Cheteshwara Pujara : 47 ತಿಂಗಳ ಬಳಿಕ ಶತಕ ಸಿಡಿಸಿದ ಪೂಜಾರ
ಬಾಂಗ್ಲಾ ವಿರುದ್ಧ ಚೇತೇಶ್ವರ ಪೂಜಾರ ಆಕರ್ಷಕ ಶತಕ ಸಿಡಿಸಿದರು.
ಮೂರೆ ದಿನದಾಟದ ಪಂದ್ಯದಲ್ಲಿ ಮೂರನೆ ಕ್ರಮಾಂಕದಲ್ಲಿ ಬಂದ ಚೇತೇಶ್ವರ್ ಪೂಜಾರ ಶುಭಮನ್ ಜೊತೆಗೂಡಿ
ಶತಕದಾಟ ಆಡಿದರು. ಬಾಂಗ್ಲಾ ಬೌಲರ್ಗಳ ಬೆವರಿಳಿಸಿದ ಈ ಜೋಡಿ 113 ರನ್ ಜೊತೆಯಾಟ ನೀಡಿತು.
ಪೂಜಾರ 130 ಎಸೆತದಲ್ಲಿ 13 ಬೌಂಡರಿ ಸೇರಿ ಅಜೇಯ 102 ರನ್ ಕಲೆ ಹಾಕಿದರು.
ಪೂಜಾರ ಬಾಂಗ್ಲಾ ವಿರುದ್ಧ ಕಡಿಮೆ ಎಸೆತದಲ್ಲಿ ಶತಕ ಸಿಡಿಸಿದ್ದಾರೆ.ಈ ಹಿಂದೆ ವೆಸ್ಟ್ಇಂಡೀಸ್ ವಿರುದ್ಧ ಮುಂಬೈನಲ್ಲಿ ಶತಕ ಸಿಡಿಸಲು 146 ತೆಗೆದುಕೊಂಡಿದ್ದರು.
ಇಂದೋರ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಪೂರೈಸಲು 147 ಎಸೆತ, ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ 164 ಎಸೆತ, ಜೋಹನ್ಸ್ ಬರ್ಗ್ನಲ್ಲಿ ದ.ಆಫ್ರಿಕಾ ವಿರುದ್ಧ 168 ಎಸೆತ ತೆಗೆದುಕೊಂಡಿದ್ದರು.
ಅಂತಾರಾಷ್ಟ್ರೀಯ ಟೆಸ್ಟ್ನಲ್ಲಿ 19ನೇ ಶತಕ ಸಿಡಿಸಲು ಪೂಜಾರ 3 ವರ್ಷ ತೆಗೆದುಕೊಂಡಿದ್ದಾರೆ. 2019ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಪೂಜಾರ ಕೊನೆಯ ಬಾರಿಗೆ ಶತಕ ಸಿಡಿಸಿದ್ದರು. ಲಯ ಕಳೆದುಕೊಂಡಿದ್ದ ಪೂಜಾರ ತಂಡದಿಂದ ಹೊರ ಹೋಗಬೇಕಾಯಿತು.
Cheteshwara Pujara , senchury after 3 years,sakshatv