ಕೊರೊನಾ ತಡೆಯಲು ಬಂತು ಚೀವಿಂಗ್ ಗಮ್..!
ನವದೆಹಲಿ : ಕೊರೊನಾ ವೈರಸ್ ಕಾಟದ ನಡುವೆ ವಿಶ್ವಾದ್ಯಂತ ಓಮ್ರಿಕಾನ್ ಆತಂಕ ಸೃಷ್ಟಿಸಿದೆ.. ಈ ನಡುವೆ ಲಸಿಕೆ ಅಭಿಯಾನವೂ ಬಿರುಸು ಪಡೆದಿದೆ.. ಇದೆಲ್ಲದರ ನಡುವೆ ಇದೀಗ ಕೋವಿಡ್ ನಿಯಂತ್ರಣಕ್ಕೆ ಚೀವಿಂಗ್ ಗಮ್ ಒಂದು ಸಿದ್ಧವಾಗಿದೆ..
ಹೌದು ವಿಜ್ಞಾನಿಗಳು ಕೋರೊನಾ ವಿರುದ್ಧ ಹೋರಾಟಕ್ಕಾಗಿ ಚೂಯಿಂಗ್ ಗಮ್ ಮೊರೆ ಹೋಗಿದ್ದಾರೆ. ಸಸ್ಯಜನ್ಯ ಪ್ರೋಟೀನ್ ಲೇಪಿತ ಚೂಯಿಂಗ್ ಗಮ್ ನ್ನು ಸೇವಿಸುವ ಮೂಲಕ ಕೊರೊನಾವೈರಸ್ ಹರಡುವುದನ್ನು ತಪ್ಪಿಸಬಹುದು ಎಂದು ಅಧ್ಯಯನವೊಂದು ವರದಿ ಮಾಡಿದೆ.
ಲಸಿಕೆ ನೀಡಿಕೆ ವಿಚಾರದಲ್ಲಿ 5ನೇ ಬಾರಿಗೆ ದಾಖಲೆ ಬರೆದ ಭಾರತ..!
ಮೊಲಿಕ್ಯುಲರ್ ಥೆರಪಿ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದರಲ್ಲಿ ಇದರ ವರದಿಯಾಗಿದೆ.. ಈ ACE2 ಚೀವಿಂಗಮ್ ಅಗೆಯುವ ಮೂಲಕ ಕೊರೊನಾ ಹರಡುವುದನ್ನು ತಡೆಯಬಹುದು ಎಂದು ಹೇಳಲಾಗಿದೆ. ಸದ್ಯ ಇದನ್ನ ಕ್ಲಿನಿಕಲ್ ಟೆಸ್ಟಿಂಗ್ ಗೆ ಕಳುಹಿಸಲಾಗಿದೆ. ಪ್ರಯೋಗಾರ್ಥವಾಗಿ ಕೆಲ ಕೋವಿಡ್ ರೋಗಿಗಳಿಗೆ ಈ ಗಮ್ ಅನ್ನು ನೀಡಿದಾಗ ಅವರ ಲಾವಾರಸದಲ್ಲಿನ ಕೊರೊನಾವೈರಸ್‌ನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಕಂಡು ಬಂದಿದೆ ಎಂದೂ ಕೂಡ ತಿಳಿದುಬಂದಿದೆ.
ಕೊರೊನಾವೈರಸ್ ಬಾಯಿಯ ಲಾಲಾರಸದಲ್ಲಿ ಅಡಗಿರುತ್ತದೆ. ಇದು ಕೆಮ್ಮಿದಾಗ, ಸೀನಿದಾಗ ವೇಗವಾಗಿ ಪ್ರಸರಣ ಹೊಂದುತ್ತದೆ. ಸಂಶೋಧಿಸಲಾದ ACE2 ಚೂಯಿಂಗ್ ಗಮ್ ಅಗೆಯುವ ಮೂಲಕ ಲಾಲಾರಸದಲ್ಲಿನ ವೈರಸ್‌ಗಳನ್ನು ಕೊಲ್ಲಬಹುದು ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕ ಹೆನ್ರಿ ಡೆನೀಯಲ್ ಹೇಳಿದ್ದಾರೆ.








