ಚಂದ್ರಬಾಬು ಕಣ್ಣೀರು : ರಾಜಕಾರಣಿಗಳಿಗೆ ಕೈ ಮುಗಿದ ಎನ್ ಟಿಆರ್
ಹೈದರಾಬಾದ್ : ಆಂಧ್ರ ಪ್ರದೇಶದ ರಾಜಕಾರಣ ತೀರಾ ಅತಿರೇಕಕ್ಕೆ ಹೋಗಿದೆ. ಜನರ ಬಗ್ಗೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿದ್ದ ರಾಜಕೀಯ ನಾಯಕರು, ವೈಯಕ್ತಿಕ ವಿಚಾರವಾಗಿ ಅಸಂಬ್ಲಿಯಲ್ಲಿ ಕಚ್ಚಾಡುತ್ತಿದ್ದಾರೆ.
ಅದರಲ್ಲೂ ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಗುರಿಯಾಗಿಸಿಕೊಂಡು ಆಡಳಿತರೂಢ ವೈಎಸ್ ಆರ್ ಪಾರ್ಟಿ ಶಾಸಕರು ಪದೇ ಪದೇ ವೈಯುಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದೆ.
ಇತ್ತೀಚೆಗೆ ಆಂಧ್ರ ಪ್ರದೇಶದ ಅಸಂಬ್ಲಿಯಲ್ಲಿ ಟಿಡಿಪಿ ಹಾಗೂ ವೈಎಸ್ ಆರ್ ಪಾರ್ಟಿ ನಾಯಕರ ವಾಕ್ಸಮರ ಜೋರಾಗಿತ್ತು.
ಈ ವೇಳೆ ವೈಆರ್ ಎಸ್ ಪಾರ್ಟಿ ನಾಯಕರ ಮಾತಿನಿಂದ ನೊಂದ ಚಂದ್ರಬಾಬು ನಾಯ್ಡು, ಸದನವನ್ನು ತ್ಯಜಿಸಿ ಮಾಧ್ಯಮಗಳ ಮುಂದೆ ಬಂದು ಕಣ್ಣೀರಾಕಿದರು.
ಅಲ್ಲದೇ ಮತ್ತೆ ಮುಖ್ಯಮಂತ್ರಿಯಾಗುವವರೆಗೂ ಸದನಕ್ಕೆ ಪ್ರವೇಶಿಸಲ್ಲ ಎಂದ ಶಪಥ ಮಾಡಿದ್ರು.
ಇದು ಸದ್ಯ ಆಂಧ್ರದಲ್ಲಿ ಭಾರಿ ಸಂಚಲನವನ್ನು ಸೃಷ್ಟಿ ಮಾಡಿದೆ.
ಈ ಮಧ್ಯೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಟ ಜ್ಯೂನಿಯರ್ ಎನ್ ಟಿಆರ್, ಪ್ರತಿಕ್ರಿಯೆ ನೀಡಿ ರಾಜಕಾರಣಿಗಳಿಗೆ ಕೈಮುಗಿದಿದ್ದಾರೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವಿಟರ್ನಲ್ಲಿ ವೀಡಿಯೋ ಹಂಚಿಕೊಂಡಿರುವ ನಟ ಜೂನಿಯರ್ ಎನ್ಟಿಆರ್, ದಯವಿಟ್ಟು ರಾಜಕೀಯ ಏನೇ ಇರಲಿ.
— Jr NTR (@tarak9999) November 20, 2021
ವೈಯಕ್ತಿಕ ಮಟ್ಟಕ್ಕೆ ಇಳಿದು ಯಾರೂ ಜಗಳವಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ದೇಶದ ಜನ ನಿಮ್ಮನ್ನು ನೋಡುತ್ತಿದ್ದಾರೆ.
ದಯವಿಟ್ಟು ಮಾದರಿಯಾಗಿರಿ. ನಿಮ್ಮ ನಿಮ್ಮ ಜಗಳದಲ್ಲಿ ಕುಟುಂಬವನ್ನು ಎಳೆ ತರಬೇಡಿ. ನಾನೊಬ್ಬ ಪ್ರಜೆಯಾಗಿ ನಿಮ್ಮನ್ನು ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ ಎಂದು ಬೇಸರ ಹೊರಹಾಕಿದ್ದಾರೆ.