ಬೆಳಗಾವಿ: ಹಣ ಡಬಲ್ ಮಾಡುವುದಾಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಆಪ್ತನಿಗೆ ಮೋಸ ಮಾಡಿದ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
25 ಲಕ್ಷ ರೂ. ವಂಚನೆ ಮಾಡಿ ಪರಾರಿಯಾಗಿದ್ದ 7 ಜನ ಆರೋಪಿಗಳನ್ನು ಕಾಕತಿ ಪೊಲೀಸರು (Police) ಬಂಧಿಸಿದ್ದಾರೆ. ಬಾಗಲಕೋಟೆಯ ಮಹಾಲಿಂಗಪುರದ ಜಾಹ್ನವಿ ಸೇರಿದಂತೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಆಪ್ತ ಸಿದ್ಧನಗೌಡ ಬಿರಾದಾರ್ ಅವರಿಗೆ ಕೊಲ್ಹಾಪುರದಿಂದ ಮರಳಿ ಬರುವಾಗ ಬಸ್ ನಲ್ಲಿ ಪರಿಚಯವಾಗಿದ್ದರು. ಈ ವೇಳೆ ಜಾಹ್ನವಿ ಸಿದ್ಧನಗೌಡರ ನಂಬರ್ ಪಡೆದು ನಂಬಿಕೆ ಗಳಿಸಿ, ವಂಚಿಸಿದ್ದಾಳೆ.
ನಮ್ಮ ಅಂಕಲ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಸಾಕಷ್ಟು ದುಡ್ದಿದೆ. ಹಣ ಕೊಟ್ಟರೆ ಡಬಲ್ ಮಾಡಿಕೊಡ್ತಿವಿ ಎಂದು ಸಿದ್ಧನಗೌಡ ಮುಂದೆ ಜಾಹ್ನವಿ ಹೇಳಿದ್ದಾರೆ. ಇದನ್ನ ನಂಬಿದ ಸಿದ್ಧನಗೌಡ ನವೆಂಬರ್ ತಿಂಗಳಿನಲ್ಲಿ 25 ಲಕ್ಷ ರೂ. ಹಣ ತೆಗೆದುಕೊಂಡು ಹೋಟೆಲ್ ಹೋಗಿದ್ದಾರೆ. ಈ ವೇಳೆ ಆರೋಪಿಗಳು, ಪೊಲೀಸರಂತೆ ರೈಡ್ ಮಾಡಿ ಹಣ ದೋಚಿ ಪರಾರಿಯಾಗಿದ್ದರು ಎನ್ನಲಾಗಿದೆ. ಈ ಕುರಿತು ಸಿದ್ಧನಗೌಡ ದೂರು ದಾಖಲಿಸಿದ್ದರು.
ಈ ಕುರಿತು ಸಿದ್ಧನಗೌಡ ಅವರು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೋಟೆಲ್‍ನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ವಂಚಕರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 6 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.