿಂದ ಆಗಬೇಕಾಗಿರೋದು ಏನಿಲ್ಲ. ಇನ್ನೊಂದೆಡೆ icc ಬಾಸ್ ಜೈ ಶಾ ಖಡಕ್ ನಡೆಗೆ ತಲೆ ಬಾಗಿದ ಪಾಕಿಸ್ತಾನ ದುಬೈಗೆ ಬಂದು ಭಾರತದ ವಿರುದ್ಧ ಆಡಬೇಕಾಯಿತ್ತು. ದುಬೈನಲ್ಲಿಯೇ ಎಲ್ಲಾ ಪಂದ್ಯ ಗಳನ್ನು ಆಡಿದ ಭಾರತ ಫೈನಲ್ ನಲ್ಲಿ ನ್ಯೂಝಿ ಲಾಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಅದಕ್ಕಾಗಿಯೇ ಅಂದಿದ್ದು ಲಾಹೋರ್ ನಲ್ಲಿ ಕಗ್ಗತ್ತಲು…ನ್ಯೂಝಿಲ್ಯಾಂಡ್ ನಲ್ಲಿ ಕಾರ್ಮುಗಿಲು…ದುಬೈ ನಲ್ಲಿ ಬೆಳಕಿನ ಚಿತ್ತಾರ…ಕ್ರಿಕೆಟ್ ಧರ್ಮದ ನೆಲೆಬೀಡು ಭಾರತಲ್ಲಿ ದೀಪಾವಳಿ….! ಬಹುಷಃ ಆಯೋಜನೆ ಮಾಡಿದ ರಾಷ್ಟ್ರವೊಂದರಲ್ಲಿ ಫೈನಲ್ ಪಂದ್ಯ ನಡೆಯದೇ ಇರೋದು ಕ್ರಿಕೆಟ್ ಚರಿತ್ರೆಯಲ್ಲೇ ಇದೆ ಮೊದಲು. ಆದ್ರೆ ತನ್ನನ್ನು ಕೀಳಾಗಿ ಕಾಣುವ ರಾಷ್ಟ್ರಗಳ ಅಹಂಕಾರಕ್ಕೆ ಪೆಟ್ಟು ಕೊಟ್ಟಿರೋದು ಬಿಸಿಸಿಐಗೆ ಇದು ಮೊದಲ ಸಲವಲ್ಲ. ಈ ಹಿಂದೆ ಅಂದ್ರೆ 1983ರ ವಿಶ್ವ ಕಪ್ ಟೂರ್ನಿ ಗೆ ಕೇವಲ 2 ಪಾಸ್ ಗಳನ್ನು ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪಾಠ ಕಳಿಸಿದ್ದು ಕೂಡ ಬಿಸಿಸಿಐ. ರೋಟೇಷನ್ ಮಾದರಿಯಲ್ಲಿ ವಿಶ್ವ ಕಪ್ ಟೂರ್ನಿ ಯನ್ನು ಆಯೋಜನೆ ಮಾಡುವಂತೆ ಮಾಡಿದ್ದು ಆಗಿನ ಬಿಸಿಸಿಐ ಅಧ್ಯಕ್ಷ nkp ಸಾಳ್ವೆ. ಧಿರುಬಾಯಿ ಅಂಬಾನಿ ಪ್ರಾಯೋಜಕ್ತತ್ವದಲ್ಲಿ 1987ರ ವಿಶ್ವ ಕಪ್ ಆಯೋಜನೆ ಮಾಡಿ ಕ್ರಿಕೆಟ್ ಜನಕರಿಗೆ ಬುದ್ಧಿ ಕಳಿಸಿತ್ತು ಹಾಗೇ ಭಾರತದ ಕ್ರಿಕೆಟ್ ಗೆ ಹಣದ ಹೊಳೆಯನ್ನೇ ಹರಿಸಿದ ಮಸ್ಕರೇನಸ್ ನೆರವಿನಿಂದ 1996 ರಲ್ಲಿ ಅದೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೈಯಿಂದ ಅತಿತ್ಯ ವನ್ನೇ ಕಸಿದು ಕೊಂಡಿದ್ದು ಕೂಡ ಬಿಸಿಸಿಐನ money ಪವರ್. ರೋಟೇಷನ್ ಮಾದರಿಯಲ್ಲಿ 1996ರ ವಿಶ್ವ ಕಪ್ ಅನ್ನು ಇಂಗ್ಲೆಂಡ್ ಆಯೋಜನೆ ಮಾಡಬೇಕಿತ್ತು. ಆದ್ರೆ ಬಿಸಿಸಿಐ ಪವರ್ ಮುಂದೆ ಇಂಗ್ಲೆಂಡ್ ಕೂಡ ತಲೆ ಬಾಗಿ 1999ರ ವಿಶ್ವ ಕಪ್ ಟೂರ್ನಿ ಆಯೋಜನೆಗೆ ಒಪ್ಪಿಕೊಂದಿತ್ತು. ಈ ಮೂಲಕ 1983ರಲ್ಲಿ ಬಿಸಿಸಿಐನ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಅಪಹಾಸ್ಯ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 1996ರಲ್ಲಿ ಬಿಸಿಸಿಐನ ದುಡ್ಡಿಗೆ ಬಾಯಿ ಮುಚ್ಚಿಕೊಂಡಿತ್ತು. ಕಳೆದ 42 ವರ್ಷಗಳಿಂದ ಬಿಸಿಸಿಐ ಬೆಳೆದು ಬಂದ ಪರಿಯೇ ಒಂದು ರೋಚಕ ಅಧ್ಯಾಯ.
ಕೃಪೆ: ಸನತ್ ರೈ