Chetan Sharma : ಇಂಜೆಕ್ಷನ್ ಪಡೆದು ಫಿಟ್ ನೆಸ್ ತೋರಿಸುತ್ತಿದ್ದಾರೆ ಕ್ರಿಕೆಟಿಗರು – ಸ್ಟಿಂಗ್ ಆಪರೇಷನ್ ನಲ್ಲಿ ಸ್ಪೋಟಕ ಹೇಳಿಕೆ….
ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ವಾಹಿನಿಯೊಂದು ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಸಿಲುಕಿದ್ದಾರೆ. ಇದೀಗ ಚೇತ್ ಶರ್ಮಾ ನೀಡಿರುವ ಹೇಳಿಕೆಗಳು ಭಾರತೀಯ ಕ್ರಿಕೆಟನಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿವೆ.
ಭಾರತ ಕ್ರಿಕೆಟ್ ಆಟಗಾರರ ಫಿಟ್ ನೆಸ್ ಮತ್ತು ವಿರಾಟ್ ಕೊಹ್ಲಿ ಹಾಗು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡೆವೆ ನಡೆದ ವಿವಾದದ ಕುರಿತು ಮಾತನಾಡಿದ್ದಾರೆ. ಈ ವಿಷಯಗಳು ಕ್ರಿಕೆಟ್ ಮಂಡಳಿಗೆ ಇಕ್ಕಟಿಗೆ ಸಿಲುಕಿಸಿದೆ.
ಹಲವು ಹಿರಿಯ ಸ್ಟಾರ್ ಆಟಗಾರರು ಶೇಕಡ 80 ರಿಂದ 85 ರಷ್ಟು ಫಿಟ್ ಇದ್ದರು ತಮ್ಮನ್ನ ತಾವು ಫಿಟ್ ಎಂದು ಬಿಂಬಿಸಿಕೊಲು ಚುಚ್ಚ ಮದ್ದು ತೆಗೆದುಕೊಳ್ಳುತ್ತಾರೆ ಎಂಬ ಆಘಾತಕಾರಿ ವಿಷಯವನ್ನ ಬಾಯ್ಬಿಟ್ಟಿದ್ದಾರೆ.
ಈ ಚುಚ್ಚು ಮದ್ದುಗಳು ನೋವು ನಿವಾರಕವಲ್ಲ ಇವು ಡೋಪಿಂಗ್ ಪರೀಕ್ಷೆಯಲ್ಲೂ ಸಿಕ್ಕಿಬೀಳುವುದಿಲ್ಲ. ಬಿಸಿಸಿಐ ವೈದ್ಯರು ಮಾತ್ರವಲ್ಲದೇ ಹಲವು ಆಟಗಾರರು ತಮ್ಮದೇ ಆದ ವೈದ್ಯರನ್ನ ಹೊಂದಿದ್ದಾರೆ. ಈ ಮೂಲಕ ಪಂದ್ಯಕ್ಕೂ ಮೊದಲು ತಮ್ಮನ್ನ ತಾವು ಫೀಟ್ ಎಂದು ಪರಿಗಣಿಸಿಕೊಳ್ಳುವಂತೆ ತೋರಿಸಿಕೊಳ್ಳುತ್ತಾರೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
Chetan Sharma: Cricketers show fitness by getting injections – Explosive statement on sting operation…








