ಬಲಿ ನೀಡುವ ವೇಳೆ ತಪ್ಪಿಸಿಕೊಂಡ ಕೋಳಿ – ಹಿಡಿಯುವಾಗ ವ್ಯಕ್ತಿ ಗುಂಡಿಗೆ ಬಿದ್ದು ಸಾವು…
ಬಲಿಗಾಗಿ ತಂದಿದ್ದ ಕೋಳಿ ತಪ್ಪಿಸಿಕೊಂಡು ಹೋದಾಗ ಹಿಡಿಯಲು ಓಡಿದ ವ್ಯಕ್ತಿಯೊಬ್ಬರು ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚೆನ್ನೈನ ಪಲ್ಲವರಂ ನಲ್ಲಿ ನಡೆದಿದೆ.
ಟಿ ಲೋಕೇಶ್ ಎಂಬುವವರು ನಿರ್ಮಿಸುತ್ತಿದ್ದ ಮನೆಯಲ್ಲಿ ದುಷ್ಟ ಶಕ್ತಿಯನ್ನ ದೂರವಿಡಲು ಕೋಳಿ ಬಲಿ ಕೊಡಲು ಮುಂದಾಗಿದ್ದರು. ಗುರುವಾರ ಮುಂಜಾನೆ ನಾಲ್ಕು ಗಂಟೆಗೆ ಇದಕ್ಕಾಗಿ ರಾಜೇಂದ್ರನ್ ಎಂಬ 70 ವರ್ಷದ ವೃದ್ಧರೊಬ್ಬರು ಕೋಳಿ ಹಿಡಿದು ತಂದಿದ್ದರು. ಪೂಜೆ ವೇಳೆ ಕೋಳಿ ಇವರ ಕೈಯಿಂದ ತಪ್ಪಿಸಿಕೊಂಡಿದೆ. ಅದನ್ನ ಹಿಡಿಯುವ ಪ್ರಯತ್ನದಲ್ಲಿದ್ದಾಗ ಮನೆಯ ಲಿಫ್ಟ್ ಅಳವಡಿಸಲು ತೋಡಿದ್ದ 20 ಅಡಿಯ ಗುಂಡಿಗೆ ಬಿದ್ದಿದ್ದಾರೆ.
ಕೋಳಿಯನ್ನ ಬಲಿ ಕೊಡಲಿ ಹೋದವರು ತಾನೇ ಬಲಿಯಾದ ಘಟನೆ ನಡೆದಿದೆ. ಕಾರ್ಮಿಕ ರಾಜೇಂದ್ರನ್ ವಾಪಸ್ ಬಾರದೇ ಇದ್ದಾಗ ಮನೆಯ ಮಾಲಿಕ ಟಿ ಲೋಕೇಶ್ ಅವರು ನೋಡಲು ಹೋದಾಗ ರಾಜೇಂದ್ರನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೋಳಿ ಯಾವುದೇ ಹಾನಿಯಿಲ್ಲದೇ ನಿಂತಿತ್ತು.
ವೃದ್ಧರನ್ನ ಆಸ್ಪತ್ರೆಯನ್ನ ಸೇರಿಸಲಾಯಿತಾದರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Chennai Man Bought Rooster For Sacrifice, Dies While Chasing The Bird








