Cheetah | 7 ದಶಕದ ನಂತರ ಭಾರತದ ಕಾಡುಗಳಲ್ಲಿ ಚೀತಾ | ಇದಕ್ಕೆ ಕಾರಣ ಯಾರು
7 ದಶಕದ ನಂತರ ಭಾರತದ ಕಾಡುಗಳಲ್ಲಿ ಚೀತಾ ಓಡಾಡುತ್ತಿದೆ. ಇದಕ್ಕೆ ಕಾರಣ ಯಾರು ? ಇಲ್ಲಿದ್ದ ಚೀತಾಗಳು ಇಲ್ಲಿಂದ ಕಣ್ಮರೆಯಾಗಿದ್ದೇಕೆ ? 75 ವರ್ಷಗಳ ಏಷ್ಯಾಟಿಕ್ ಚೀತಾಗಳು ಭಾರತಕ್ಕೆ ಮರಳಿವೆ. ಹಿಂದೆ ಇಂತದ್ದೆ ಭಾರತದ ಕೋರಿಕೆಯನ್ನು ಇರಾನ್ ನಿರಾಕರಿಸಿತ್ತು. ಕಾರಣವೇನು ಗೊತ್ತೆ ? 75 ವರ್ಷಗಳ ನಂತರ ನಮೀಬಿಯಾ ದೇಶದಿಂದ 8 ಚೀತಾಗಳು ಮರಳಿ ಭಾರತಕ್ಕೆ. ಭಾರತದಲ್ಲಿದ್ದ ಕೊನೆಯ ಚೀತಾ ಸತ್ತಿದ್ದು 1947 ರಲ್ಲಿ ಈಗಿನ ಛತ್ತಿಸ್ ಘಡದಲ್ಲಿರುವ ಕೊರಿಯಾದಲ್ಲಿ. ಅದಕ್ಕೂ ಮೊದಲು ಭಾರತದಲ್ಲಿ ಮನೆಮನೆಗಳಲ್ಲಿ ಚೀತಾಗಳನ್ನು ಸಾಕಲಾಗುತ್ತಿತ್ತು ಮತ್ತು ಬೇಟೆಗಳಲ್ಲಿ ಇವುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. 1952 ರಲ್ಲಿ ಏಷ್ಯಾಟಿಕ್ ಚೀತಾಗಳು ಭಾರತದಿಂದ ಕಣ್ಮರೆಯಾಗಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿತು.
ಚೀತಾಗಳು ಮಾತ್ರವಲ್ಲ ಬಹುತೇಕ ವನ್ಯಮೃಗಗಳನ್ನು ಅಂದಿನ ಅರಸರು ಮತ್ತು ಬ್ರಿಟಿಷರು ಮೋಜಿಗಾಗಿ ಬೇಟೆತಯಾಡಿ ನಾಶ ಮಾಡಿದ್ದರು. 1972 ವನ್ಯಜೀವಿ ಸಂರಕ್ಷಣಾ ಕಾನೂನು ಬರುವ ಹೊತ್ತಿಗಾಗಲೇ ಚೀತಾಗಳು ಭಾರತದ ಮಣ್ಣನಿಂದ ಕಣ್ಮೆರೆಯಾಗಿಬಿಟ್ಟಿದ್ದವು.
ಒಂದು ಪೇಯಿಂಟಿಂಗ್ ನಲ್ಲಿ ಚೀತಾಗಳು ಮತ್ತು ಕಿರುಬಗಳನ್ನು ಕೊರಳಿಗೆ ಸರಪಳಿ ಬಿಗಿದು ಮನೆಗಳಲ್ಲಿ ಸಾಕಿದ್ದಾಗಿ ಚಿತ್ರಿಸಲಾಗಿತ್ತು. ಇದು 1878 ರ ರಾಜಸ್ಥಾನ ಅಥವಾ ಅಲ್ವಾರ್ ಚಿತ್ರ ಎನ್ನಲಾಗುತ್ತದೆ. ಪ್ರಿನ್ಸ್ ಆಫ್ ವೇಲ್ಸ್ ನ 1875 – 76 ಭಾರತ ಪ್ರವಾಸದ ಸಂದರ್ಭದಲ್ಲಿ ಚೀತಾವೊಂದನ್ನು ಬೇಟೆಗಾಗಿ ಬಳಸಿಕೊಂಡಿದ್ದ ಫೋಟೋ ಇದೆ. ಚೀತಾಗಳು ದಿಢೀರ್ ನೆ ಕಣ್ಮರೆಯಾಗಲಿಲ್ಲ. ಕ್ರಮೇಣ ಇವುಗಳ ಸಂತತಿ ನಾಶವಾಯಿತು. 1921 – 22 ರಲ್ಲಿ ಮತ್ತೆ ಪ್ರಿನ್ಸ್ ಆಫ್ ವೇಲ್ಸ್ ಭಾರತ ಭೇಟೆಯ ಸಂದರ್ಭದಲ್ಲಿಯೂ ಚೀತಾವನ್ನು ಜಿಂಕೆಗಳ ಬೇಟೆಎ ಬಳಸಿದ್ದ ಫೋಟೋ ಸಾಕ್ಷ್ಯವಿದೆ. 1947 ರಲ್ಲಿ ಛತ್ತೀಸ್ ಘಡದ ಕಿಂಗ್ ಆಫ್ ಕೊರಿಯಾ ಮೂರು ಚೀತಾಗಳನ್ನು ಕೊಂದಿದ್ದೇ ಕಡೆ, ಮತ್ತೆ ಎಲ್ಲಿಯೂ ಚೀತಾಗಳು ಕಾಣಸಿಗಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಅಂದರೆ 1952ರಲ್ಲಿ ಭಾರತ ಸರ್ಕಾರ ಚೀತಾಗಳ ಸಂತತಿ ಭಾರತದಿಂದ ಸಂಪೂರ್ಣ ಮಾಯವಾಗಿರುವುದನ್ನು ಅಧಿಕೃತಪಡಿಸಿತು.

1960 – 70 ರ ದಶಕದಲ್ಲಿಯೇ ಭಾರತ ಸರ್ಕಾರ ಚೀತಾಗಳ ಸಂತತಿಯನ್ನು ಭಾರತದಲ್ಲಿ ಪುನರುಜ್ಜೀವನಗೊಳಿಸಲು ತೀವ್ರವಾಗಿ ಪ್ರಯತ್ನಿಸಿತ್ತು.
ಅದರ ಭಾಗವಾಗಿ ಮೊದಲು ಭಾರತ ಇರಾನ್ ದೇಶವನ್ನು ಅಪ್ರೋಚ್ ಮಾಡಿತು. ಇರಾನ್ ರಾಷ್ಟ್ರದ ಚೀತಾಗಳು ಮಾತ್ರ ಏಷ್ಯಾಟಿಕ್ ಚೀತಾಗಳ ಗುಣಧರ್ಮವನ್ನು ಹೋಲುತ್ತವೆ ಅನ್ನುವ ಕಾರಣದಿಂದ. ಆದರೇ ಅದೇ ವೇಳೆ ತೆಹರಿನ್ ರಾಷ್ಟ್ರ ಭಾರತದ ಸಿಂಹಗಳನ್ನು ಇರಾನ್ ಚೀತಾಗಳ ಬದಲಿಯಾಗಿ ನೀಡುವಂತೆ ಆಗ್ರಹಿಸಿತು.
ಇದರಿಂದ ಭಾರತ ಇರಾನಿಯನ್ ಚೀತಾಗಳನ್ನು ಭಾರತಕ್ಕೆ ಕರೆತರುವ ನಿರ್ಧಾರವನ್ನು ವಾಪಸ್ ಪಡೆದುಕೊಂಡಿತು. 2009ರಲ್ಲಿ ಅಂದಿನ ಕೇಂದ್ರದ ಯುಪಿಎ ಸರ್ಕಾರದಲ್ಲಿ ಪರಿಸರ ಇಲಾಖೆ ಸಚಿವರಾಗಿದ್ದ ಜೈರಾಮ್ ರಮೇಶ್ ಮತ್ತೆ ಚೀತಾಗಳನ್ನು ಭಾರತಕ್ಕೆ ಕರೆತರುವ ಯೋಜನೆಗೆ ಮರುಜೀವ ನೀಡಿದರು. ಹೀಗಾಗಿ 2009ರಲ್ಲಯೇ ಆಫ್ರಿಕನ್ ಚೀತಾಗಳನ್ನು ಭಾರತಕ್ಕೆ ಕರೆತರಲು ಯೋಜನೆಗೆ ಸಮ್ಮತಿ ದೊರೆಯಿತು.
ಭಾರತ ಸರ್ಕಾರ ಚೀತಾಗಳನ್ನು ಕಳಿಸುವ ಕುರಿತಾಗಿ ನಮೀಬಿಯಾ ಮತ್ತು ಕೀನ್ಯಾ ಸರ್ಕಾರಗಳ ಮುಂದೆ ತನ್ನ ಕೋರಿಕೆ ಸಲ್ಲಿಸಿತು. ಇರಾನಿಯನ್ ಚೀತಾಳ ಜೆನಿಟಕ್ ಸ್ಥಿತಿಯೇ ಆಫ್ರಿಕನ್ ಚೀತಾಗಳಲ್ಲಿಯೂ ಇದೇ ಅನ್ನುವ ಅಧ್ಯಯನ ಆಧರಿಸಿ ತನ್ನ ಯೋಜನೆ ಮುಂದುವರೆಸಿತು ಭಾರತ. 2020 ರಲ್ಲಿ ಭಾರತ ಮತ್ತು ನಮೀಬಿಯಾ ನಡುವೆ ಮೆಮೋರಂಡಮ್ ಗೆ ಸಹಿ ಬಿದ್ದಿತ್ತು. ಮುಂದಿನ 5 ವರ್ಷಗಳಲ್ಲಿ 50 ಚೀತಾಗಳನ್ನು ಭಾರತಕ್ಕೆ ಕಳಿಸಲು ಒಪ್ಪಿಗೆ ಸೂಚಿಸಿ ನಮೀಬಿಯಾ ಒಡಂಬಡಿಕೆ ಮಾಡಿಕೊಂಡಿತು.
—– ವಿಭಾ