ADVERTISEMENT
Monday, June 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ಚೆನ್ನೈ- ಕೊಲ್ಕತ್ತಾ ಮ್ಯಾಚ್ : ಲಾಸ್ಟ್ ಬಾಲ್ ಎನ್ ಕೌಂಟರ್ ಹೇಗಿತ್ತು ಗೊತ್ತಾ..?

Mahesh M Dhandu by Mahesh M Dhandu
September 27, 2021
in IPL 2021, Newsbeat, ಐಪಿಎಲ್ 2021
Chennai- Kolkata saaksha tv
Share on FacebookShare on TwitterShare on WhatsappShare on Telegram

ಇಂಡಿಯನ್ ಪ್ರಿಮಿಯರ್ ಲೀಗ್ ಅಂದ್ರೆನೇ ಹಾಗೇ ಅಲ್ಲಿ ಲಾಸ್ಟ್ ಬಾಲ್ ಎನ್ ಕೌಂಟರ್ ಮ್ಯಾಚ್ ಗಳಿಗೆ ಪಾರವೇ ಇರಲ್ಲ.

ಸೀಸನ್ ಒಂದರಲ್ಲೇ ಅದೆಷ್ಟೂ ಕ್ಲೋಸ್ ಮ್ಯಾಚ್ ಗಳು ನಡೆದಿವೆ. ಆ ಸಾಲಿಗೆ ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ – ಕೊಲ್ಕತ್ತಾ ನಡುವಿನ ಪಂದ್ಯವು ಸೇರ್ಪಡೆಯಾಗಿದೆ.

Related posts

ನಿಮಗೊಂದು ಸಂವಿಧಾನ ನಮಗೊಂದು ಸಂವಿಧಾನವೇ?ಉತ್ತರ ಸರಿ ಇದ್ದರೆ ಕೇಶವಕೃಪದಲ್ಲೇ ಕ್ಷಮೆ ಕೇಳುವೆ :ಆರೆಸ್ಸೆಸ್‌ ಮುಖ್ಯಸ್ಥರಿಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ನಿಮಗೊಂದು ಸಂವಿಧಾನ ನಮಗೊಂದು ಸಂವಿಧಾನವೇ?ಉತ್ತರ ಸರಿ ಇದ್ದರೆ ಕೇಶವಕೃಪದಲ್ಲೇ ಕ್ಷಮೆ ಕೇಳುವೆ :ಆರೆಸ್ಸೆಸ್‌ ಮುಖ್ಯಸ್ಥರಿಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

June 22, 2026
ಶಶಿ ತರೂರ್ ಮೋದಿ ಗುಣಗಾನ – ಕೈ ನಾಯಕನ ಮೋದಿ ಭಕ್ತಿ ಕಂಡು ಪವನ್ ಖೇರಾ ಕೆಂಡ: ತರೂರ್ ಕೊಟ್ಟ ತಿರುಗೇಟು ಏನು

ಶಶಿ ತರೂರ್ ಮೋದಿ ಗುಣಗಾನ – ಕೈ ನಾಯಕನ ಮೋದಿ ಭಕ್ತಿ ಕಂಡು ಪವನ್ ಖೇರಾ ಕೆಂಡ: ತರೂರ್ ಕೊಟ್ಟ ತಿರುಗೇಟು ಏನು

June 22, 2026

ಮೊದಲು ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ಗಳ ಅಬ್ಬರಿಸಿದರು. ಚೆನ್ನೈ ಬೌಲರ್ಗಳು ತಿರುಗಿಬಿದ್ದು ಕೊಲ್ಕತ್ತಾ ತಂಡವನ್ನು ಕಟ್ಟಿ ಹಾಕಿದ್ರು.

ಆಮೇಲೆ ಚೆನ್ನೈ ಬ್ಯಾಟ್ಸ್ಮನ್ಗಳು ಅಬ್ಬರಿಸಿದ್ರು, ಆದರೆ ಕೊಲ್ಕತ್ತಾ ಬೌಲರ್ಗಳು ತಿರುಗಿ ಬಿದ್ದು ಪಂದ್ಯವನ್ನು ಫೈನಲ್ ಓವರ್ಗೆ ಕೊಂಡೊಯ್ದರು.

ನರೈನ್ ಮ್ಯಾಜಿಕ್ ಕೊನೆಯ ಎಸೆತದವರೆಗೂ ವಿಜಯಲಕ್ಷ್ಮಿಯ ಮುಖವನ್ನು ತೂಗುಯ್ಯಾಲೆಯಲ್ಲಿ ಇಟ್ಟಿತ್ತು. ಆದರೆ ಚೆನ್ನೈ ಕೊನೆಯ ಎಸೆತದಲ್ಲಿ ಪಂದ್ಯ ಗೆದ್ದು ಪಾಯಿಂಟ್ ಟೇಬಲ್ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿತು.

ಅಬುಧಾಬಿಯ ಶೇಖ್ ಝಹಿದ್ ಮೈದಾನದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ ಆರಿಸಿಕೊಂಡಿತು. ಶುಬ್ಮನ್ ಗಿಲ್ ಮೊದಲ ಓವರ್ನಲ್ಲೇ ಎರಡು ಬೌಂಡರಿ ಬಾರಿಸಿದರೂ, ಇಲ್ಲ ರನ್ ಕದಿಯಲು ಹೋಗಿ ರನೌಟ್ ಆದರು.

ವೆಂಕಟೇಶ್ ಅಯ್ಯರ್ ಜೊತೆ ಸೇರಿಕೊಂಡ ರಾಹುಲ್ ತ್ರಿಪಾಠಿ ಪವರ್ ಪ್ಲೇ ಲಾಭ ಪಡೆದುಕೊಂಡರು. ಮೊದಲ 5 ಓವರುಗಳಲ್ಲೇ 50 ರನ್ ಹರಿದು ಬಂತು.

ಆದರೆ 6ನೇ ಓವರ್ನಲ್ಲಿ ದಾಳಿಗಿಳಿದ ಶಾರ್ದೂಲ್ ಠಾಕೂರ್ 18 ರನ್ಗಳಿಸಿದ್ದ ವೆಂಕಟೇಶ್ ಅಯ್ಯರ್ ವಿಕೆಟ್ ಹಾರಿಸಿದರು.

ತ್ರಿಪಾಠಿ ಅಬ್ಬರಿಸುತ್ತಾ ಸಾಗಿದರು. ರನ್ಗಳು ಸರಾಗವಾಗಿ ಹರಿದು ಬಂತು. ಆದರೆ ಇಯಾನ್ ಮೊರ್ಗಾನ್ ರನ್ಗಾಗಿ ಪರದಾಡಿದ್ರು. 14 ಎಸೆತಗಳಲ್ಲಿ 8 ರನ್ಗಳಿಸಿದ್ದ ಮೊರ್ಗಾನ್ ಹ್ಯಾಜಲ್ವುಡ್ ಎಸೆತದಲ್ಲಿ ಔಟಾದರು.

ತ್ರಿಪಾಠಿ ಜೊತೆ ಸೇರಿದ ನಿತಿಶ್ ರಾಣಾ ಕೂಡ ಆಟಕ್ಕೆ ಹೊಂದಿಕೊಂಡರು. ಈ ಹಂತದಲ್ಲಿ ಜಡೇಜಾ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 45 ರನ್ಗಳಿಸಿ ಡೇಂಜರಸ್ ಆಗಿ ಕಾಣುತ್ತಿದ್ದ ತ್ರಿಪಾಠಿಯನ್ನು ಔಟ್ ಮಾಡಿದರು.

ಸ್ಲಾಗ್ ಓವರುಗಳಲ್ಲಿ ಆಂಡ್ರೆ ರಸೆಲ್ ಮತ್ತು ದಿನೇಶ್ ಕಾರ್ತಿಕ್ ಮಿಂಚಿನ ಆಟ ಆಡಿದ್ರು. ರಸೆಲ್ 15 ಎಸೆತಗಳಲ್ಲಿ 20 ರನ್ಗಳಿಸಿ ಶಾರ್ದೂಲ್ಗೆ ವಿಕೆಟ್ ಒಪ್ಪಿಸಿದರೆ, ಕಾರ್ತಿಕ್ 11 ಎಸೆತಗಳಲ್ಲಿ 26 ರನ್ಗಳಿಸಿ ರನ್ ರೇಟ್ ಹೆಚ್ಚಿಸಿದರು.

ರಾಣಾ 27 ಎಸೆತಗಳಲ್ಲಿ ಅಜೇಯ 37ರನ್ಗಳಿಸಿದರು. ನಿಗದಿತ 20 ಓವರುಗಳಲ್ಲಿ ಕೆಕೆಆರ್ 6 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತು.

ಶಾರ್ದೂಲ್ ಠಾಕೂರ್ 20 ರನ್ಗಳಿಗೆ 2 ವಿಕೆಟ್ ಪಡೆದ್ರೆ, ಹ್ಯಾಜಲ್ ವುಡ್ ಕೂಡ 2 ವಿಕೆಟ್ ಕಬಳಸಿದರು.

Chennai- Kolkata saakshatv

ಗುರಿ ಬೆನ್ನಟ್ಟ ಹೊರಟ ಚೆನ್ನೈ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಸ್ಪೋಟಕ ಆರಂಭ ತಂದುಕೊಟ್ರು.

ಬೌಂಡರಿ, ಸಿಕ್ಸರ್ಗಳ ಸುರಿಮಳೆಯನ್ನೇ ಮಾಡಿದರು.ಮೊದಲ 8 ಓವರುಗಳಲ್ಲೇ 70 ರನ್ ಬಂದಿತ್ತು. ಈ ಹಂತದಲ್ಲಿ ದಾಳಿಗಿಳಿದ ಆಂಡ್ರೆ ರಸೆಲ್ 2 ಫೋರ್, 3 ಸಿಕ್ಸರ್ ನೆರವಿನಿಂದ 28 ಎಸೆತಗಳಲ್ಲ 40 ರನ್ಗಳಿಸಿದ್ದ ಗಾಯಕ್ವಾಡ್ ವಿಕೆಟ್ ಕಬಳಿಸಿದರು.

ಡುಪ್ಲಿಸ್ ಜೊತೆ ಸೇರಿದ ಮೊಯಿನ್ ಆಲಿ ಕೂಡ ಅಬ್ಬರದ ಆಟಕ್ಕೆ ಕೈ ಹಾಕಿದರು. ಡು ಪ್ಲೆಸಿಸ್ 30 ಎಸೆತಗಳಲ್ಲಿ 43 ರನ್ಗಳಿಸಿ ಔಟಾದರು. ಅಂಬಟಿ ರಾಯುಡು 10 ರನ್ಗಳಿಸಿ ನರೈನ್ಗೆ ವಿಕೆಟ್ ಒಪ್ಪಿಸಿದರು.

32 ರನ್ಗಳಿಸಿದ ಮೊಯಿನ್ ಅಲಿ ಫರ್ಗ್ಯೂಸನ್ ಎಸೆತದಲ್ಲಿ ಔಟಾದ ಮೇಲೆ ಕೊಲ್ಕತ್ತಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ರೈನಾ ರನೌಟ್ ಬಲೆಯಲ್ಲಿ ಬಿದ್ರೆ, ವರುಣ್ ಚಕ್ರವರ್ತಿ ಧೋನಿಯನ್ನು ಕ್ಲೀನ್ ಬೌಲ್ಡ್ ಮಾಡಿದರು.

ಕೊನೆಯ 12 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 26 ರನ್ ಬೇಕಿತ್ತು. ಆದರೆ 19ನೇ ಓವರ್ ಎಸೆದ ಪ್ರಸಿಧ್ ಕೃಷ್ಣ ಜಡೇಜಾ ಅಬ್ಬರಕ್ಕೆ ನಲುಗಿದರು.

2 ಸಿಕ್ಸರ್, 2 ಬೌಂಡರಿ ಬಾರಿಸಿದ ಜಡೇಜಾ ಆ ಓವರ್ನಲ್ಲಿ ಚೆನ್ನೈಗೆ 22 ರನ್ ತಂದುಕೊಟ್ಟು ಮೇಲುಗೈ ಸಾಧಿಸುವಂತೆ ಮಾಡಿದರು.

ಕೊನೆಯ 6 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ ಬೇಕಾಗದ್ದಿದ್ದು ಕೇವಲ 4 ರನ್ ಅಷ್ಟೇ. ಆದರೆ ಕೊನೆಯ ಓವರ್ನ ಮೊದಲ ಎಸೆತದಲ್ಲಿ ಸ್ಯಾಮ್ ಕರ್ರನ್ ಔಟ್ ಆದ್ರು.

ಎರಡನೇ ಎಸೆತದಲ್ಲಿ ರನ್ ಬರಲಿಲ್ಲ. 3ನೇ ಎಸೆತದಲ್ಲಿ ಶಾರ್ದೂಲ್ 3 ರನ್ಗಳಿಸಿದರು. ಚೆನ್ನೈ ಗೆಲುವಿಗೆ 1 ರನ್ ಅಷ್ಟೇ ಬೇಕಿತ್ತು. 4ನೇ ಎಸೆತದಲ್ಲಿ ರನ್ಗಳಿಸಲು ಜಡೇಜಾ ವಿಫಲರಾದ್ರು.

5ನೆ ಎಸೆತದಲ್ಲಿ ಜಡೇಜಾ ಔಟ್ ಆದ್ರು, ಕೊನೆಯ ಎಸೆತದಲ್ಲಿ ಚೆನ್ನೈಗೆ 1 ರನ್ ಬೇಕಿತ್ತು. ದೀಪಕ್ ಚಹರ್ ಎಸೆತವನ್ನು ಲೆಗ್ ಸೈಡ್ನತ್ತ ತಳ್ಳಿ ತಂಡಕ್ಕೆ ಗೆಲುವು ತಂದುಕೊಟ್ರು. 2 ವಿಕೆಟ್ಗಳ ಗೆಲುವು ಸಾಧಿಸಿದ ಚೆನ್ನೈ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆಯಿತು.

Tags: #Saaksha TVcskipl 2021kkr
ShareTweetSendShare
Join us on:

Related Posts

ನಿಮಗೊಂದು ಸಂವಿಧಾನ ನಮಗೊಂದು ಸಂವಿಧಾನವೇ?ಉತ್ತರ ಸರಿ ಇದ್ದರೆ ಕೇಶವಕೃಪದಲ್ಲೇ ಕ್ಷಮೆ ಕೇಳುವೆ :ಆರೆಸ್ಸೆಸ್‌ ಮುಖ್ಯಸ್ಥರಿಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ನಿಮಗೊಂದು ಸಂವಿಧಾನ ನಮಗೊಂದು ಸಂವಿಧಾನವೇ?ಉತ್ತರ ಸರಿ ಇದ್ದರೆ ಕೇಶವಕೃಪದಲ್ಲೇ ಕ್ಷಮೆ ಕೇಳುವೆ :ಆರೆಸ್ಸೆಸ್‌ ಮುಖ್ಯಸ್ಥರಿಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

by Shwetha
June 22, 2026
0

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವೈಖರಿ ಮತ್ತು ಅದರ ಪಾರದರ್ಶಕತೆ ಕುರಿತು ರಾಜ್ಯದ ಗೃಹಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಸಂಚಲನ ಸೃಷ್ಟಿಸುವಂತಹ ಹೇಳಿಕೆ ನೀಡಿದ್ದಾರೆ. ಸಂಘಟನೆಯ ನೋಂದಣಿ, ಹಣಕಾಸಿನ...

ಶಶಿ ತರೂರ್ ಮೋದಿ ಗುಣಗಾನ – ಕೈ ನಾಯಕನ ಮೋದಿ ಭಕ್ತಿ ಕಂಡು ಪವನ್ ಖೇರಾ ಕೆಂಡ: ತರೂರ್ ಕೊಟ್ಟ ತಿರುಗೇಟು ಏನು

ಶಶಿ ತರೂರ್ ಮೋದಿ ಗುಣಗಾನ – ಕೈ ನಾಯಕನ ಮೋದಿ ಭಕ್ತಿ ಕಂಡು ಪವನ್ ಖೇರಾ ಕೆಂಡ: ತರೂರ್ ಕೊಟ್ಟ ತಿರುಗೇಟು ಏನು

by Shwetha
June 22, 2026
0

ಪ್ರಧಾನಿ ನರೇಂದ್ರ ಮೋದಿಯವರ ಅಂತರರಾಷ್ಟ್ರೀಯ ಮಟ್ಟದ ನಿರ್ಧಾರಗಳನ್ನು ಶಶಿ ತರೂರ್ ಹೊಗಳಿರುವುದು ಇದೀಗ ಕಾಂಗ್ರೆಸ್ ಪಕ್ಷದೊಳಗೆ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ. ಜಿ 7 ಶೃಂಗಸಭೆಯಲ್ಲಿ ಭಾರತೀಯ...

ನಾಲ್ಕು ರಾಜ್ಯಗಳಲ್ಲಿ ಐಡೆಂಟಿಟಿ ಕಾರ್ಡ್ ಇಟ್ಟುಕೊಂಡಿದ್ದಾರಾ ಪ್ರಕಾಶ್ ರಾಜ್? ಕಾನೂನು ಕುಣಿಕೆಯಲ್ಲಿ ಬಹುಭಾಷಾ ನಟ: ಸಮನ್ಸ್ ಗೆ ಬೆಲೆ ಕೊಡದ ಪ್ರಕಾಶ್ ರಾಜ್ ಗೆ ಬಂಧನ ಭೀತಿ

ನಾಲ್ಕು ರಾಜ್ಯಗಳಲ್ಲಿ ಐಡೆಂಟಿಟಿ ಕಾರ್ಡ್ ಇಟ್ಟುಕೊಂಡಿದ್ದಾರಾ ಪ್ರಕಾಶ್ ರಾಜ್? ಕಾನೂನು ಕುಣಿಕೆಯಲ್ಲಿ ಬಹುಭಾಷಾ ನಟ: ಸಮನ್ಸ್ ಗೆ ಬೆಲೆ ಕೊಡದ ಪ್ರಕಾಶ್ ರಾಜ್ ಗೆ ಬಂಧನ ಭೀತಿ

by Shwetha
June 22, 2026
0

ಯಾವಾಗಲೂ ತಮ್ಮ ಹರಿತವಾದ ಮಾತುಗಳಿಂದಲೇ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಇದೀಗ ಗಂಭೀರವಾದ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ನಾಲ್ಕು ರಾಜ್ಯಗಳಲ್ಲಿ ಅಕ್ರಮವಾಗಿ...

ವ್ಯಕ್ತಿಪೂಜೆ ಮಾಡುವವರು ಯೂಸ್ ಲೆಸ್ ಫೆಲೋಸ್:ಕೇವಲ ಒಬ್ಬರ ಹೆಸರು ಕೂಗಿದರೆ ಬೇರೆಯವರು ಕಸ ಗುಡಿಸಲು ಬಂದಿದ್ದಾರಾ?- ಡಿಕೆ‌ ಡಿಕೆ ಎಂದ ಕಾರ್ಯಕರ್ತರ ವಿರುದ್ಧ ಕೆಂಡವಾದ ಮಲ್ಲಿಕಾರ್ಜುನ ಖರ್ಗೆ

ವ್ಯಕ್ತಿಪೂಜೆ ಮಾಡುವವರು ಯೂಸ್ ಲೆಸ್ ಫೆಲೋಸ್:ಕೇವಲ ಒಬ್ಬರ ಹೆಸರು ಕೂಗಿದರೆ ಬೇರೆಯವರು ಕಸ ಗುಡಿಸಲು ಬಂದಿದ್ದಾರಾ?- ಡಿಕೆ‌ ಡಿಕೆ ಎಂದ ಕಾರ್ಯಕರ್ತರ ವಿರುದ್ಧ ಕೆಂಡವಾದ ಮಲ್ಲಿಕಾರ್ಜುನ ಖರ್ಗೆ

by Shwetha
June 22, 2026
0

ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಅತ್ಯಂತ ಅವಶ್ಯಕವಾಗಿದ್ದು, ವ್ಯಕ್ತಿಗತ ವರ್ಚಸ್ಸಿಗಾಗಿ ಘೋಷಣೆ ಕೂಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಟುವಾದ...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (22-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 22, 2026
0

ದಿನ ಭವಿಷ್ಯ : 22-06-2026 1. ಮೇಷ ರಾಶಿ ಇಂದು ನಿಮ್ಮ ಆಲೋಚನೆಗಳಲ್ಲಿ ಸ್ಪಷ್ಟತೆ ಇರುತ್ತದೆ. ಹೊಸ ಕೆಲಸಗಳನ್ನು ಅಥವಾ ಯೋಜನೆಗಳನ್ನು ಶುರು ಮಾಡಲು ಇದು ಅತ್ಯಂತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram