ಚಾಮರಾಜನಗರ : ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ಧ ಮಲೆ ಮಹದೇಶ್ವರ ಭಕ್ತರು ಫುಲ್ ಗರಂ ಆಗಿದ್ದಾರೆ. ಗಣೇಶ ಹಬ್ಬಕ್ಕೆ ಚಂದನ್ ಶೆಟ್ಟಿ ಬಿಡುಗಡೆ ಮಾಡಿದ ‘ಕೋಲು ಮಂಡೆ ಜಂಗಮ ದೇವರು’ ರ್ಯಾಪ್ ಸಾಂಗ್ ಈಗ ವಿವಾದಕ್ಕೆ ಕಾರಣವಾಗಿದೆ.
ಚಂದನ್ ಶೆಟ್ಟಿ ವಿರುದ್ಧ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಕೇಳಿಬಂದಿದೆ. ಚಂದನ್ ತಮ್ಮ ಸಾಂಗ್ ನಲ್ಲಿ ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ವಿವಾದ ನಡುವೆ ಆಗಸ್ಟ್ 23 ರಂದು ಬಿಡುಗಡೆಯಾಗಿರುವ ಚಂದನ್ ರ ಕೋಲು ಮಂಡೆ ಜಂಗಮ ದೇವರು ರ್ಯಾಪ್ ಸಾಂಗ್, ಈಗಾಗಲೇ 35 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಯೂ ಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿದೆ.









