ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ…
ಹುಬ್ಬಳ್ಳಿ: ರಾಜ್ಯದ ಜನತೆಯನ್ನೇ ಬೆಚ್ಚಿ ಬಿಳಿಸಿರುವ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಹೈ ಅಲರ್ಟ್ ಆಗಿದ್ದು, ಕೊಲೆ ನಡೆದ ಕ್ಷಣದಿಂದಲೇ ತನಿಖೆಯನ್ನು ಕೈಗೊಂಡಿದ್ದು, ಪ್ರಾಥಮಿಕ ಹಂತವಾಗಿ ಶ್ವಾನದಳದಿಂದ ತಪಾಸಣೆ ನಡೆಸುತ್ತಿದೆ.
ಹುಬ್ಬಳ್ಳಿಯ ಉಣಕಲ್ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳ ಶೋಧಕ್ಕಾಗಿ ಎಲ್ಲ ರೀತಿಯ ಆಯಾಮಗಳಿಂದಲೂ ತನಿಖೆಯನ್ನು ಕೈಗೊಂಡಿದ್ದು, ಪೊಲೀಸ್ ಆಯುಕ್ತರ ಭೇಟಿಯ ಬೆನ್ನಲ್ಲೇ ಶ್ವಾನದಳದಿಂದ ತಪಾಸಣೆ ನಡೆಸಲಾಗುತ್ತಿದೆ.
ಇನ್ನೂ ಭಕ್ತರ ಸೋಗಿನಲ್ಲಿ ಬಂದಿರುವ ದುಷ್ಕರ್ಮಿಗಳು ನಮಸ್ಕಾರ ಮಾಡಿ ನಂತರ ಕೊಲೆ ಮಾಡಿದ್ದು, ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. Chandrashekhar Guruji’s murder case